ಗಂಧದ ಗುಡಿ ಟ್ರೈಲರ್ 
ಸಿನಿಮಾ ಸುದ್ದಿ

ಅಪ್ಪು ಡ್ರೀಮ್ ಪ್ರಾಜೆಕ್ಟ್ 'ಗಂಧದ ಗುಡಿ' ಟ್ರೈಲರ್ ಬಿಡುಗಡೆ, ಪ್ರಧಾನಿ ಮೋದಿ ಪ್ರಶಂಸೆ

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಟ್ರೈಲರ್ ಇಂದು ಬಿಡುಗಡೆಯಾಗಿದೆ. ಅಪ್ಪು ಡ್ರೀಮ್ ಪ್ರಾಜೆಕ್ಟ್ ನಲ್ಲಿ ನಾಡಿನ ಅದ್ಬುತ ಪ್ರಕೃತಿ ಸಂಪತ್ತನ್ನು ಸೆರೆಹಿಡಿಯಲಾಗಿದೆ.

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಟ್ರೈಲರ್ ಇಂದು ಬಿಡುಗಡೆಯಾಗಿದೆ. ಅಪ್ಪು ಡ್ರೀಮ್ ಪ್ರಾಜೆಕ್ಟ್ ನಲ್ಲಿ ನಾಡಿನ ಅದ್ಬುತ ಪ್ರಕೃತಿ ಸಂಪತ್ತನ್ನು ಸೆರೆಹಿಡಿಯಲಾಗಿದೆ.

2 ನಿಮಿಷ 39 ಸೆಕೆಂಡ್ ಗಳ ಟ್ರೈಲರ್ ನಲ್ಲಿ ನಾಡಿನ ಅರಣ್ಯ, ಜಲ ಹಾಗೂ ವನ್ಯ ಸಂಪತ್ತನ್ನು ತೋರಿಸಲಾಗಿದೆ.ಟ್ರೈಲರ್ ನಲ್ಲಿ ತಮ್ಮ ನೆಚ್ಚಿನ ನಟನನ್ನು ಅಪ್ಪು ಅಭಿಮಾನಿಗಳು ಕಣ್ತುಂಬಿಕೊಂಡು, ಸಂತೋಷ ಪಡುತ್ತಿದ್ದಾರೆ.

ಯೂ ಟ್ಯೂಬ್ ನಲ್ಲಿ ಬಿಡುಗಡೆಯಾದ ತುಸು ಸಮಯದಲ್ಲಿಯೇ 4 ಲಕ್ಷ 36 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ.  6 ಸಾವಿರದ 365 ಕಾಮೆಂಟ್ ಗಳು ಬಂದಿವೆ. ಗಂಧದ ಗುಡಿ ಟೀಸರ್ ನೋಡಿ ಖುಷಿಯಾದ ಅಭಿಮಾನಿಗಳು ಇಂಥ ಹೊತ್ತಿನಲ್ಲಿ ಪುನೀತ್ ಇಲ್ಲದಿರುವುದಕ್ಕೆ ಮಮ್ಮಲ ಮರುಗುತ್ತಿದ್ದಾರೆ.

ಗಂಧದ ಗುಡಿ ಸಂಪೂರ್ಣ ಕಾಡಿನಲ್ಲಿಯೇ ಚಿತ್ರೀಕರಣವಾಗಿದೆ. ಇದರ ಟೀಸರ್ ದೃಶ್ಯಗಳು, ಬೆಳಕಿನ ಸಂಯೋಜನೆ, ಹಿನ್ನಲೆ ಸಂಗೀತ ಅನನ್ಯವಾಗಿದೆ. ಪುನೀತ್ ತಾವೇ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆಮತ್ತೆ ವೀಕ್ಷಿಸಬೇಕೆನ್ನಿಸುವ ರೀತಿಯಲ್ಲಿ ಟೀಸರ್ ಇರುವುದು ಗಮನಾರ್ಹ. ಮೇಕಿಂಗ್ ನಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಅಮೋಘವರ್ಷ ಅವರ ಪರಿಶ್ರಮ  ಎದ್ದುಕಾಣುತ್ತಿದೆ.

ಗಂಧದ ಗುಡಿ ಟ್ರೈಲರ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಹೃದಯದಲ್ಲಿದ್ದಾರೆ. ಅವರೊಬ್ಬ ಪ್ರತಿಭಾವಂತ, ತೇಜಸ್ಸಿನ ವ್ಯಕ್ತಿಯಾಗಿದ್ದರು.  ಗಂಧದ ಗುಡಿ ಪ್ರಕೃತಿ ಮಾತೆ, ಕರ್ನೌಟಕ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಅವರ ಪ್ರಯತ್ನಕ್ಕೆ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಈ ಸಾಕ್ಷ್ಯಚಿತ್ರವನ್ನು ಅಮೋಘ ವರ್ಷ ನಿರ್ದೇಶಿಸಿದ್ದಾರೆ. ಇದೇ ತಿಂಗಳ 28 ರಂದು ಈ ಸಾಕ್ಷ್ಯಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT