ಸಿನಿಮಾ ಸುದ್ದಿ

ಹೆಡ್ ಬುಷ್ ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆ ಇಡಲು ಸಹಾಯ ಮಾಡುತ್ತದೆ: ಪಾಯಲ್ ರಜಪೂತ್

Ramyashree GN

ವೀರೇ ಕಿ ವೆಡ್ಡಿಂಗ್ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಪಾಯಲ್ ರಜಪೂತ್, ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಇದೀಗ ತನ್ನ ಛಾಪು ಮೂಡಿಸುತ್ತಿದ್ದಾರೆ.

ಪಾಯಲ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುವ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಅಂತಿಮವಾಗಿ ಶೂನ್ಯಾ ನಿರ್ದೇಶನದ, ಧನಂಜಯ್ ಅಭಿನಯದ ಹೆಡ್ ಬುಷ್‌ ಚಿತ್ರದೊಂದಿಗೆ ಕೊನೆಗೊಂಡಿದೆ. ಹೆಡ್ ಬುಷ್ ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಧನಂಜಯ್ ತನ್ನನ್ನು ಪಾತ್ರಕ್ಕಾಗಿ ಸಂಪರ್ಕಿಸಿದರು ಎನ್ನುತ್ತಾರೆ ನಟಿ.

'ನಾನು ಪಂಜಾಬಿ ಚಿತ್ರದಿಂದ ಪಯಣವನ್ನು ಪ್ರಾರಂಭಿಸಿದೆ, ಅದಕ್ಕಾಗಿ ನಾನು ಪ್ರಶಸ್ತಿಗಳನ್ನು ಗೆದ್ದೆ, ನಂತರ ತೆಲುಗಿನ RX 100 ಚಿತ್ರದಲ್ಲಿನ ನಟನೆಗೆ ಗುರುತಿಸಿಕೊಂಡೆ. ಬಳಿಕ ತಮಿಳಿನಲ್ಲೂ ಕೆಲಸ ಮಾಡಿದೆ. ಇದೀಗ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದು, ಶೀಘ್ರದಲ್ಲೇ ನಾನು ಮಲಯಾಳಂ ಸಿನಿಮಾದಲ್ಲೂ ನಟಿಸುತ್ತೇನೆ. ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುವ ಮೂಲಕ ಜನರ ಹೃದಯವನ್ನು ಗೆಲ್ಲುವ ಗುರಿ ಹೊಂದಿದ್ದೇನೆ’ ಎನ್ನುತ್ತಾರೆ ಪಾಯಲ್.

'ಸ್ಯಾಂಡಲ್‌ವುಡ್‌ನಲ್ಲಿ ಧನಂಜಯ್ ಅವರ ಜನಪ್ರಿಯತೆ ಬಗ್ಗೆ ನನಗೆ ತಿಳಿದಿತ್ತು. ಹೈದರಾಬಾದ್‌ನಲ್ಲಿ ಭೇಟಿಯಾದಾಗ ಅವರು ನನ್ನ ಪಾತ್ರ ಮತ್ತು ಸ್ಕ್ರಿಪ್ಟ್ ಬಗ್ಗೆ ವಿವರಗಳನ್ನು ಹಂಚಿಕೊಂಡರು. ನನ್ನ ಚೊಚ್ಚಲ ಪ್ರವೇಶಕ್ಕೆ ಈ ಸಿನಿಮಾ ಪರಿಪೂರ್ಣ ಎಂದು ನಾನು ಭಾವಿಸಿದೆ' ಎಂದು ಅವರು ಹೇಳುತ್ತಾರೆ.

ಪಾಯಲ್ ರಜಪೂತ್

ಹೆಡ್ ಬುಷ್ ಸಿನಿಮಾವು ಅಗ್ನಿ ಶ್ರೀಧರ್ ಅವರ ಆತ್ಮಕಥೆ 'ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್' ಅನ್ನು ಆಧರಿಸಿದೆ. ಮತ್ತು ನಿಜ ಜೀವನದ ಪಾತ್ರವನ್ನು ನಿರ್ವಹಿಸುವುದು ದೊಡ್ಡ ಜವಾಬ್ದಾರಿ. ಬಯೋಪಿಕ್‌ನ ಭಾಗವಾಗಿರುವುದರಿಂದ, ನಾವು ನಿಜ ಜೀವನದ ಪಾತ್ರಗಳನ್ನು ಸೃಷ್ಟಿಸಬೇಕು. ಹೀಗಾಗಿ ಕಾಲ್ಪನಿಕ ಪಾತ್ರಗಳಿಗಿಂತ ಹೆಚ್ಚು ಒತ್ತಡ ಇರುತ್ತದೆ. ಧನಂಜಯ್ ಮತ್ತು ವಿಶೇಷವಾಗಿ ಅಗ್ನಿ ಶ್ರೀಧರ್ ಅವರೊಂದಿಗೆ ಸಮಾಲೋಚಿಸಿ ನನ್ನ ಪಾತ್ರಕ್ಕೆ ತಕ್ಕಮಟ್ಟಿಗೆ ಹೋಮ್ ವರ್ಕ್ ಮಾಡಿದ್ದೇನೆ. ಲೇಖಕರ ಬಗ್ಗೆ ನನಗೆ ಅಪಾರ ಗೌರವವಿದೆ’ ಎನ್ನುತ್ತಾರೆ ಪಾಯಲ್.

'ಅರ್ಧ ಜ್ಞಾನ ಯಾವಾಗಲೂ ಅಪಾಯಕಾರಿ. ನಾನು ಪಾತ್ರವನ್ನು ನಿರ್ವಹಿಸಲು ಬಂದಾಗ, ಕಥೆ ಮತ್ತು ನಿರ್ದಿಷ್ಟವಾಗಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಾನು ಅಗ್ನಿ ಶ್ರೀಧರ್ ಅವರೊಂದಿಗೆ ಕುಳಿತುಕೊಂಡೆ. ನನ್ನ ಪಾತ್ರವು, ಬೆಂಗಳೂರಿನಲ್ಲಿ ನೆಲೆಸಿರುವ ಪಂಜಾಬ್ ಮೂಲದ ಹುಡುಗಿ. ಒಡೆದ ಕನ್ನಡ ಮಾತನಾಡುತ್ತಿದ್ದ ಆಕೆ, ಎಂಪಿ ಜಯರಾಜ್ ಅವರನ್ನು ಪ್ರೀತಿಸುತ್ತಾಳೆ. ಜಯರಾಜ್ ಅವರ ಹೆಸರು ಕೇಳಿದ್ದರೂ, ಅವರ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಹೀಗಾಗಿ, ನನ್ನ ಪಾತ್ರವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾನು ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಿತ್ತು.

ನಾನು ಪಂಜಾಬಿ ಮತ್ತು ಪಂಜಾಬಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತೇನೆ ಮತ್ತು ಅವರ ಮನಸ್ಸಿನಲ್ಲಿದ್ದ ಪಾತ್ರಕ್ಕೆ ನಾನು ಹೊಂದುತ್ತೇನೆ ಎನ್ನುವ ಕಾರಣಕ್ಕೆ ಈ ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಾಸ್ತವವಾಗಿ, ನಾನು ನಿರ್ವಹಿಸುತ್ತಿರುವ ಪಾತ್ರದ ನಿಜ ಜೀವನದ ಆಕೆ ಜೀವಂತವಾಗಿದ್ದಾರೆ ಎಂಬುದು ತಿಳಿಯಿತು. ಅವರನ್ನು ಭೇಟಿಯಾಗಲು ನಾನು ಬಯಸಿದ್ದೆ. ಆದರೆ ಅದಾಗಲಿಲ್ಲ. ಅವರು ನನಗೆ ಪಾತ್ರದ ರೇಖಾಚಿತ್ರವನ್ನು ನೀಡಿದರು ಮತ್ತು ದೇಹ ಭಾಷೆ ಮತ್ತು ಗ್ರಾಮ್ಯ ಭಾಷೆಯಲ್ಲಿ ಕೆಲಸ ಮಾಡಲು ಸಹಾಯ ಮಾಡಿದರು. ನಾನು ಕನ್ನಡದಲ್ಲಿ ಕೆಲವು ಸಾಲುಗಳನ್ನು ಕಲಿಯಲು ಪ್ರಯತ್ನಿಸಿದೆ ಮತ್ತು ನನ್ನ ಧ್ವನಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಕೆಲಸ ಮಾಡಿದ್ದೇನೆ ಮತ್ತು ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಧನಂಜಯ್ - ಪಾಯಲ್ ರಜಪೂತ್

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಹೆಡ್ ಬುಷ್ ಸೆಟ್‌ನಲ್ಲಿ ಭೇಟಿಯಾದ ಅನುಭವವನ್ನು ಪಾಯಲ್ ಹಂಚಿಕೊಂಡಿದ್ದಾರೆ. 'ನಾನು ಪುನೀತ್ ಸರ್ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಸ್ಯಾಂಡಲ್‌ವುಡ್ ಚೊಚ್ಚಲ ಪ್ರವೇಶದ ಬಗ್ಗೆ ಅವರು ಸಂತೋಷಪಟ್ಟರು' ಎನ್ನುವ ಅವರು, 'ಧನಂಜಯ್ ಜೊತೆ ಕೆಲಸ ಮಾಡಿದ್ದು ಆರಾಮದಾಯಕ ಅನುಭವ. ಅವರು ಅದ್ಭುತ ನಟ ಮತ್ತು ನಾನು ಅವರಿಂದ ತುಂಬಾ ಕಲಿತಿದ್ದೇನೆ. ಅವರು ನನ್ನ ಜೀವನದುದ್ದಕ್ಕೂ ಆತ್ಮೀಯ ಸ್ನೇಹಿತನಾಗಿರುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗವು ನನ್ನನ್ನು ಸ್ವಾಗತಿಸಿದೆ ಮತ್ತು ನಾನು ಹೆಡ್ ಬುಷ್ ಸೆಟ್‌ಗೆ ಪ್ರವೇಶಿಸಿದ ಸಮಯದಿಂದಲೂ ನಾನು ಇದನ್ನು ಅನುಭವಿಸಿದ್ದೇನೆ. ಪ್ರಪಂಚದ ಕಣ್ಣುಗಳು ಕನ್ನಡ ಚಿತ್ರರಂಗದ ಮೇಲಿರುವ ಹೊತ್ತಲ್ಲಿ ಸ್ಯಾಂಡಲ್‌ವುಡ್ಗೆ ಪದಾರ್ಪಣೆ ಮಾಡುತ್ತಿರುವ ಬಗ್ಗೆ ಸಂತೋಷವಾಗಿದೆ. ಯಾವುದೇ ಭಾಷೆಯಾಗಿರಲಿ ಚಿತ್ರರಂಗದಲ್ಲಿ ಇರಲು ಇದು ಅತ್ಯುತ್ತಮ ಸಮಯ. ಓರ್ವ ನಟನಿಗೆ ಸಿನಿಮಾ ಇಂದು ಎಲ್ಲವನ್ನು ಒದಗಿಸುತ್ತಿದೆ ಮತ್ತು ನಿಮ್ಮ ಗುರಿಯನ್ನು ಸಾಧಿಸಲು ಯಾವುದೂ ನಿಮ್ಮನ್ನು ತಡೆಯುವುದಿಲ್ಲ. ಇದಕ್ಕಾಗಿ ನೀವು ಅಗತ್ಯವಿರುವ ಪ್ರತಿಭೆಯನ್ನು ಹೊಂದಿರಬೇಕು ಮತ್ತು ಉತ್ತಮವಾಗಿ ಕೆಲಸ ಮಾಡಬೇಕು' ಎನ್ನುತ್ತಾರೆ ಪಾಯಲ್.

ಪಾಯಲ್ ವಿಷ್ಣು ಮಂಚಿ ನಟಿಸಿರುವ ತೆಲುಗು ಚಿತ್ರ ಗಿನ್ನಾದಲ್ಲಿ ನಟಿಸಿದ್ದು, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುವ ದಿನದಂದೇ ಬಿಡುಗಡೆಯಾಗಲಿದೆ.

ಒಂದೇ ದಿನ ನನ್ನ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಡಬಲ್ ಒತ್ತಡವಿದೆ. ನಾನು ಹೆಡ್ ಬುಷ್ ಬಗ್ಗೆ ಕೆಲವು ಉತ್ತಮ ವೈಬ್‌ಗಳನ್ನು ಹೊಂದಿದ್ದೇನೆ ಮತ್ತು ಅದನ್ನು ಬೆಳ್ಳಿ ಪರದೆಯ ಮೇಲೆ ವೀಕ್ಷಿಸಲು ಕಾತುರಳಾಗಿದ್ದೇನೆ. ಇದು ಕನ್ನಡ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆ ಇಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ' ಎಂದು ಅವರು ಹೇಳುತ್ತಾರೆ.

SCROLL FOR NEXT