ವೈಭವಿ ಶಾಂಡಿಲ್ಯ 
ಸಿನಿಮಾ ಸುದ್ದಿ

ಗಾಳಿಪಟ 2 ಚಿತ್ರದ ಶ್ವೇತಾ ಪಾತ್ರಕ್ಕೆ ಜನರು ತೋರಿಸುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದೇನೆ: ವೈಭವಿ ಶಾಂಡಿಲ್ಯ

ಮುಂಬೈ ಮೂಲದ ನಟಿ, ಸದ್ಯ ನಟ ಧ್ರುವ ಸರ್ಜಾ-ಎಪಿ ಅರ್ಜುನ್ ಅವರ 'ಮಾರ್ಟಿನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗಾಳಿಪಟ 2 ನಲ್ಲಿನ ಶ್ವೇತಾ ಪಾತ್ರಕ್ಕಾಗಿ ಜನರು ಆಕೆಯನ್ನು ಗುರುತಿಸಿದಾಗ ಅವರ ಹೃದಯವು ಸಂತೋಷದಿಂದ ತುಂಬುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಗಾಳಿಪಟ 2ರ ಯಶಸ್ಸಿನ ಗುಂಗಿನಲ್ಲಿದ್ದಾರೆ ನಟಿ ವೈಭವಿ ಶಾಂಡಿಲ್ಯ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ವೈಭವಿ ಅವರು ನಟ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಮುಂಬೈ ಮೂಲದ ನಟಿ, ಸದ್ಯ ನಟ ಧ್ರುವ ಸರ್ಜಾ-ಎಪಿ ಅರ್ಜುನ್ ಅವರ 'ಮಾರ್ಟಿನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗಾಳಿಪಟ 2 ನಲ್ಲಿನ ಶ್ವೇತಾ ಪಾತ್ರಕ್ಕಾಗಿ ಜನರು ಆಕೆಯನ್ನು ಗುರುತಿಸಿದಾಗ ಅವರ ಹೃದಯವು ಸಂತೋಷದಿಂದ ತುಂಬುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ನಾನು ನನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ಚಿತ್ರ ವೀಕ್ಷಿಸಲು ಹೋಗಿದ್ದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದರು. ನಾನು ಇತ್ತೀಚೆಗೆ ಉಡುಪಿಯಲ್ಲಿ ಶೂಟಿಂಗ್‌ನಲ್ಲಿದ್ದಾಗಲೂ ಜನ ನನ್ನನ್ನು ‘ಗಾಳಿಪಟದ ಹುಡುಗಿ’ ಎಂದು ಕರೆಯುತ್ತಿದ್ದರು ಮತ್ತು ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ಐದು ವರ್ಷಗಳ ಹಿಂದೆ ಶರಣ್ ಅಭಿನಯದ 'ರಾಜ್ ವಿಷ್ಣು' ಸಿನಿಮಾದೊಂದಿಗೆ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದೆ. ಇದೀಗ ನನ್ನ ಪುನರಾಗಮನಕ್ಕೆ ಇನ್ನಷ್ಟು ಆತ್ಮೀಯ ಸ್ವಾಗತ ಸಿಕ್ಕಿದ್ದು ಈಗ ನಾನು ರೋಮಾಂಚನಗೊಂಡಿದ್ದೇನೆ. ನನ್ನ ನಟನೆಯು ಅಂತಿಮವಾಗಿ ಫಲ ನೀಡಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಕರ್ನಾಟಕದ ಎಲ್ಲಾ ಜನರ ಪ್ರೀತಿಯಲ್ಲಿ ನಾನು ಮುಳುಗಿದ್ದೇನೆ ಎನ್ನುತ್ತಾರೆ.

ವೈಭವಿ ಅವರು ತಮ್ಮ ಮುಂಬರುವ ಮಾರ್ಟಿನ್ ಚಿತ್ರದ ಬಗ್ಗೆಯೂ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಮಾರ್ಟಿನ್ ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಇದರಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ. ನಾನು ಬಬ್ಲಿ ಗರ್ಲ್ ಆಗಿ ನಟಿಸುತ್ತಿದ್ದೇನೆ. ಇದು ನನ್ನ ನಿಜ ಜೀವನಕ್ಕೆ ಹತ್ತಿರದ ಪಾತ್ರವಾಗಿದೆ ಎನ್ನುತ್ತಾರೆ ವೈಭವಿ.

ಕನ್ನಡ ಚಿತ್ರರಂಗದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. 'ನಾನು ವಿಭಿನ್ನ ಪಾತ್ರಗಳೊಂದಿಗೆ ಪ್ರಯೋಗ ಮಾಡಲು ಇಷ್ಟಪಡುತ್ತೇನೆ ಮತ್ತು ನನ್ನನ್ನು ಇಂತದ್ದೇ ಪಾತ್ರಕ್ಕೆಂದು ನಿರ್ಬಂಧಿಸಿಕೊಳ್ಳುವುದಿಲ್ಲ. ಇದೀಗ ನನಗೆ ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳ ಆಫರ್ ಬಂದಿದೆ. ಆದಾಗ್ಯೂ, ನನ್ನ ಮುಂದಿನ ಯೋಜನೆಗಳನ್ನು ಘೋಷಿಸುವ ಮೊದಲು 'ಮಾರ್ಟಿನ್' ಸಿನಿಮಾ ಪೂರ್ಣಗೊಳ್ಳುವುದನ್ನು ನಾನು ಇನ್ನೂ ಕಾಯುತ್ತಿದ್ದೇನೆ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT