ಸಾಂಕೇತಿಕ ಚಿತ್ರ 
ಸಿನಿಮಾ ಸುದ್ದಿ

ಸಿನಿಮಾ ಪ್ರಚಾರಕ್ಕೆ ತೆರಳಿದ್ದ ಮಲಯಾಳಂನ ಪ್ರಸಿದ್ಧ ನಟಿಯರ ಮೇಲೆ ಮಾಲ್‌ವೊಂದರಲ್ಲಿ ಲೈಂಗಿಕ ದೌರ್ಜನ್ಯ

ನನ್ನ ಸಹೋದ್ಯೋಗಿಗೂ ಇದೇ ರೀತಿಯ ಅನುಭವವಾಗಿತ್ತು. ಅವರು ಕೂಡಲೇ ಪ್ರತಿಕ್ರಿಯಿಸಿದರು... ಆದರೆ, ನಾನು ಒಂದು ಕ್ಷಣ ಮೂಕವಿಸ್ಮಿತಳಾಗಿದ್ದರಿಂದ ಆ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಲು ನನಗೆ ಸಾಧ್ಯವಾಗಲಿಲ್ಲ...' ಎಂದು ನಟಿ ನಿನ್ನೆ ರಾತ್ರಿ ಪೋಸ್ಟ್‌ ಮಾಡಿದ್ದಾರೆ.

ಕೋಯಿಕ್ಕೋಡ್: ಮಲಯಾಳಂನ ಜನಪ್ರಿಯ ನಟಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದು, ಉತ್ತರ ಕೇರಳದ ಜಿಲ್ಲೆಯ ಮಾಲ್‌ವೊಂದರಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಲೈಂಗಿಕ ದುರ್ವರ್ತನೆಯನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಜನರಿಂದಾಗುವ 'ಲೈಂಗಿಕ ದೌರ್ಜನ್ಯ'ದ ಬಗ್ಗೆ ತನ್ನ ದುಃಖ ಮತ್ತು ಕಳವಳವನ್ನು ವ್ಯಕ್ತಪಡಿಸಿರುವ ನಟಿ, ಜನನಿಬಿಡ ಮಾಲ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮತ್ತೊಬ್ಬ ನಟಿಗೂ ಇದೇ ರೀತಿಯ ಅನುಭವವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಘಟನೆಯ ವಿಡಿಯೋಗಳು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ ಮತ್ತು ಸ್ಥಳೀಯ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿವೆ.

'ಕೋಯಿಕ್ಕೋಡ್ ನನಗೆ ತುಂಬಾ ಇಷ್ಟವಾದ ಸ್ಥಳ. ಆದರೆ, ಇಂದು ರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದುಕೊಂಡರು. ಎಲ್ಲಿ ಎಂದು ಹೇಳಲು ಅಸಹ್ಯವೆನಿಸುತ್ತದೆ! ನಮ್ಮ ಸುತ್ತಲಿನ ಜನರು ಹತಾಶೆಗೊಂಡಿದ್ದಾರೆಯೇ? ನಾವು ಹಲವಾರು ಸ್ಥಳಗಳಿಗೆ ಹೋಗಿದ್ದೇವೆ. ಆದರೆ, ಇಂತಹ ಅಸಹ್ಯಕರ ಅನುಭವ ನನಗೆ ಬೇರೆಲ್ಲೂ ಆಗಿಲ್ಲ' ನಟಿ ಬರೆದುಕೊಂಡಿದ್ದಾರೆ.

ನನ್ನ ಸಹೋದ್ಯೋಗಿಗೂ ಇದೇ ರೀತಿಯ ಅನುಭವವಾಗಿತ್ತು. ಅವರು ಕೂಡಲೇ ಪ್ರತಿಕ್ರಿಯಿಸಿದರು... ಆದರೆ, ನಾನು ಒಂದು ಕ್ಷಣ ಮೂಕವಿಸ್ಮಿತಳಾಗಿದ್ದರಿಂದ ಆ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಲು ನನಗೆ ಸಾಧ್ಯವಾಗಲಿಲ್ಲ...' ಎಂದು ನಟಿ ನಿನ್ನೆ ರಾತ್ರಿ ಪೋಸ್ಟ್‌ ಮಾಡಿದ್ದಾರೆ.

ಜನಸಂದಣಿಯಿಂದ ಅನುಚಿತ ವರ್ತನೆಗೆ ಒಳಗಾದ ಇನ್ನೊಬ್ಬ ನಟಿ ಕೂಡ ತನ್ನ ಇನ್‌ಸ್ಟಾಗ್ರಾಂ ಮೂಲಕ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

'ಮಾಲ್‌ನಲ್ಲಿ ಜನ ಕಿಕ್ಕಿರಿದು ತುಂಬಿದ್ದರು ಮತ್ತು ಭದ್ರತಾ ಸಿಬ್ಬಂದಿ ಕೂಡ ಜನರನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ಸಹ-ನಟಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆದರೆ, ಆಕೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ' ಎಂದು ಅವರು ಹೇಳಿದ್ದಾರೆ.

'ನಂತರ, ನನಗೂ ಇದೇ ರೀತಿಯ ಅನುಭವವಾಯಿತು. ಆದರೆ, ನಾನು ಪ್ರತಿಕ್ರಿಯಿಸಿದೆ.... ಯಾರೂ ಕೂಡ ತಮ್ಮ ಜೀವನದಲ್ಲಿ ಈ ರೀತಿಯ ಅನಗತ್ಯ ಆಘಾತವನ್ನು ಎದುರಿಸಬಾರದು ಎಂದು ನಾನು ಬಯಸುತ್ತೇನೆ..., ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.

ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT