ಸಿನಿಮಾ ಸುದ್ದಿ

ಹೊಸ ಮುಖಗಳು ಕ್ಲಿಕ್ ಆಗಲು 'ಕ್ರೈಮ್ ಥ್ರಿಲ್ಲರ್‌' ಚಿತ್ರಗಳು ಉತ್ತಮ: ಶ್ರೀನಿವಾಸ್ ರಾಜು

Manjula VN

ದಂಡುಪಾಳ್ಯ ಚಿತ್ರದ ಮೂಲಕ ಹೆಸರು ಮಾಡಿರುವ ನಿರ್ದೇಶಕ ಶ್ರೀನಿವಾಸ್ ರಾಜು ಅವರು ಇದೀಗ ಹುಬ್ಬಳ್ಳಿ ಡಾಬಾ ಎಂ ಚಿತ್ರವನ್ನು ನಿರ್ದೇಶಿಸಿದ್ದು, ಐದು ವರ್ಷಗಳ ಬಳಿಕ ಕೊಲೆ ರಹಸ್ಯದೊಂದಿಗೆ ಸ್ಯಾಂಡಲ್'ವುಡ್'ಗೆ ಮರಳುತ್ತಿದ್ದಾರೆ.

ಹುಬ್ಬಳ್ಳಿ ಡಾಬಾ ಒಂದು ಮರ್ಡರ್‌ ಮಿಸ್ಟರಿ ಕಥೆಯಾಗಿದ್ದು, ಇದೇ ನವೆಂಬರ್ 11ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.  

"ಚಿತ್ರವು ಸತ್ಯ ಘಟನೆಯನ್ನು ಆಧರಿಸಿದೆ, ಇದು 1 ದಿನದಲ್ಲಿ ನಡೆಯುವ ಕಥೆ ಇದಾಗಿದ್ದು, ಮೂರು ಕಥೆಗಳು ಡಾಬಾ ಸುತ್ತಲೂ ಸುತ್ತುತ್ತದೆ ಎಂದು ಚಿತ್ರದ ಕುರಿತು ನಿರ್ದೇಶಕ ಶ್ರೀನಿವಾಸರಾಜು ಹೇಳಿದ್ದಾರೆ.

ಕೊಲೆ ರಹಸ್ಯ ಚಿತ್ರಗಳಲ್ಲಿ ಕೆಲಸ ಮಾಡುವುದು ನನಗೆ ಸಂತಸ ತರುತ್ತದೆ. ಏಕೆಂದರೆ, ಅದರಲ್ಲಿ ನಾಟಕವಿರುತ್ತದೆ. ಹಿಂಸೆಯ ಪರಿಮಾಣವನ್ನು ಅದು ಹೇಳುತ್ತದೆ ಎಂದಿದ್ದಾರೆ.

ಲವ್ ಸ್ಟೋರಿಗಳು ಮತ್ತು ಕಮರ್ಷಿಯಲ್ ಎಂಟರ್‌ಟೈನರ್‌ಗಳು ಕೇವಲ ಸ್ಟಾರ್‌ಗಳಿಗೆ ಮಾತ್ರ ಎಂಬುದು ನನ್ನ ಭಾವನೆ. “ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಥ್ರಿಲ್ಲರ್‌ ಚಿತ್ರಗಳು ಅತ್ಯುತ್ತಮ ಪ್ರಕಾರಗಳಾಗಿವೆ ಎಂದು ನಾನು ನಂಬುತ್ತೇನೆ. ದೀರ್ಘ ವಿರಾಮ ತೆಗೆದುಕೊಂಡು ಪ್ರೇಕ್ಷಕರ ಮನಸ್ಸಿನಿಂದ ದೂರಾಗಲು ನಾನು ಬಯಸಲಿಲ್ಲ. ಸಾಂಕ್ರಾಮಿಕ ರೋಗದ ಬಳಿಕ ಚಿತ್ರದ ಕುರಿತು ಕೆಲಸ ಆರಂಭಿಸಿದ್ದೆ.

ಚಿತ್ರದ ವಿಶೇಷ ಸಂದರ್ಭದಲ್ಲಿ 'ದಂಡುಪಾಳ್ಯ' ಗ್ಯಾಂಗ್ ನವರ ಸನ್ನಿವೇಶಗಳು ಕೂಡ ಬರುತ್ತದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ಕನೆಕ್ಷನ್ ಅನ್ನೋದನ್ನು ಸಿನಿಮಾದಲ್ಲಿ ನೋಡಬೇಕು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ' ಎಂದರು ತಿಳಿಸಿದ್ದಾರೆ.

ಚಿತ್ರವು ನವೀನ್ ಚಂದ್ರ ಅವರ ಕನ್ನಡದ ಚೊಚ್ಚಲ ಚಿತ್ರವಾಗಿದ್ದು, ದಿವ್ಯಾ ಪಿಳ್ಳೈ, ಅನನ್ಯಾ ಸೇನ್‌ಗುಪ್ತ, ರವಿಶಂಕರ್ ಮತ್ತು ರಾಜಾ ರವೀಂದರ್ ಅವರು ಚಿತ್ರದಲ್ಲಿ ನಟಿಸಿದ್ದಾರೆ.

SCROLL FOR NEXT