ತಿಲಕರಾಜ್ ಬಲ್ಲಾಳ್, ಅರ್ಬಾಜ್ ಖಾನ್, ಜೈದ್ ಖಾನ್, ರವಿಚಂದ್ರನ್, ಸೋನಲ್ ಮೊಂತೇರೊ, ಅಚ್ಯುತ್ ಕುಮಾರ್ ಮತ್ತು ನಿರ್ದೇಶಕ ಜಯತೀರ್ಥ ಜಯಣ್ಣ. 
ಸಿನಿಮಾ ಸುದ್ದಿ

ನಾನು ಕನ್ನಡಿಗ, ಸ್ಯಾಂಡಲ್‌ವುಡ್‌ ಮೂಲಕ ಪಾದಾರ್ಪಣೆ ಮಾಡಿದ್ದು ಸಂತೋಷವಾಗಿದೆ: ಝೈದ್ ಖಾನ್

ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ, ಜಯತೀರ್ಥ ಜಯಣ್ಣ ನಿರ್ದೇಶನದ ಬನಾರಸ್ ನವೆಂಬರ್ 4ರಂದು ತೆರೆಗೆ ಬರಲಿದೆ.

ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ, ಜಯತೀರ್ಥ ಜಯಣ್ಣ ನಿರ್ದೇಶನದ ಬನಾರಸ್ ನವೆಂಬರ್ 4ರಂದು ತೆರೆಗೆ ಬರಲಿದೆ. ಚಿತ್ರದ ನಿರ್ಮಾಪಕರು ಟ್ರೈಲರನ್ನು ಬಿಡುಗಡೆ ಮಾಡಿದರು, ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಮೊದಲಾದವರು ಕೂಡ ನಟಿಸಿದ್ದಾರೆ. 

ತಿಲಕರಾಜ್ ಬಲ್ಲಾಳ್ ನಿರ್ಮಿಸಿರುವ ಝೈದ್ ಖಾನ್ ಅವರ ಮೊದಲ ಚಿತ್ರವು ಬಹು ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಬನಾರಸ್ ಇದುವರೆಗೆ ಪ್ರೇಮಕಥೆ ಎಂದು ಬಿಂಬಿಸಲಾಗಿತ್ತು, ಆದರೆ ಮೊನ್ನೆ ಟ್ರೈಲರ್ ಬಿಡುಗಡೆಯಾದಾಗ ಅದರಲ್ಲಿ ಝೈದ್ ಖಾನ್ ಗಗನಯಾತ್ರಿಯಾಗಿ ಕಾಣಿಸಿಕೊಂಡಿರುವ ಟೈಮ್‌ಟ್ರಾವೆಲ್ ಚಿತ್ರ ಎಂದು ತಂಡವು ಎಲ್ಲರನ್ನು ಅಚ್ಚರಿಗೊಳಿಸಿತು. ರೊಮ್ಯಾಂಟಿಕ್ ಸಿನಿಮಾವು ವೈಜ್ಞಾನಿಕ ಕಾಲ್ಪನಿಕ ಕಥೆಯನ್ನು ಹೊಂದಿದೆ. 

ಬನಾರಸ್ ಚಿತ್ರದ ಸ್ಟಿಲ್

"ಟೈಮ್ ಟ್ರಾವೆಲ್  ಭಾರತೀಯ ಚಿತ್ರರಂಗದಲ್ಲಿ ತೋರಿಸಿರುವುದು ಕಡಿಮೆ, ಬನಾರಸ್‌ನಲ್ಲಿ ಅದನ್ನು ಪ್ರಯತ್ನಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ನಿರ್ದೇಶಕ ಜಯತೀರ್ಥ ಹೇಳಿದರು, ಕಾಶಿಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ಶೀರ್ಷಿಕೆಯು ಕಥೆಗೆ ಹೊಂದಿಕೆಯಾಗುತ್ತದೆ. ಚಿತ್ರದಲ್ಲಿ ತಾತ್ವಿಕ ಮತ್ತು ದೈವಿಕತೆ ಇರುತ್ತದೆ. ನಾವು ಚಿತ್ರದ ಶೇಕಡಾ 90ರಷ್ಟು ಭಾಗವನ್ನು ಬನಾರಸ್‌ನಲ್ಲಿ ಚಿತ್ರೀಕರಿಸಿದ್ದೇವೆ. ಎಂದರು.

ಝೈದ್ ಖಾನ್ ಅವರಿಗೆ ಬಾಲಿವುಡ್ ನಿಂದ ಅವಕಾಶಗಳು ಬಂದಿದ್ದವಂತೆ. ಆದರೆ ಅವರು ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರದೊಂದಿಗೆ ಪ್ರಾರಂಭಿಸಬೇಕೆಂದು ಸ್ಯಾಂಡಲ್ ವುಡ್ ಆಯ್ಕೆ ಮಾಡಿಕೊಂಡರು. ನಾನು ಕನ್ನಡಿಗ, ಮತ್ತು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವುದು ಇಲ್ಲಿ ಮುಂದುವರಿಯುವುದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡರು.

ಚಿತ್ರದ ನಾಯಕಿ ಸೋನಾಲ್ ಮೊಂಟೇರೊ, ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಬನಾರಸ್ ನನ್ನ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ಎಂದರು. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ನೀಡಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ಮದುವೆ ರದ್ದು ಬೆನ್ನಲ್ಲೇ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್!

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

SCROLL FOR NEXT