ಅಭಿಷೇಕ್ ಮತ್ತು ಸಪ್ತಮಿ ಗೌಡ 
ಸಿನಿಮಾ ಸುದ್ದಿ

ಕೃಷ್ಣ ನಿರ್ದೇಶನದ 'ಕಾಳಿ' ಯಲ್ಲಿ ಯಂಗ್ ರೆಬಲ್ ಸ್ಟಾರ್ ಗೆ 'ಕಾಂತಾರ' ಲೀಲಾ ಜೋಡಿ?

ಬ್ಲಾಕ್ ಬಸ್ಟರ್ 'ಕಾಂತಾರ' ಚಿತ್ರದ ಮೂಲಕ  'ಪಾಪ್ ಕಾರ್ನ್ ಮಂಕಿ ಟೈಗರ್' ನಟಿ ಸಪ್ತಮಿ ಗೌಡ  ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.  ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಪ್ತಮಿ ಲೀಲಾ ಎಂಬ ಪಾತ್ರದಲ್ಲಿ ನಟಿಸಿದ್ದರು.  

ಬ್ಲಾಕ್ ಬಸ್ಟರ್ 'ಕಾಂತಾರ' ಚಿತ್ರದ ಮೂಲಕ  'ಪಾಪ್ ಕಾರ್ನ್ ಮಂಕಿ ಟೈಗರ್' ನಟಿ ಸಪ್ತಮಿ ಗೌಡ  ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.  ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಪ್ತಮಿ ಲೀಲಾ ಎಂಬ ಪಾತ್ರದಲ್ಲಿ ನಟಿಸಿದ್ದರು.  

ನವೆಂಬರ್ 18ಕ್ಕೆ ಕಾಂತಾರ 50 ದಿನ ಪೂರೈಸಲಿದೆ. ನಟ ರಿಷಭ್ ಶೆಟ್ಟಿ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡು ಕುಟುಂಬದ ಜೊತೆ ದುಬೈ ಪ್ರವಾಸಕ್ಕೆ ತೆರಳಿದ್ದಾರೆ, ಇನ್ನೂ ನಟಿ ಸಪ್ತಮಿಗೌಡ ತಮ್ಮ ತಾಯಿ ಜೊತೆ ಮಂಗಳೂರಿನ ಹಲವು ದೇವಾಲಯಗಳಿಗೆ ಬೇಟಿ ನೀಡಿದ್ದರು. ಕಾಂತಾರ’ ಚಿತ್ರದ ಯಶಸ್ಸಿನ ನಂತರ ಆ ಚಿತ್ರದ ನಾಯಕಿ ಸಪ್ತಮಿ ಗೌಡ ಮುಂದೇನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅವರು ಅಭಿಷೇಕ್​ ಅಂಬರೀಷ್​ ಅಭಿನಯದ ‘ಕಾಳಿ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಕಾಳಿ’ ಚಿತ್ರಕ್ಕೆ ಸಪ್ತಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದುವರೆಗೂ ಸಪ್ತಮಿ ಈ ವಿಷಯವಾಗಿ ಎಲ್ಲೂ ಮಾತನಾಡಿಲ್ಲ.  ನಾಯಕಿಯ ಪಾತ್ರದ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿ ಹೇಳಿದ್ದ ನಿರ್ದೇಶಕರು ಅಭಿಷೇಕ್‌ಗೆ ಉತ್ತಮ ಜೋಡಿಯಾಗಲಿರುವ ಸಮರ್ಥ ನಟಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಸಪ್ತಮಿ ಗೌಡ ಅವರು ಎಲ್ಲ ರೀತಿಯಲ್ಲೂ ಅಭಿಗೆ ಸರಿಹೊಂದುತ್ತಾರೆಂದು ಹೇಳಲಾಗಿದೆ.

ಕೆಲವು ದಿನಗಳ ಹಿಂದೆ ನಿರ್ದೇಶಕರು ನಟಿಯನ್ನು ಬೇಟಿ ಮಾಡಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.  ಸಪ್ತಮಿ ಈ ಸಿನಿಮಾ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.  ಆದರೆ ಇನ್ನೂ ಫೈನಲ್ ಆಗಿಲ್ಲ ಎಂದು ತಿಳಿದು ಬಂದಿದೆ.

ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಪ್ತಮಿಗೌಡ ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಂದ ಆಫರ್ ಬರುತ್ತಿದೆ, ಆದರೆ ಸದ್ಯ ಕನ್ನಡ ಚಿತ್ರಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. "ನಾನು ಕೆಲವು ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಮತ್ತು ಕೃಷ್ಣ ಅವರ ಕಾಳಿ ಚಿತ್ರವು ಅವುಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಕಾಳಿ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಆರಂಭವಾಗಿರಬೇಕಿತ್ತು. ಆದರೆ, ಅಭಿಷೇಕ್​ ಅಭಿನಯದ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರದ ಚಿತ್ರೀಕರಣ ವಿಳಂಬವಾಗಿದ್ದರಿಂದ, ‘ಕಾಳಿ’ ಸಹ ಸ್ವಲ್ಪ ಮುಂದಕ್ಕೆ ಹೋಗಿದೆ. ‘ಬ್ಯಾಡ್​ ಮ್ಯಾನರ್ಸ್​’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆ ನಂತರ ‘ಕಾಳಿ’ ಚಿತ್ರೀಕರಣ ಶುರುವಾಗಲಿದೆ. ಆದರೆ, ಇದು ಇನ್ನೂ ಚರ್ಚೆಯ ಹಂತದಲ್ಲಿದೆ. ಅಂತಿಮ ಒಪ್ಪಿಗೆಯ ಮೊದಲು ನಾವು ಇನ್ನೂ ಕೆಲವು  ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT