ಪ್ರಕಾಶ್ ರಾಜ್ 
ಸಿನಿಮಾ ಸುದ್ದಿ

ನನ್ನ ರಾಜಕೀಯ ನಿಲುವುಗಳಿಂದ ವೃತ್ತಿ ಜೀವನದ ಮೇಲೆ ಎಫೆಕ್ಟ್; ಕೆಲವರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲ: ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್‌ ಕರಿಯರ್‌ ಈಗ ಮೊದಲಿನಂತೆ ಇಲ್ಲ. ಅವರ ರಾಜಕೀಯ ನಿಲುವುಗಳು, ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿವೆ. ಸ್ವತಃ ಅದನ್ನು ಪ್ರಕಾಶ್ ಹೇಳಿಕೊಂಡಿದ್ದಾರೆ

ಬಹುಭಾಷಾ ನಟ ಪ್ರಕಾಶ್ ರಾಜ್‌ ಕರಿಯರ್‌ ಈಗ ಮೊದಲಿನಂತೆ ಇಲ್ಲ. ಅವರ ರಾಜಕೀಯ ನಿಲುವುಗಳು, ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿವೆ. ಸ್ವತಃ ಅದನ್ನು ಪ್ರಕಾಶ್ ಹೇಳಿಕೊಂಡಿದ್ದಾರೆ.

ಸಹ ಕಲಾವಿದರು ತನ್ನೊಂದಿಗೆ ನಟಿಸಲು ಭಯಪಡುತ್ತಾರೆ ಎಂದು ನಟ ಪ್ರಕಾಶ್​ ರಾಜ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ರಾಜಕೀಯ ದೃಷ್ಟಿಕೋನವೇ ಇದಕ್ಕೆ ಕಾರಣ. ಆದರೆ ನಾನು ಯಾವುದಕ್ಕೂ ಚಿಂತಿಸುವುದಿಲ್ಲ ಎಂದಿದ್ದಾರೆ.

ನನ್ನ ಜೊತೆ ನಟಿಸಿದರೆ ಅಪಾಯದಲ್ಲಿ ಸಿಲುಕಬೇಕಾಗುತ್ತದೆ ಎಂಬುದು ಕೆಲ ಕಲಾವಿದರ ಆತಂಕವಾಗಿದೆ. ನಾನು ಅವರ ಅಸೌಖ್ಯವನ್ನು ಅರ್ಥ ಮಾಡಿಕೊಳ್ಳಬಲ್ಲೆ ಮತ್ತು ನನ್ನ ಜೊತೆ ನಟಿಸುವುದರಿಂದ ಅಂತರ ಕಾಯ್ದುಕೊಂಡರೂ ನಾನು ಪಶ್ಚಾತ್ತಾಪ ಪಡುವುದಿಲ್ಲ ಎಂದು ಪ್ರಕಾಶ್​ ರಾಜ್​ ತಿಳಿಸಿದ್ದಾರೆ.

ತಮ್ಮನ್ನು ತಾವು ಸಮರ್ಥಿಸಿಕೊಂಡ ಪ್ರಕಾಶ್ ರಾಜ್, ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇನೆ. ನಾನು ನಂಬಿರುವ ಸಿದ್ಧಾಂತಗಳಿಂದ ನಾನು ಹಿಂದೆ ಸರಿದರೆ, ಅದು ಇತರರಿಗೆ ಲಾಭವಾಗುತ್ತದೆ. ಹೀಗಾಗಿ ಅದು ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಇತರೆ ನಟರ ವಿರುದ್ಧ ನಾನು ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದರು.

ನಾನು ಈ ಬಗ್ಗೆ ವಿಷಾದಿಸುವುದಿಲ್ಲ. ಏಕೆಂದರೆ ನನ್ನ ಪರಂಪರೆಯು ನನ್ನ ತೆರೆಯ ಮೇಲಿನ ಕೆಲಸಕ್ಕಿಂತ ಹೆಚ್ಚಾಗಿರಬೇಕು ಎಂದು ಬಯಸುತ್ತೇನೆ. ಈಗ ನನಗೆ ಯಾರು ಯಾರೆಂದು ತಿಳಿದಿದೆ. ನಾನು ಹೆಚ್ಚು ವಿಮೋಚನೆ ಹೊಂದಿದ್ದೇನೆ. ನಾನು ನನ್ನ ಧ್ವನಿಯನ್ನು ಎತ್ತದಿದ್ದರೆ, ನನ್ನ ಪಾತ್ರಗಳಿಂದಾಗಿ ಮಾತ್ರ ನಾನು ಉತ್ತಮ ನಟ ಎಂದು ಗುರುತಿಸಲ್ಪಡುತ್ತಿದ್ದೆ. ಆಗ ನನ್ನ ವ್ಯಕ್ತಿತ್ವ ಜನರಿಗೆ ಗೊತ್ತಾಗುತ್ತಿರಲಿಲ್ಲ. ಹೀಗೆ ಮಾಡುವುದರಿಂದ ಖರ್ಚು ಬರುತ್ತದೆ. ಆದರೆ ನಾನು ಅದನ್ನು ನಿಭಾಯಿಸಬಲ್ಲೆ..' ಎಂದಿದ್ದಾರೆ ನಟ ಪ್ರಕಾಶ್ ರಾಜ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT