ಝೈದ್ ಖಾನ್ 
ಸಿನಿಮಾ ಸುದ್ದಿ

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯವಿದೆ; ರಾಜಕೀಯ ಪ್ರವೇಶಕ್ಕಾಗಿ ಚಿತ್ರರಂಗಕ್ಕೆ ಬರುವ ಅವಶ್ಯಕತೆಯಿಲ್ಲ; 'ಬನಾರಸ್' ನಾಯಕ ಝೈದ್ ಖಾನ್

ತಂದೆ ಜಮೀರ್ ಅಹಮದ್ ಖಾನ್ ರಾಜಕಾರಣಿಯಾಗಿದ್ದರೂ ಝೈದ್ ಖಾನ್ ಸಿನಿಮಾ ರಂಗ ಆರಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶಿಸುವ ಉದ್ದೇಶದಿಂದಲೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ್ದೀರಾ ಎಂಬ ಮಾತನ್ನು ನಿರಾಕರಿಸಿದ್ದಾರೆ.

ತಂದೆ ಜಮೀರ್ ಅಹಮದ್ ಖಾನ್ ರಾಜಕಾರಣಿಯಾಗಿದ್ದರೂ ಝೈದ್ ಖಾನ್ ಸಿನಿಮಾ ರಂಗ ಆರಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶಿಸುವ ಉದ್ದೇಶದಿಂದಲೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ್ದೀರಾ ಎಂಬ ಮಾತನ್ನು ನಿರಾಕರಿಸಿದ್ದಾರೆ.

ನನ್ನ ತಂದೆ ಶಾಸಕರಾಗಿದ್ದರೂ ನಾನು ರಾಜಕೀಯ ಪ್ರವೇಶಿಸುವುದನ್ನು ಅವರು ಬಯಸುವುದಿಲ್ಲ, ರಾಜಕೀಯ ಎಂಬುದು ಅವರಿಗೆ ಕೊನೆಯಾಗಬೇಕು ಎಂಬ ಬಗ್ಗೆ ಸ್ಪಷ್ಟವಾಗಿದ್ದಾರೆ.

ಬಾಲ್ಯದಿಂದಲೂ ನಾನು ರಾಜಕೀಯದತ್ತ ಒಲವು ತೋರಿಲ್ಲ, ಅಧಿಕಾರದ ಆಸೆಯೂ ಇಲ್ಲ.  ಕಲೆಯೊಂದಿಗೆ ಬೆಳದು ಬಂದ  ನಾನು ಶಾಲೆಯಲ್ಲಿ ಆಗಾಗ್ಗೆ ನೃತ್ಯ ಮತ್ತು ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಆಗ  ನನಗೆ ಸಿಕ್ಕ ಚಪ್ಪಾಳೆ, ಮೆಚ್ಚುಗೆ ನನಗೆ ಖುಷಿ ಕೊಡುತ್ತಿತ್ತು. ಹಾಗಾಗಿ ಸಿನಿಮಾವೇ ನನ್ನ ಭವಿಷ್ಯ ಎಂದು ನಾನು ನಿರ್ಧರಿಸಿದೆ ಎಂದಿದ್ದಾರೆ ಝೈದ್ ಖಾನ್.

ಬನರಾಸ್ ಸಿನಿಮಾ ಮೂಲಕ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಝೈದ್ ಮುಂದಾಗಿದ್ದಾರೆ. ನವೆಂಬರ್ 4 ರಂದು ಸಿನಿಮಾ ರಿಲೀಸ್ ಆಗಲಿದೆ.  ನನ್ನ ರಾಜಕೀಯ ಪ್ರವೇಶದ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ.  ನನಗೆ ಅಂತಹ ಆಸಕ್ತಿ ಇಲ್ಲ. ಚಿತ್ರರಂಗಕ್ಕೆ ಬಂದು ಅದನ್ನು ಬಳಸಿಕೊಂಡು ನಂತರ ರಾಜಕೀಯಕ್ಕೆ ಬರುವ ಅಗತ್ಯವಿಲ್ಲ.

ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ನನಗಿದೆ. ಆದರೆ, ನನಗೆ ಆ ಆಸೆ ಇರಲಿಲ್ಲ. ನಾನು ಯಾವಾಗಲೂ ಚಿತ್ರರಂಗದಲ್ಲಿ ಇರಲು ಬಯಸುತ್ತೇನೆ. ನನ್ನ ಕುಟುಂಬದ ವ್ಯವಹಾರವನ್ನು  ನೋಡಿಕೊಳ್ಳಲು ಬಯಸುತ್ತೇನೆ.

ಅಗತ್ಯ ಸಂಪನ್ಮೂಲಗಳು ಮತ್ತು ಸಾಮರ್ಥ್ಯವಿದ್ದರೂ ತಮ್ಮ ಚೊಚ್ಚಲ ಚಿತ್ರಕ್ಕಾಗಿ ಸರಿಯಾದ ಯೋಜನೆ ಮತ್ತು ನಿರ್ದೇಶಕರನ್ನು ಆಯ್ಕೆ ಮಾಡಲು ಏಳು ವರ್ಷ ಸಮಯ ತೆಗೆದುಕೊಂಡಿತು, ಪ್ರತಿಯೊಬ್ಬ ನಟರಂತೆ, ನಾನು ಸರಿಯಾದ ರೀತಿಯ ನಿರ್ದೇಶಕರನ್ನು ಹುಡುಕುತ್ತಿದ್ದೆ, ಯಾರು ನನಗೆ ಉತ್ತಮ ಲಾಂಚ್ ನೀಡಬಹುದು ಎಂಬ ಹುಡುಕಾಟದಲ್ಲಿದ್ದೆ. ಆದರೆ ನನಗೆ ಒಳ್ಳೆಯ ನಿರ್ದೇಶಕರು ಸಿಕ್ಕಾಗಲೆಲ್ಲಾ ನನಗೆ ಒಳ್ಳೆಯ ಕಥೆ ಸಿಗಲಿಲ್ಲ. ಎರಡೂ ಸರಿಯಿದ್ದರೆ ಕಾಲ್ ಶೀಟ್ ಸಮಸ್ಯೆ ಎದುರಾಗುತ್ತಿತ್ತು.

ನನ್ನ ರಾಜಕೀಯ ಹಿನ್ನೆಲೆಯ ಬಗ್ಗೆ ತಿಳಿದಿದ್ದ  ಕೆಲವು ಚಲನಚಿತ್ರ  ನಿರ್ದೇಶಕರು ಅದನ್ನು ತಮ್ಮ ಲಾಭಕ್ಕಾಗಿ ಬಳಸಲು ಬಯಸಿದ್ದರು. ಆರ್ಥಿಕ ಬೆಂಬಲ ಅಥವಾ ಪ್ರಭಾವಿ ಹಿನ್ನೆಲೆ ಇಲ್ಲದ ಯುವ ಪ್ರತಿಭೆಗಳ ಅವಸ್ಥೆಯನ್ನು ನಾನು ಊಹಿಸಬಲ್ಲೆ ಎಂದು ಝೈದ್ ಖಾನ್ ತಿಳಿಸಿದ್ದಾರೆ.

"ನನ್ನಸಿನಿಮಾಗಾಗಿ ನಾನು ಭಾರತದಾದ್ಯಂತ 150 ಕ್ಕೂ ಹೆಚ್ಚು ನಿರ್ದೇಶಕರನ್ನು ಭೇಟಿ ಮಾಡಿದ್ದೇನೆ, ಆದರೆ ನಿರ್ದೇಶಕ ಜಯತೀರ್ಥ ಬರುವವರೆಗೂ ಯಾರೊಂದಿಗೂ ಕೆಲಸ ಮಾಡಲಿಲ್ಲ. ಅವರು ಪ್ರಾಮಾಣಿಕ ಮತ್ತು ಡೆಡಿಕೇಟೆಡ್ ನಿರ್ದೇಶಕರು. ತಮ್ಮ ನಟರಿಗೆ ಮಗುವಿನಂತೆ ದೃಶ್ಯಗಳನ್ನು ವಿವರಿಸುವ ಅವರಿಗೆ  ರಂಗಭೂಮಿ ಹಿನ್ನೆಲೆಯಿಂದ  ಬಂದ ಅನುಭವವಿವಿದೆ.  ಜನರನ್ನು ನಿಭಾಯಿಸಲು ಅವರಿಗೆ ತಿಳಿದಿದೆ. ಜಯತೀರ್ಥ ಅವರು ನನಗೆ ಬನಾರಸ್‌ನೊಂದಿಗೆ ಅತ್ಯುತ್ತಮ ಸಿನಿಮಾ ನೀಡಿದ್ದಾರೆ.

ದೆ. 2013ರಲ್ಲಿ ಸಿನಿಮಾ ರಂಗಕ್ಕೆ ಬರಬೇಕು ಎಂದು ನಿರ್ಧರಿಸಿ ಮುಂಬಯಿಯ ಅನುಪಮ್‌ ಖೇರ್‌ ಅಕಾಡೆಮಿಯಲ್ಲಿ ನಟನಾ ತರಬೇತಿಗೆ ಸೇರಿಕೊಂಡು ಸಿದ್ಧವಾದೆ. ಅದಾದ ಮೇಲೆ ಜಯತೀರ್ಥ ಅವರ ಜತೆ ಪ್ರಿ ಪ್ರೊಡಕ್ಷನ್‌ ಹಂತದಲ್ಲಿಯೂ ಕೆಲಸ ಮಾಡಿದೆ. ಆಗ ನಟನೆ, ಸ್ಕ್ರಿಪ್ಟ್ ಸೇರಿದಂತೆ ಹಲವು ವಿಷಯಗಳನ್ನು ತಿಳಿದುಕೊಂಡೆ. ಅವೆಲ್ಲವೂ ನನಗೆ ಈಗ ಸಹಾಯಕ್ಕೆ ಬರುತ್ತಿವೆ’ ಎಂದಿದ್ದಾರೆ ಝೈದ್‌ ಖಾನ್‌.

ಬನಾರಸ್ ಬಿಡುಗಡೆಗೂ ಮುನ್ನವೇ ಝೈದ್ ಖಾನ್ ಕೈಯ್ಯಲ್ಲಿ ಎರಡು-ಮೂರು ಸಿನಿಮಾಗಳಿದ್ದು, ಶೀಘ್ರದಲ್ಲೇ ಅವುಗಳು ಆರಂಭಗೊಳ್ಳಲಿವೆ, ಬನಾರಸ್ ಸಿನಿಮಾ ರಿಲೀಸ್ ನಂತರ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ವಿವರ ನೀಡುವುದಾಗಿ ಝೈದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT