ನಿತ್ಯಾ ಮೆನನ್ 
ಸಿನಿಮಾ ಸುದ್ದಿ

ಯಂತ್ರದಂತೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ಹಾಗೆ ನಾನು ಮಾಡುವುದಿಲ್ಲ: ನಿತ್ಯಾ ಮೆನನ್

ಯಾವುದೇ ಪಾತ್ರವಾದರೂ ಸರಿ ಅದಕ್ಕೆ ತಕ್ಕಂತೆ ಹೊಂದಿಕೊಂಡು ನಟಿಸುವುದು ನಟಿ ನಿತ್ಯಾ ಮೆನನ್ ಅವರಿಗೆ ಕಷ್ಟವಲ್ಲ. ಇದರಿಂದಾಗಿಯೇ ಅವರು ಪ್ರತಿಯೊಂದು ಸಿನಿಮಾದಲ್ಲೂ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯಾವುದೇ ಪಾತ್ರವಾದರೂ ಸರಿ ಅದಕ್ಕೆ ತಕ್ಕಂತೆ ಹೊಂದಿಕೊಂಡು ನಟಿಸುವುದು ನಟಿ ನಿತ್ಯಾ ಮೆನನ್ ಅವರಿಗೆ ಕಷ್ಟವಲ್ಲ. ಇದರಿಂದಾಗಿಯೇ ಅವರು ಪ್ರತಿಯೊಂದು ಸಿನಿಮಾದಲ್ಲೂ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಧನುಷ್ ಅಭಿನಯದ ತಿರುಚಿತ್ರಂಬಲಂನಲ್ಲಿನ ಶೋಬನಾ ಪಾತ್ರವಂತೂ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. 30 ಕೋಟಿ ಬಜೆಟ್‌ನ ಈ ನಿಸಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕೆಲಹಾಕುವತ್ತ ಮುನ್ನುಗ್ಗಿದೆ.

'ನಾನು ಏನನ್ನಾದರೂ ಪ್ರಾರಂಭಿಸಿದಾಗ, ಅಂತಿಮ ಫಲಿತಾಂಶದ ಬಗ್ಗೆ ನಾನು ಯೋಚಿಸುವುದಿಲ್ಲ. ತಿರುಚಿತ್ರಂಬಲಂ ಚಿತ್ರಕ್ಕೆ ಈ ರೀತಿಯ ಯಶಸ್ಸು ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎನ್ನುವ ಬೆಂಗಳೂರು ಮೂಲದ ನಟಿ ನಿತ್ಯಾ ಮೆನನ್, ತಮ್ಮ ನಟನೆಯ ತಮಿಳು ಚಿತ್ರ ಮತ್ತು ತನ್ನ ಪಾತ್ರದ ಯಶಸ್ಸಿಗೆ ತನ್ನ ಸಹ ನಟ ಧನುಷ್‌ಗೆ ಕಾರಣವೆಂದು ಹೇಳುತ್ತಾರೆ.

'ಈ ಚಿತ್ರಕ್ಕೆ ನನ್ನನ್ನು ಸೇರಿಸುವ ಆಲೋಚನೆ ಅವರದು. ಅವರು ಕಲಾವಿದರನ್ನು ನೋಡುತ್ತಾರೆ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಯಾರಾದರೂ ಯಶಸ್ವಿಯಾಗಿ ತೆಗೆದುಕೊಂಡು ಹೋಗುವುದು ಅದ್ಭುತವಾಗಿದೆ. 'ನನ್ನ ಪಾತ್ರವನ್ನು ಜನರು ಇಷ್ಟಪಡುತ್ತಾರೆ ಎಂದು ಧನುಷ್ ಹೇಳಿದ್ದರು ಮತ್ತು ಅವರು ಹೇಳಿದ್ದು ಈಗ ನಿಜವಾಗಿದೆ ಎನ್ನುತ್ತಾರೆ.

2006ರ ಕನ್ನಡ ಚಲನಚಿತ್ರ '7 ಓ ಕ್ಲಾಕ್‌'ನಲ್ಲಿ ಪೋಷಕ ಪಾತ್ರದೊಂದಿಗೆ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದ ನಿತ್ಯಾ, ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಹಿಂದಿ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ಸರಣಿ 'ಬ್ರೀಥ್: ಇನ್ ಟು ದಿ ಶಾಡೋಸ್' ನೊಂದಿಗೆ ಒಟಿಟಿ ಗೆ ಪ್ರವೇಶಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಅವರ ನಟನೆಗೆ ಶ್ಲಾಘನೆ ವ್ಯಕ್ತವಾಗಿದೆ.

'ಕೋವಿಡ್‌ನಿಂದಾಗಿ ಯೋಜನೆಗಳು ಸ್ಥಗಿತಗೊಂಡಿವೆ ಮತ್ತು ಅವೆಲ್ಲವೂ ಈಗ ಒಟ್ಟಿಗೆ ಮುಕ್ತಾಯಗೊಳ್ಳುತ್ತಿವೆ. ಆದ್ದರಿಂದ ನಾನು ಸ್ವಲ್ಪ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಆದರೆ, ಯಶಸ್ಸಿನ ಮೇಲೆ ಹಿಡಿತ ಸಾಧಿಸುವುದು ಅಥವಾ ಯಂತ್ರದಂತೆ ಕೆಲಸ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ನಾನು ಹಾಗೆ ಮಾಡುವುದಿಲ್ಲ. ಇದೀಗ, ನಾನು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇನೆ. ಏಕೆಂದರೆ, ಪ್ರತಿಯೊಬ್ಬ ಕಲಾವಿದನೂ ಚೇತರಿಸಿಕೊಳ್ಳಬೇಕು. ನನ್ನ ವೃತ್ತಿಯು ಯಾವಾಗಲೂ ನಾನು ಯಾರೆಂಬುದನ್ನು ತಿಳಿಸುತ್ತದೆ ಮತ್ತು ನನ್ನ ಪ್ರತಿಯೊಂದು ಚಿತ್ರದಲ್ಲೂ ನೀವು ಅದನ್ನು ನೋಡುವಿರಿ. ನಾನು ನಟನೆಯನ್ನು ಮನರಂಜನಾ ವ್ಯವಹಾರವಾಗಿ ನೋಡುವುದಿಲ್ಲ, ನಾನು ಅದನ್ನು ಕಲೆಯಾಗಿ ನೋಡುತ್ತೇನೆ' ಎಂದು ನಿತ್ಯಾ ಮೆನನ್ ತಿಳಿಸಿದ್ದಾರೆ.

ನಿತ್ಯಾ ಅವರ ಬಹುಮುಖ ಪ್ರತಿಭೆಯು ಅವರ ತೆರೆಯ ಮೇಲಿನ ಪಾತ್ರಗಳನ್ನು ಮೀರಿ ಅವರನ್ನು ಬೆಳೆಸಿದೆ. ಗಾಯಕಿಯೂ ಆಗಿರುವ ನಿತ್ಯಾ ಮೆನನ್ ಅವರು, ಇತ್ತೀಚೆಗೆ ತೆಲುಗು ಇಂಡಿಯನ್ ಐಡಲ್‌ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. 'ನಾನು ಬೇಗನೆ ಬೇಸರಗೊಳ್ಳುತ್ತೇನೆ ಮತ್ತು ಯಾವಾಗಲೂ ಹೊಸ ಅನುಭವಗಳನ್ನು ಹುಡುಕುತ್ತೇನೆ. ಈ ಮೊದಲು ನಾನು ಆ ಕೆಲಸವನ್ನು ಮಾಡಿಲ್ಲ ಎಂದಾದರೆ ನನ್ನ ಮೊದಲ ಪ್ರತಿಕ್ರಿಯೆ ಸರಿ ಮಾಡುತ್ತೇನೆ ಎಂದಿರುತ್ತದೆ' ಎಂದು ಅವರು ಹೇಳುತ್ತಾರೆ.

'ಪ್ರಾಮಾಣಿಕವಾಗಿ, ಬೇರೆ ಯಾವ ರೀತಿಯಲ್ಲಿ ಹೇಗೆ ಇರಬೇಕೆಂದು ನನಗೆ ತಿಳಿದಿಲ್ಲ. ಇದು ನಾನು ಮತ್ತು ನನ್ನ ವ್ಯಕ್ತಿತ್ವ. ಒಬ್ಬ ವ್ಯಕ್ತಿಯಾಗಿ, ಬಾಹ್ಯ ಅಥವಾ ಮೇಲ್ನೋಟಕ್ಕೆ ಸುಂದರವಾಗಿ ಕಾಣುವುದಕ್ಕೆ ನಾನು ಸೌಂದರ್ಯವರ್ಧಕ ಅಂಶಗಳಿಗೆ ಆದ್ಯತೆ ನೀಡುವುದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಸುರಕ್ಷಿತವಾಗಿದ್ದೇನೆ. ನನಗೆ ಸ್ಟಾರ್ ಆಗುವ ಅಗತ್ಯ ಇಲ್ಲ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT