ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಬಹುಭಾಷಾ ನಟ ಕಮಲ್​ ಹಾಸನ್ ಅಸ್ವಸ್ಥ: ಚೆನ್ನೈ ಆಸ್ಪತ್ರೆಗೆ ದಾಖಲು

ಬಹುಭಾಷಾ ನಟ ಕಮಲ್​ ಹಾಸನ್​​ ಅಸ್ವಸ್ಥರಾಗಿದ್ದು, ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಕಮಲ್ ಹಾಸನ್
Shilpa D
Updated On : 24 Nov 2022, 1:57 pm

ಬಹುಭಾಷಾ ನಟ ಕಮಲ್​ ಹಾಸನ್​​ ಅಸ್ವಸ್ಥರಾಗಿದ್ದು, ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಕಮಲಹಾಸನ್​​ ಕಳೆದ ರಾತ್ರಿ ಎಸ್ ಆರ್ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಜ್ಞ ವೈದ್ಯರಿಂದ ಕಮಲ ಹಾಸನ್​​ಗೆ ಟ್ರೀಟ್​ಮೆಂಟ್​ ಪಡೆದುಕೊಳ್ಳುತ್ತಿದ್ಧಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಡೀರ್​ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಇಂದು ಮಧ್ಯಾಹ್ನದ ವೇಳೆಗೆ ಡಿಸ್ಚಾರ್ಜ್​ ಆಗುವ ಸಾಧ್ಯತೆಯಿದೆ. ನಾರ್ಮಲ್​​​ ಚೆಕಪ್​​ಗಾಗಿ ದಾಖಲಾಗಿದ್ದಾರೆ ಎಂದು ಕುಟುಂಬದ ಮಾಹಿತಿ ನೀಡಿದೆ. ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ನೀಡಿದ್ಧಾರೆ. ಕಮಲ್​​ ಹೈದ್ರಾಬಾದ್​ನಿಂದ ವಾಪಸ್​ ಆದ ಕೂಡಲೇ ಅಸ್ವಸ್ಥರಾಗಿದ್ದರು.

Advertisement

Advertisement

ನಟ ಕಮಲ್ ಹಾಸನ್ ಅವರಿಗೆ ಈಗ 68 ವರ್ಷ ವಯಸ್ಸು. ಈಗಲೂ ಅವರು ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ‘ತಮಿಳು ಬಿಗ್ ಬಾಸ್​ ಸೀಸನ್ 6’ನ್ನು ನಡೆಸಿಕೊಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement