ಸಿನಿಮಾ ಸುದ್ದಿ

'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದ ಯೂಟ್ಯೂಬರ್‌ ನ ತರಾಟೆಗೆ ತೆಗೆದುಕೊಂಡ 'ಪೆಂಟಗನ್' ನಟಿ 'ತನಿಷಾ ಕುಪ್ಪಂಡ'

Srinivasamurthy VN

ಬೆಂಗಳೂರು: ಸಂದರ್ಶನದ ವೇಳೆ 'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದು  ಕೇಳಿದ ಯೂಟ್ಯೂಬರ್ ಒಬ್ಬರನ್ನು 'ಪೆಂಟಗನ್' ಚಿತ್ರದ ನಟಿ ತನಿಷಾ ಕುಪ್ಪಂಡ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಇತ್ತೀಚೆಗೆ ಸಿನಿಮಾದ ಪ್ರಚಾರ ಅಂಗವಾಗಿ ತನಿಷಾ ಅವರು ಯೂಟ್ಯೂಬ್ ಸಂದಶರ್ನವೊಂದರಲ್ಲಿ ಭಾಗವಹಿಸಿದ್ದರು. ಸಂದರ್ಶನದ ವೇಳೆ 'ಅಶ್ಲೀಲ ಚಿತ್ರ' ಮಾಡುತ್ತೀರಾ ಎಂದು  ಕೇಳಿದ ಯೂಟ್ಯೂಬರ್ ನನ್ನು ನಟಿ ತನಿಷಾ ಕುಪ್ಪಂಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂದರ್ಶನ ವೇಳೆ ನೀವು ನ್ಯೂಡ್ ಫಿಲ್ಮ್‌ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟಿ ಮುಜುಗರದ ಸನ್ನಿವೇಶಕ್ಕೆ ಒಳಗಾಗಿದ್ದು, ಯೂಟ್ಯೂಬರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

ʻʻನ್ಯೂಡ್ ಮಾಡುವುದು ಪೋರ್ನ್ ಸ್ಟಾರ್ ಮಾಡುತ್ತಾರೆ. ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲ್ಮ್‌ ಮಾಡಲಿಕ್ಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೊರ್ನ್‌ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿʼʼ ಎಂದಿದ್ದಾರೆ. 

ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತನಿಷಾ ಅವರನ್ನು ಬೆತ್ತಲೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೀರಾ ಎಂದು ಯೂಟ್ಯೂಬರ್‌ ಕೇಳಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟಿ ಸೇರಿದಂತೆ ಅನೇಕರು ಯೂಟ್ಯೂಬರ್‌ನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಐದು ಕಥೆಗಳನ್ನು (Kannada New Movie) ಒಳಗೊಂಡ, `ಪೆಂಟಗನ್’ ಸಿನಿಮಾ (Pentagon Movie) ಏಪ್ರಿಲ್ 7 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಸಿನಿಮಾ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ʻಪೆಂಟಗನ್’ ಸಿನಿಮಾದಲ್ಲಿ ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜೀ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇದೆ. ಪ್ರಕಾಶ್ ಬೆಳವಾಡಿ, ಕಿಶೋರ್, ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.
 

SCROLL FOR NEXT