ರಿಷಿ ಮತ್ತು ಪ್ರಶಾಂತ್ ರಾಜಪ್ಪ 
ಸಿನಿಮಾ ಸುದ್ದಿ

'ಕವಲು ದಾರಿ' ರಿಷಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜಪ್ಪ

ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಪ್ರಶಾಂತ್ ರಾಜಪ್ಪ, ಸಂಭಾಷಣೆ ಬರಹಗಾರರಾಗಿ ಜನಪ್ರಿಯತೆ ಗಳಿಸಿದರು. ಕವಲುದಾರಿ ಖ್ಯಾತಿಯ ರಿಷಿಯನ್ನು ಒಳಗೊಂಡ ಹಾಸ್ಯ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ

ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಪ್ರಶಾಂತ್ ರಾಜಪ್ಪ, ಸಂಭಾಷಣೆ ಬರಹಗಾರರಾಗಿ ಜನಪ್ರಿಯತೆ ಗಳಿಸಿದರು. ಕವಲುದಾರಿ ಖ್ಯಾತಿಯ ರಿಷಿಯನ್ನು ಒಳಗೊಂಡ ಹಾಸ್ಯ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪ್ರಶಾಂತ್‌ ರಾಜಪ್ಪ ಈಗ ನಿರ್ದೇಶಕನ ಕ್ಯಾಪ್‌ ತೊಡುತ್ತಿದ್ದು, ನಟ ರಿಷಿಗೆ ಹೊಸದೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಒಂದು ವರ್ಷ ಸಂಭಾಷಣೆ ಬರೆಯುವುದರಿಂಗ ಬಿಡುವು ಪಡೆದ ಪ್ರಶಾಂತ್ ನಿರ್ದೇಶನದತ್ತ ಸಂಪೂರ್ಣ ಗಮನ ಹರಿಸಿದ್ದಾರೆ.

‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದ ಪ್ರಮುಖ ಸಿನಿಮಾಗಳು. ಇದರ ಜತೆಗೆ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಮಾಡಿದ್ದ ಇವರು, ಗುರುಪ್ರಸಾದ್‌ ಅವರ ಜತೆ ಸಹ ನಿರ್ದೇಶಕರಾಗಿ ದುಡಿದ ಅನುಭವ ಹೊಂದಿದ್ದಾರೆ.

‘ನಾನು ಸಹ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿಯಾದವನು. ಬಹಳ ದಿನಗಳಿಂದಲೂ ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅದೀಗ ಈಡೇರುತ್ತಿದೆ. ನನ್ನ ಮೊದಲ ಸಿನಿಮಾಗೆ ರಿಷಿ ನಾಯಕರಾಗಿದ್ದಾರೆ. ಇದೊಂದು ಕಾಮಿಡಿ ಎಮೋಶನಲ್‌ ಡ್ರಾಮಾ ಕಥೆ.

ಇದರಲ್ಲಿ ಎರಡು ಪಾತ್ರಗಳು ಪ್ರಮುಖವಾಗಿದ್ದು, ಅವುಗಳ ನಡುವೆ ನಡೆಯುವಂತಹ ಘಟನೆಗಳನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಮೂರರ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ರಿಷಿ ಮಾತ್ರ ಆಯ್ಕೆಯಾಗಿದ್ದಾರೆ.  ನಾನು ರಿಷಿ ಅವರ ಹಾಸ್ಯಪ್ರಜ್ಞೆಯನ್ನು ಇಷ್ಟಪಡುತ್ತೇನೆ,  ಅವರು ಭಾವನೆಗಳೊಂದಿಗೆ ಬೆಸೆದುಕೊಳ್ಳುತ್ತಾರೆ. ಚಿತ್ರದಲ್ಲಿ ನಾನು ಸ್ಕೆಚ್ ಮಾಡಿರುವ ಪಾತ್ರ ಅವರಿಗೆ ಸರಿಯಾಗಿ ಹೊಂದುತ್ತಾರೆ ಎಂದು ಪ್ರಶಾಂತ್ ತಿಳಿಸಿದ್ದಾರೆ.

ಮೊದಲ ಬಾರಿಗೆ ನಿರ್ದೇಶಕರು ಪ್ರಕಾಶ್ ಬೆಳವಾಡಿ ಅವರನ್ನು ಪ್ರಮುಖ ಪಾತ್ರಕ್ಕಾಗಿ ಸಂಪರ್ಕಿಸಿದ್ದಾರೆ. "ನಾನು ಪ್ರಕಾಶ್ ಸರ್ ಅವರಿಗೆ ಕಥೆ  ಹೇಳಿದ್ದೇನೆ  ಅವರ ಒಪ್ಪಿಗೆಗಾಗಿ ನಾನು ಕಾಯುತ್ತಿದ್ದೇನೆ, ನವೆಂಬರ್ 24 ರಂದು ಮುಹೂರ್ತವನ್ನು ನಡೆಸಲು ನಿರ್ದೇಶಕರು ಯೋಜಿಸುತ್ತಿದ್ದು, ಜನವರಿ 2023 ರಲ್ಲಿ ಶೂಟಿಂಗ್ ಆರಂಭವಾಗಲಿದೆ, ಉಳಿದಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

"ಇಡೀ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಕೆಲವು ಭಾಗಗಳನ್ನು ನಗರದ ಹೊರಗೆ ಚಿತ್ರೀಕರಿಸಲಾಗುವುದಾಗಿ ಪ್ರಶಾಂತ್ ಹೇಳಿದ್ದಾರೆ. ಪ್ರಶಾಂತ್ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅಶೋಕ್ (ಲವ್ ಬರ್ಡ್ಸ್) ಚಿತ್ರದ ಛಾಯಾಗ್ರಾಹಕರಾಗಿರಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT