ಶ್ರೀಮುರಳಿ 
ಸಿನಿಮಾ ಸುದ್ದಿ

ನನ್ನ ಗಮನ ಸಂಪೂರ್ಣವಾಗಿ ಡಾ. ಸೂರಿ ನಿರ್ದೇಶನದ 'ಬಘೀರಾ' ಮೇಲಿದೆ: ನಟ ಶ್ರೀಮುರಳಿ

ನಟ ಶ್ರೀಮುರಳಿ ಸಂಪೂರ್ಣ ವರ್ಕ್ ಮೋಡ್‌ನಲ್ಲಿದ್ದು, ಅವರ ಸಂಪೂರ್ಣ ಗಮನವೆಲ್ಲ ಅವರ ಮುಂದಿನ 'ಬಘೀರಾ' ಸಿನಿಮಾದ ಮೇಲೆ ಕೇಂದ್ರೀಕೃತವಾಗಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಬಘೀರಾ ಸಿದ್ಧವಾಗುತ್ತಿದೆ.

ನಟ ಶ್ರೀಮುರಳಿ ಸಂಪೂರ್ಣ ವರ್ಕ್ ಮೋಡ್‌ನಲ್ಲಿದ್ದು, ಅವರ ಸಂಪೂರ್ಣ ಗಮನವೆಲ್ಲ ಅವರ ಮುಂದಿನ 'ಬಘೀರಾ' ಸಿನಿಮಾದ ಮೇಲೆ ಕೇಂದ್ರೀಕೃತವಾಗಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಬಘೀರಾ ಸಿನಿಮಾ ಸಿದ್ಧವಾಗುತ್ತಿದೆ.

ಲಕ್ಕಿ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ಬಘೀರಾ ಸಿನಿಮಾಗೆ ಶ್ರೀಮುರಳಿ ಅಭಿನಯದ 'ಉಗ್ರಂ' ಚಿತ್ರದ ಮೂಲಕ ನಿರ್ದೇಶಕರಾಗಿ  ಚೊಚ್ಚಲ ಪ್ರವೇಶ ಮಾಡಿದ್ದ ಹಾಗೂ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಚಿತ್ರಕಥೆ ಬರೆದಿದ್ದಾರೆ.

ಬಘೀರಾ ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೋಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಫಸ್ಟ್ ಲುಕ್ ಪೋಸ್ಟರ್ 'ಸಮಾಜ ಕಾಡಿದಾಗ' ಎಂಬ ಅಡಿಬರಹದೊಂದಿಗೆ ರಿಲೀಸ್ ಆಗಿದೆ.  ಈ ವಾರದ ಆರಂಭದಲ್ಲಿ ಪ್ರಾರಂಭವಾಗುವ ಮುಂದಿನ ಹಂತದ ಶೂಟಿಂಗ್‌ಗಾಗಿ ಇಡೀ ತಂಡವು ಮಂಗಳೂರಿನಲ್ಲಿದೆ.

ಸಿನಿಮಾ ಸೆಟ್‌ನಲ್ಲಿರುವ ಶ್ರೀಮುರಳಿ ಮಾತನಾಡಿ, ತನ್ನ ಸಂಪೂರ್ಣ ಗಮನ ಬಘೀರಾದ ಮೇಲಿದೆ. 'ಶೇ 25 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಮತ್ತು ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಮಂಗಳೂರಿನಲ್ಲಿ ಶೂಟಿಂಗ್ ನಂತರ, ವಿಶ್ರಾಂತಿ ತೆಗೆದುಕೊಂಡು ಅಕ್ಟೋಬರ್ 29 ರಿಂದ ಗೋವಾದಲ್ಲಿ ಶೂಟಿಂಗ್ ನಡೆಯಲಿದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!