ದರ್ಶನ್ ಮತ್ತು ತರುಣ್ ಸುಧೀರ್ 
ಸಿನಿಮಾ ಸುದ್ದಿ

ಆಗಸ್ಟ್ 5 ರಂದು ಸೆಟ್ಟೇರಲಿದೆ ದರ್ಶನ್- ತರುಣ್ ಸುಧೀರ್ ಕಾಂಬಿನೇಷನ್ ಮತ್ತೊಂದು ಸಿನಿಮಾ!

ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಸಿನಿಮಾಗಾಗಿ ರೆಡಿಯಾಗುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಆ್ಯಕ್ಷನ್ ಸಿನಿಮಾಗಾಗಿ ದರ್ಶನ್ ಸಿದ್ಧಗೊಳ್ಳುತ್ತಿದ್ದಾರೆ.

ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾ ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಸಿನಿಮಾಗಾಗಿ ರೆಡಿಯಾಗುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಆ್ಯಕ್ಷನ್ ಸಿನಿಮಾಗಾಗಿ ದರ್ಶನ್ ಸಿದ್ಧಗೊಳ್ಳುತ್ತಿದ್ದಾರೆ.

ಸಿನಿಮಾಗೆ ಸದ್ಯಕ್ಕೆ ಡಿ-56 ಎಂದು 'ಟೈಟಲ್ ಇಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮ ಚಿತ್ರದ ಮುಹೂರ್ತವು ಮುಂಜಾನೆ ನಡೆಯಲಿದೆ, ನಂತರ ನಾವು ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖಚಿತಪಡಿಸಿದ್ದಾರೆ, ಅವರು ತಮ್ಮ ಹೋಮ್ ಬ್ಯಾನರ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್‌ ನಡಿಯಲ್ಲಿ ಯೋಜನೆಯನ್ನು ನಿರ್ಮಿಸುತ್ತಿದ್ದಾರೆ.

2020 ರಲ್ಲಿ ತರುಣ್ ಸುಧೀರ್ ಮತ್ತು ದರ್ಶನ್ ಜೋಡಿಯ ರಾಬರ್ಟ್ ಸಿನಿಮಾ  ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಹೀಗಾಗಿ ಈ ಜೋಡಿಯ ಮುಂದಿನ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.

ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾದ ಚಿತ್ರದ (ಡಿ 56) ಫಸ್ಟ್-ಲುಕ್  ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯನ್ನು ಒಳಗೊಂಡಿದೆ.

ನಟ ದರ್ಶನ್ ಅವರ ಶೀರ್ಷಿಕೆಯ ಕಮರ್ಷಿಯಲ್ ಎಂಟರ್‌ಟೈನರ್ ಇಂದಿನ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ ಮತ್ತು ಸಮಾಜಕ್ಕೆ ಸೂಕ್ತವಾದ ಸಂದೇಶವನ್ನು ಹೊಂದಿರುತ್ತದೆ.

ಕುರಿಗಳ ರಕ್ಷಣೆಯನ್ನು ತನ್ನ ಪ್ರಧಾನ ಕರ್ತವ್ಯವೆಂದು ನಾಯಿ ಪರಿಗಣಿಸುತ್ತದೆ ಮತ್ತು ಕುರಿಗಳನ್ನು ರಕ್ಷಿಸಲು ಅದು ತೆಗೆದುಕೊಳ್ಳುವ ತ್ಯಾಗವು ಅದರ ನಿಸ್ವಾರ್ಥ ಸ್ವಭಾವವನ್ನು ಪ್ರತಿನಿಧಿಸುತ್ತದೆ" ಎಂದು ನಿರ್ದೇಶಕ ತರುಣ್ ಸುದೀರ್ ತಿಳಿಸಿದ್ದಾರೆ.

ತಾರಾಗಣ ಮತ್ತು ತಾಂತ್ರಿಕ ತಂಡವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವ ನಿರ್ದೇಶಕರು ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್   ಆಯೋಜಿಸಿದ್ದಾರೆ. ನಂತರ ಹೈದರಾಬಾದ್‌ಗೆ ಹೋಗಲಿದೆ, ಅಲ್ಲಿ ಅವರು ಕೆಲವು ನಿರ್ಣಾಯಕ ಭಾಗಗಳನ್ನು ಕವರ್ ಮಾಡಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ದರ್ಶನ್ ಅಭಿನಯದ ಕ್ರಾಂತಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇದೇ ವರ್ಷ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT