ರೋಶನಿ ಪ್ರಕಾಶ್ 
ಸಿನಿಮಾ ಸುದ್ದಿ

ಅರ್ಥಗರ್ಭಿತ ಪಾತ್ರಗಳ ಭಾಗವಾಗಿರಲು ಬಯಸುತ್ತೇನೆ; ಕವಲುದಾರಿ ಸ್ಟಾರ್ ನಟಿ ರೋಶನಿ ಪ್ರಕಾಶ್

ಕಲವುದಾರಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ  ನಟಿ ರೋಶನಿ ಪ್ರಕಾಶ್ ಗೆ ಹೆಚ್ಚು ಅರ್ಥಗರ್ಭಿತ ಪಾತ್ರಗಳ ಭಾಗವಾಗಿರುವ ಆಸಕ್ತಿ.

ಕಲವುದಾರಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ರೋಶನಿ ಪ್ರಕಾಶ್ ಗೆ ಹೆಚ್ಚು ಅರ್ಥಗರ್ಭಿತ ಪಾತ್ರಗಳ ಭಾಗವಾಗಿರುವ ಆಸಕ್ತಿ. ಈಗ ಅದಕ್ಕೆ ತಕ್ಕೆಂತೆ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ತಮಿಳು ಸಿನಿಮಾ "ಓಹ್ ಮೈ ಕಡವುಳೆ" ರೀಮೇಕ್ ನಲ್ಲಿ ರೋಶನಿ ಪ್ರಕಾಶ್ ನಟಿಸಿದ್ದು, ಸೆ.09 ಕ್ಕೆ ಚಿತ್ರ ಬಿಡುಗಡೆಯಾಗಿದೆ. 

ಓಹ್ ಮೈ ಕಡವುಳೆ ಸಿನಿಮಾವನ್ನು ನಾನು ಲಕಿ ಮ್ಯಾನ್ ತಂಡದಿಂದ ಆಫರ್ ಪಡೆಯುವುದಕ್ಕೂ ಮುನ್ನವೇ ನೋಡಿದ್ದೆ. ಸಿನಿಮಾ ಇಷ್ಟವಾಗಿತ್ತು. 

ಮೂಲ ಕಥೆಯಲ್ಲಿ ವಾಣಿ ಭೋಜನ್ ಅವರು ನಟಿಸಿದ್ದ ಪಾತ್ರದ ಮೇಲೆ ನನ್ನ ಕಣ್ಣಿತ್ತು. ಆ ಪಾತ್ರಕ್ಕೆ ನಿರ್ದಿಷ್ಟವಾದ ಅಗಾಧತೆ ಇತ್ತು. ಆ ಸಿನಿಮಾದಲ್ಲಿ ಆಕೆಯ ಪಾತ್ರ ವಿಶಿಷ್ಟವಾಗಿದ್ದು ಇತ್ತೀಚಿನ ಸಿನಿಮಾಗಳಲ್ಲಿ ಅತ್ಯಂತ ವಿರಳವಾಗಿ ಅದು ಕಾಣಿಸುತ್ತದೆ. 

ಎರಡನೆಯದ್ದಾಗಿ ಸಿನಿಮಾ ಭಾಗವಾಗಿದ್ದ ಕಲಾವಿದರು ಸಕಾರಾತ್ಮಕ ಅಂಶವಾಗಿದ್ದರು. ಲಕ್ಕಿ ಮ್ಯಾನ್ ನಲ್ಲಿ ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ತಿಳಿದ ಮೇಲಂತೂ ಎರಡನೇ ಯೋಚನೆ ಮಾಡಲಿಲ್ಲ. ಪುನೀತ್ ರಾಜ್ ಕುಮಾರ್ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಕವಲುದಾರಿ ಸಿನಿಮಾದಲ್ಲಿ ಕೆಲಸ ಮಾಡಿದ್ದೆ, ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ನಟಿಸುತ್ತಿದ್ದ ಸಿನಿಮಾದಲ್ಲಿ ಕೆಲಸ ಮಾಡಲು ಸಾಕಷ್ಟು ಉತ್ಸುಕಳಾಗಿದ್ದೆ, ಅದು ನನಗೆ ಹಾರೈಕೆಯಾಗಿತ್ತು ಎನ್ನುತ್ತಾರೆ ರೋಶನಿ ಪ್ರಕಾಶ್.

ಆದರೆ ಪುನೀತ್ ರಾಜ್ ಕುಮಾರ್ ಅವರ ಜೊತೆ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ರೋಶನಿ ವಿಷಾದ ಹೊಂದಿದ್ದಾರೆ.  ಪುನೀತ್ ರಾಜ್ ಕುಮಾರ್, ಪ್ರಭುದೇವ ಹಾಗೂ ನಾವು ನೃತ್ಯ ಮಾಡಿರುವ ಹಾಡು ಇರಲಿದೆ ಎಂದು ಹೇಳಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅದು ಬದಲಾಗಿ ನಾವು ಆ ಹಾಡಿನ ಭಾಗವಾಗಿರಲು ಸಾಧ್ಯವಾಗಿರಲಿಲ್ಲ ಎಂದು ನೆನಪನ್ನು ಹಂಚಿಕೊಂಡಿದ್ದಾರೆ ರೋಶನಿ.

ರೀಮೆಕ್ ಸಿನಿಮಾದ ಭಾಗವಾಗಿದ್ದರ ಬಗ್ಗೆ ಅನುಭವವನ್ನು ಹಂಚಿಕೊಂಡ ರೋಶನಿ, ಕಲಾವಿದೆಯಾಗಿ ಪಾತ್ರ ಅದಾಗಲೇ ತಲೆಯಲ್ಲಿತ್ತು, ಇದು ಒಂದು ರೀತಿಯ ಪಠ್ಯವಾಗಿದ್ದು, ರೀಮೇಕ್ ಸಿನಿಮಾಗಳನ್ನು, ಕಲಾವಿದೆಯಾಗಿ ಹೆಚ್ಚಿನದ್ದನ್ನು ಮಾಡುವುದಕ್ಕಾಗಿ ಅವಕಾಶದ ದೃಷ್ಟಿಯಿಂದ ನೋಡುತ್ತೆನೆ. ಈ ಮೂಲಕ ಸಿನಿಮಾ ಹಾಗೂ ನನ್ನ ಪಾತ್ರವನ್ನು ಉತ್ತಮಗೊಳಿಸಿಕೊಳ್ಳಲು ಯತ್ನಿಸುತ್ತೇನೆ ಎನ್ನುವ ರೋಶನಿ, ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯತ್ತಲೂ ಆಸಕ್ತಿ ಹೊಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT