ಸಿನಿಮಾ ಸುದ್ದಿ

ಪ್ರಜ್ವಲ್ ದೇವ್ ರಾಜ್ ಮುಂದಿನ ಸಿನಿಮಾದಲ್ಲಿ ಸಂದೇಶಗಳಿಲ್ಲ, ಮನರಂಜನೆಯದ್ದೇ "ಅಬ್ಬರ"!

Srinivas Rao BV

ಬೆಂಗಳೂರು: ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾ ಬಗ್ಗೆ ದೀರ್ಘಾವಧಿಯಿಂದ ಹೆಚ್ಚು ನಿರೀಕ್ಷೆಗಳಿವೆ. ಪ್ಯಾಂಡಮಿಕ್ ಅವಧಿಯಲ್ಲೇ ಪೂರ್ಣಗೊಂಡಿದ್ದ, ರಾಮ್ ನಾರಾಯಣ್ ಅವರ ನಿರ್ದೇಶನದ ಅಬ್ಬರ ಸಿನಿಮಾ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಇಷ್ಟವಾಗುವ ರೀತಿಯಲ್ಲಿರಲಿದೆ ಎನ್ನುತ್ತಾರೆ ಪ್ರಜ್ವಲ್ ದೇವರಾಜ್.

ಬಹಳ ಹಿಂದೆಯೇ ಸಿನಿಮಾ ಡಬ್ಬಿಂಗ್ ಭಾಗವೂ ಮುಕ್ತಾಯಗೊಂಡಿದ್ದು, ಬಾಕಿ ಉಳಿದಿದ್ದ ಹಾಡಿನ ಭಾಗಷ್ಟೇ ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ. 

ನ.18 ರಂದು ಸಿನಿಮಾ ಬಿಡುಗಡೆಗೆ ಸಜ್ಜುಗೊಂಡಿದ್ದು, ಯಾವುದೇ ಉದ್ದೇಶಿತ ಸಂದೇಶಗಳಿಲ್ಲದ ಅಪ್ಪಟ ಮನರಂಜನೆಯ ಚಿತ್ರ ಎಂದು ಪ್ರಜ್ವಲ್ ಅಭಿಪ್ರಾಯಪಟ್ಟಿದ್ದು, ಪೂರ್ವಗ್ರಹಿಕೆಗಳಿಲ್ಲದೇ ಸೀದಾ ಥಿಯೇಟರ್ ಗಳಿಗೆ ಬಂದು ಸಿನಿಮಾವನ್ನು ಆನಂದಿಸುವಂತಹ ಚಿತ್ರ ಇದಾಗಿದೆ, ಈ ರೀತಿಯ ಸಿನಿಮಾ ಮಾಡಿ ಹಲವು ವರ್ಷಗಳಾಗಿತ್ತು.   ವಿಷಯ-ಆಧಾರಿತ ಕಥೆಗಳು ಮತ್ತು ಹೊಸ ರೀತಿಯ ಕಥೆಗಳ ನಡುವೆ, ಈ ರೀತಿಯ ಸಿನಿಮಾಗಳನ್ನೂ ಜನ ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಪ್ರಜ್ವಲ್. 

ಅಬ್ಬರ ಸೇಡಿನ ಕಥೆಯಾಗಿದ್ದು, ಅದಕ್ಕೆ ಹಾಸ್ಯದ ಮತ್ತೊಂದು ಮುಖವೂ ಇದೆ. ಕಥೆಯಲ್ಲಿ ಸಾಹಸಮಯ ದೃಶ್ಯಗಳಿದ್ದು, ರವಿಶಂಕರ್, ಶೋಭ್ ರಾಜ್ ಅವರಂತಹ ವಿಲ್ಲನ್ ಪಾತ್ರಧಾರಿಗಳಿದ್ದರೂ ಅವರನ್ನು ನಕಾರಾತ್ಮಕ ಪಾತ್ರಗಳಲ್ಲಿ ತೋರಿಸಿಲ್ಲ. 

ಗೋವಿಂದ ಗೌಡ ಹಾಗೂ ವಿಜಯ್ ಚೆಂಡೂರ್ ಅವರ ಹಾಸ್ಯವನ್ನು ಮಕ್ಕಳು ಇಷ್ಟಪಡುತ್ತಾರೆ ಎಂದು ಪ್ರಜ್ವಲ್ ಹೇಳಿದ್ದಾರೆ. 

ನಾನು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹಲವು ತಿರುವುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ನನ್ನದು ಬಹುತೇಕ ತ್ರಿಪಾತ್ರಾಭಿನಯವಾಗಿದೆ ರಾಜ್ ಶ್ರೀ ಪೊನ್ನಪ್ಪ, ಲೇಖಾ ಚಂದ್ರ ಹಾಗೂ ನಿಮಿಕಾ ರತ್ನಾಕರ್ ಅವರು ನಾಯಕರಿಯರ ಪಾತ್ರದಲ್ಲಿ ನಟಿಸಿದ್ದಾರೆ. ಅಬ್ಬರ ಸಿನಿಮಾವನ್ನು ಸಿ&ಎಂ ಮೂವಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು ರವಿ ಬಸ್ರೂರ್ ಹಾಗೂ ಜೆಕೆ ಗಣೇಶ್ ಅವರ ಸಿನಿಮೆಟೋಗ್ರಾಫಿ ಹೊಂದಿದೆ. 

SCROLL FOR NEXT