ಸಿನಿಮಾ ಸುದ್ದಿ

ನಿರ್ಮಾಪಕರೊಬ್ಬರ ಮಗನಾಗಿ ಸಿನಿಮಾ ಇಂಡಸ್ಟ್ರಿಗೆ ಬರುವುದು ಎಂದಿಗೂ ಸುಲಭವಲ್ಲ: ನಟ ಶ್ರೇಯಸ್ ಮಂಜು

Ramyashree GN

ನಿರ್ಮಾಪಕ ಕೆ. ಮಂಜು ಅವರ ಮಗನಾಗಿದ್ದರೂ, ಶ್ರೇಯಸ್ ಮಂಜು ಅವರು ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳುವಾಗ ಹಲವು ಹೋರಾಟಗಳನ್ನು ಮಾಡಿರುವುದಾಗಿ ಹೇಳುತ್ತಾರೆ.

'ಸಾಮಾನ್ಯವಾಗಿ ಸ್ಟಾರ್‌ಗಳ ಮಕ್ಕಳಿಗೆ ಫ್ಯಾನ್ ಫಾಲೋಯಿಂಗ್ ಸಿಗುತ್ತದೆ. ಆದರೆ, ನಿರ್ಮಾಪಕರ ಮಕ್ಕಳಿಗೆ ಹಾಗಲ್ಲ. ಇದು ಯಾವಾಗಲೂ ಕೇಕ್‌ವಾಕ್ (ಸುಲಭವಲ್ಲ) ಆಗಿರುವುದಿಲ್ಲ. ನಿರ್ಮಾಪಕರ ಮಕ್ಕಳಾಗಿರುವುದರಿಂದ ಶೋಆಫ್ ನೀಡಲು ನಾವು ಉದ್ಯಮಕ್ಕೆ ಪ್ರವೇಶಿಸುತ್ತೇವೆ ಎಂಬ ಊಹೆ ಇದೆ. ಆದರೆ, ಅದು ಸತ್ಯವಲ್ಲ. ನಾನು ಸಂಪೂರ್ಣವಾಗಿ ಉತ್ಸಾಹದಿಂದ ಇಲ್ಲಿದ್ದೇನೆ ಮತ್ತು ಅದನ್ನು ನನ್ನ ಸ್ವಂತ ಪ್ರತಿಭೆಯಿಂದ ಸಾಬೀತುಪಡಿಸಲು ಬಯಸುತ್ತೇನೆ' ಎನ್ನುತ್ತಾರೆ.

ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್, ಮೂರು ವರ್ಷಗಳ ನಂತರ ರಾಣಾ ಚಿತ್ರದ ಮೂಲಕ ಮತ್ತೆ ತೆರೆಗೆ ಬಂದಿದ್ದಾರೆ. 'ವಾಸ್ತವವಾಗಿ, ನಾನು ರಾಣಾಗಿಂತ ಮುಂಚೆಯೇ ವಿಷ್ಣು ಪ್ರಿಯಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೆ. ಆದರೆ, ನಾವು ಮೊದಲು ರಾಣಾನನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ' ಎಂದು ಅವರು ಹೇಳುತ್ತಾರೆ.

ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಅವರು ವಿಷ್ಣು ಪ್ರಿಯಾ ಸಿನಿಮಾದಲ್ಲಿ ನನ್ನ ಅಭಿನಯವನ್ನು ನೋಡಿದರು. ಹೀಗಾಗಿ ರಾಣಾ ಸಿನಿಮಾದ ನಿರ್ದೇಶನವನ್ನು ನಂದ ಕಿಶೋರ್ ಅವರಿಗೆ ನೀಡಿದರು. ಈ ಸಿನಿಮಾ ಈ ವಾರ ಬಿಡುಗಡೆಯಾಗಲಿದೆ ಎಂದು ಶ್ರೇಯಸ್ ಮಂಜು ಹೇಳಿದರು.

ರಾಣಾ ಸಿನಿಮಾದಲ್ಲಿ ಶ್ರೇಯಸ್ ಮಂಜು ಅವರು ಮಹತ್ವಾಕಾಂಕ್ಷೆಯ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇದನ್ನು ಕಮರ್ಷಿಯಲ್ ಎಂಟರ್‌ಟೈನರ್ ಎನ್ನುವ ಶ್ರೇಯಸ್, ಇದು ಉತ್ತಮ ಥ್ರಿಲ್ಲರ್ ಮಾತ್ರವಲ್ಲದೆ ನೈಜವಾದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದೆ. 'ಫೈಟ್‌ಗಳ ವಿವಿಧ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದರೂ, ನಾನು ಇನ್ನೂ ಸಣ್ಣ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇನೆ ಮತ್ತು ಸ್ಟಂಟ್ ಎಪಿಸೋಡ್‌ಗಳಿಗೆ ಪರಿಣತಿ ಪಡೆದಿದ್ದೇನೆ. ಇದು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ' ಎಂದು ಹೇಳಿದರು.

ಸಿನಿಮಾದಲ್ಲಿ ಏಕ್ ಲವ್ ಯಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಚಂದ್ರು ಅವರ ಛಾಯಾಗ್ರಹಣವಿದ್ದು, ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.

SCROLL FOR NEXT