ಸ್ಯಾಂಡಲ್ ವುಡ್ ನಟ ಪ್ರಮೋದ್. 
ಸಿನಿಮಾ ಸುದ್ದಿ

ಪ್ರಶಾಂತ್ ನೀಲ್- ಪ್ರಭಾಸ್ ಅವರ 'ಸಲಾರ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಪ್ರಮೋದ್?

ಸ್ಯಾಂಡಲ್ ವುಡ್ ನಟ ಪ್ರಮೋದ್ ಅವರಿಗೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಚಿತ್ರದಲ್ಲಿ ಪ್ರಮೋದ್ ಅವರು ನಟಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಸ್ಯಾಂಡಲ್ ವುಡ್ ನಟ ಪ್ರಮೋದ್ ಅವರಿಗೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಚಿತ್ರದಲ್ಲಿ ಪ್ರಮೋದ್ ಅವರು ನಟಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಸಲಾರ್.. ಬಾಹುಬಲಿ ಸಿನಿಮಾದ ಮೂಲಕ ವಿಶ್ವಮಟ್ಟದಲ್ಲಿ ಮಿಂಚಿದ ನಟ ಪ್ರಭಾಸ್, ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಸೇರಿ ಮಾಡುತ್ತಿರುವ ಸಿನಿಮಾ ಆಗಿದೆ.

ಪ್ರಭಾಸ್ ಅಭಿನಯಕ್ಕೆ ಪ್ರಶಾಂತ್ ನೀಲ್ ಕಲ್ಪನೆಗೆ ಕನ್ನಡ ಚಿತ್ರರಂಗದ ಹೊನ್ನಿನ ಚಿತ್ರ ನಿರ್ಮಾಣದಂತ ಸಂಸ್ಥೆ ಹೊಂಬಾಳೆ ಫಿಲಂಸ್ ದಾರಿ ದೀಪವಾಗಿದೆ.

ಪ್ರಮೋದ್  ಸಿರಿಯಲ್ ಲೋಕದಲ್ಲಿ ಮಿಂಚಿ ಸ್ಯಾಂಡಲ್​ವುಡ್ ಸಿಲ್ವರ್​​ ಸ್ಕ್ರೀನ್​​​​ಗೆ ಬಲಗಾಲಿಟ್ಟ ಪ್ರತಿಭೆ.. ಗೀತಾ ಬ್ಯಾಂಗಲ್ ಸ್ಟೋರ್ , ಪ್ರಿಮಿಯರ್ ಪದ್ಮಿನಿ , ಮತ್ತೆ ಉದ್ಭವ ಸಿನಿಮಾದಲ್ಲಿ ಮಿಂಚಿರುವ ಪ್ರಮೋದ್ ಈಗ ಇಂಗ್ಲೀಷ್ ಮಂಜ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

ಹೀರೋ ಆಗುವುದರ ಜೊತೆ ವಿಲನ್ ಆಗಿಯೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿರೋ ಪ್ರಮೋದ್ ಅವರು, ದುನಿಯಾ ಸೂರಿ ನಿರ್ದೇಶನದ ‘‘ಬ್ಯಾಡ್ ಮ್ಯಾನರ್ಸ್’’ ಸಿನಿಮಾದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ.

ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ ಸಿನಿಮಾದಲ್ಲಿ ಪ್ರಮೋದ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಕೆ.ಆರ್.ಜಿ ಪ್ರೋಡಕ್ಷನ್​​ನಲ್ಲಿ ಮೂಡಿಬಂದಿರೋ ರತ್ನನ್ ಪ್ರಪಂಚ ಸಿನಿಮಾದ ಟ್ರೈಲರ್​ನಲ್ಲಿ ಪ್ರಮೋದ್ ಫರ್ಫಾರ್ಮೆನ್ಸ್'ನ್ನು ನೋಡಿದ ಪ್ರಶಾಂತ್ ನೀಲ್​ ಅವರು, ಪ್ರಮೋದ್ ಅವರಿಗೆ ಸಲಾರ್ ಚಿತ್ರದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಮಾಜಿ ಸಿಇಸಿಗಳಿಗೆ ರಾಜ್ಯಪಾಲ, ಸಚಿವ ಸ್ಥಾನದ ಗಿಫ್ಟ್: ಕಾಂಗ್ರೆಸ್ ವಿರುದ್ಧ ಹಳೆಯ ಬಹುಮಾನಗಳ ಪಟ್ಟಿ ಬಿಚ್ಚಿಟ್ಟ ಬಿಜೆಪಿ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?