ಯಶೋದಾ ಸಿನಿಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಸಮಂತಾ ನಟನೆಯ ಯಶೋದಾ ಬಾಕ್ಸ್ ಆಫೀಸ್ ಕಲೆಕ್ಷನ್; ಉತ್ತಮ ಆರಂಭ, 8ನೇ ದಿನಕ್ಕೆ ಕೋಟಿ ಗಳಿಸಲು ಹೆಣಗಾಟ

ನಟಿ ಸಮಂತಾ ರುತ್ ಪ್ರಭು ಅಭಿಯನದ ಯಶೋದಾ ಚಿತ್ರವು ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಉತ್ತಮ ಆರಂಭವನ್ನು ಹೊಂದಿತ್ತು. ಹರಿ-ಹರೀಶ್ ಜೋಡಿಯ ನಿರ್ದೇಶನದ ವೈದ್ಯಕೀಯ ಥ್ರಿಲ್ಲರ್, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿಯೇ 20 ಕೋಟಿ ರೂ. ಕಲೆಕ್ಷನ್ ಮಾಡಿದೆ.

ನಟಿ ಸಮಂತಾ ರುತ್ ಪ್ರಭು ಅಭಿಯನದ ಯಶೋದಾ ಚಿತ್ರವು ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಉತ್ತಮ ಆರಂಭವನ್ನು ಹೊಂದಿತ್ತು. ಹರಿ-ಹರೀಶ್ ಜೋಡಿಯ ನಿರ್ದೇಶನದ ವೈದ್ಯಕೀಯ ಥ್ರಿಲ್ಲರ್, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿಯೇ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದಾದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ವೇಗವನ್ನು ಕಳೆದುಕೊಂಡು, 8ನೇ ದಿನದಲ್ಲಿ ಕೋಟಿ ಗಳಿಸಲು ಹೆಣಗಾಡುತ್ತಿದೆ. ಯಶೋದಾ ಇದೀಗ 30 ಕೋಟಿ ರೂ. ಗಳಿಕೆಯ ಸಮೀಪದಲ್ಲಿದೆ.

ಒಂದು ಅಂದಾಜಿನ ಪ್ರಕಾರ, ಬಿಡುಗಡೆಯಾದ 8ನೇ ದಿನದಲ್ಲಿ ಚಿತ್ರವು 65-70 ಕೋಟಿ ರೂ. ಗಳಿಸಿದೆ. ಕಳೆದೆರಡು ದಿನಗಳಿಂದ ಚಿತ್ರವು 1 ಕೋಟಿ ರೂ. ಗಳಿಸಲು ಕೂಡ ಪರದಾಡುವಂತಾಗಿದೆ. ತೆಲುಗು ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆಯನ್ನು ಕಂಡ ಚಿತ್ರ ಇತರೆಡೆಯಲ್ಲಿ ಗಮನ ಸೆಳೆಯುವಲ್ಲಿ ವಿಫಲವಾಯಿತು.

ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ಚಿತ್ರವು ನಿಧಾನಗತಿಯಲ್ಲಿ ಸಾಗುತ್ತಿರುವುದರ ಹೊರತಾಗಿಯೂ, ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಿದ ಕಾರಣ ಯಶಸ್ವಿಯಾಗುತ್ತದೆ.

ಯಶೋದಾ ಚಿತ್ರವು ನವೆಂಬರ್ 11 ರಂದು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು. ಇದೇ ವೇಳೆ ನಟ ಅಮಿತಾಬ್ ಬಚ್ಚನ್ ಅವರ ಉಂಚೈ ಮತ್ತು ಹಾಲಿವುಡ್ ಚಿತ್ರ 'ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್‌' ಚಿತ್ರಗಳು ಬಿಡುಗಡೆಯಾಗಿದ್ದವು.

ಯಶೋದಾ ಸಿನಿಮಾ ವೈದ್ಯಕೀಯ ಥ್ರಿಲ್ಲರ್ ಆಗಿದ್ದು, ಪಾತ್ರವು ಮಹಿಳೆಯರನ್ನು ಬಾಡಿಗೆ ತಾಯ್ತನಕ್ಕೆ ಬಳಸಿಕೊಳ್ಳುವ ಮತ್ತು ಬಲವಂತ ಮಾಡುವ ಮಾಫಿಯಾವನ್ನು ತೋರಿಸುತ್ತದೆ. ಚಿತ್ರದಲ್ಲಿ ಸಮಂತಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT