ಹಿರಿಯ ನಟ ಅನಂತ್ ನಾಗ್ ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ 
ಸಿನಿಮಾ ಸುದ್ದಿ

ಹಿರಿಯ ನಟ ಅನಂತ್ ನಾಗ್ ಗೆ ಬೆಂಗಳೂರು ಉತ್ತರ ವಿ.ವಿಯಿಂದ ಗೌರವ ಡಾಕ್ಟರೇಟ್ ಪದವಿ ಗೌರವ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ (Sandalwood senior actor Ananth Nag) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಮತ್ತು ಸಮಕುಲಾಧಿಪತಿ ಡಾ.ಸಿ.ಎನ್ ಅಶ್ವತ್ಥನಾರಾಯಣ್ (Ashwath Narayan) ಅವರು ಗೌರವ ಪದವಿಯನ್ನು ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್ (Honorary Doctorate) ಪದವಿ ಪಡೆದು ಮಾತನಾಡಿದ ಅನಂತ್ ನಾಗ್ (Ananth Nag), ‘ನನಗೆ ಪ್ರಶಸ್ತಿ-ಪದಕ ಗೌರವಗಳ ಬಗ್ಗೆ ಆಸೆಯಿಲ್ಲ. ನನ್ನ ಮಗಳು ಮತ್ತು ಹೆಂಡತಿ ಒತ್ತಾಯ ಮಾಡಿದ್ದಕ್ಕೆ ಈ ಪದವಿಯನ್ನು ಪಡೆಯಲು ಬಂದೆ. ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಸಿನಿಮಾ ರಂಗ. ಇಂತಹ ರಂಗವನ್ನು ಬೆಳೆಸಿದವರು ಡಾ.ರಾಜ್ ಕುಮಾರ್ ಅವರು ಎಂದು ಹೇಳಿದರು. 

ತಮ್ಮ ಬಾಲ್ಯ ಮತ್ತು ಶಾಲಾ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್, 8ನೇ ತರಗತಿವರೆಗೂ ನಾನು ಕನ್ನಡ ಮಾಧ್ಯಮದಲ್ಲೇ ಓದಿದವನು. ನಂತರ ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮ ಸೇರಿಕೊಂಡೆ. ಇಂಗ್ಲಿಷ್ ಮಾಧ್ಯಮದ ಕಾರಣಕ್ಕಾಗಿ ಓದಿನಲ್ಲಿ ಹಿಂದೆ ಬಿದ್ದೆ. ಹೊನ್ನಾವರದಲ್ಲಿ ಓದುವಾಗ ನನ್ನದು ಕನ್ನಡ ಮಾಧ್ಯಮವಾಗಿತ್ತು ಎಂದ ಅವರು ಮುಂಬೈಯಲ್ಲಿದ್ದಾಗ ಸಿನಿಮಾರಂಗದ ನಂಟು, ನೋಡುತ್ತಿದ್ದ ಚಿತ್ರಗಳ ನೆನಪು, ಅನುಭವಗಳನ್ನು ಹಂಚಿಕೊಂಡರು. 

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ, ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಭಾಗಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT