ಸದ್ಯಕ್ಕೆ 'ಸಲಾರ್' ದೂರ: ಅಭಿಮಾನಿಗಳಿಗೆ ನಿರಾಸೆ; ಹೊಸ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್!

ಕೆಜಿಎಫ್ 2 ನಂತರ ಅಲ್ ಟೈಮ್ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಚಿತ್ರವನ್ನು ನಿರ್ಮಿಸುತ್ತಿದ್ದು ಈ ವರ್ಷವೇ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು.
ಸಲಾರ್ ಚಿತ್ರದ ಪೋಸ್ಟರ್

ಆದರೆ ಇದೀಗ ಹೊಂಬಾಳೆ ಫಿಲ್ಮ್ಸ್ ಕೊಟ್ಟಿರುವ ಲೇಟೆಸ್ಟ್ ಅಪ್ಡೋಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹೌದು ಸಲಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿತ್ತು ಚಿತ್ರ 2023ರ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಸಹ ಚಿತ್ರಕ್ಕೆ ನಾನಾ ಕಸರತ್ತು ಮಾಡುತ್ತಿದ್ದಾರೆ. ಇನ್ನುಚ ಬಾಹುಬಲಿ ಬಳಿಕ ಪ್ರಭಾಸ್ ನಟಿಸಿದ್ದ ಸಾಹೋ, ರಾಧೆ ಶ್ಯಾಮ್ ಸೋಲು ಕಂಡಿದ್ದವು. ಇದೀಗ ಸಲಾರ್ ಮೂಲಕ ಒಂದು ಬಹುದೊಡ್ಡ ಗೆಲುವು ನೀಡಲು ಪ್ರಭಾಸ್ ಸಹ ಪ್ರಯತ್ನಿಸುತ್ತಿದ್ದಾರೆ. 

ಪ್ರಭಾಸ್ ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣವಿದ್ದು ರವಿಬಸ್ರೂರ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com