ನಿರ್ದೇಶಕ ಪ್ರಕಾಶ್ ರಾಜ್ ಮೆಹು ಪೋಸ್ಟ್ ಮಾಡಿರುವ ಫೋಟೋ 
ಸಿನಿಮಾ ಸುದ್ದಿ

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಗೆ ಮದುವೆಯಾಗಿ ವಯಸ್ಸಿಗೆ ಬಂದ ಮಗನಿದ್ದಾನೆಯೇ?: ನಿರ್ದೇಶಕನ ಪೋಸ್ಟ್ ವೈರಲ್

ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ ಒಂದು ಸೆನ್ಸೇಷನಲ್ ಸುದ್ದಿಯನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಲೀಲಾವತಿಯವರು ಮತ್ತು ಅವರ ಪುತ್ರ ವಿನೋದ್ ರಾಜ್ ಅವರೇ ಹೇಳಬೇಕಾಗಿದೆ.

ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ ಒಂದು ಸೆನ್ಸೇಷನಲ್ ಸುದ್ದಿಯನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಲೀಲಾವತಿಯವರು ಮತ್ತು ಅವರ ಪುತ್ರ ವಿನೋದ್ ರಾಜ್ ಅವರೇ ಹೇಳಬೇಕಾಗಿದೆ.

ವಿನೋದ್ ರಾಜ್ ಅವರು ತಮ್ಮ ಇಳಿವಯಸ್ಸಿನ ತಾಯಿ ಲೀಲಾವತಿಯವರನ್ನು ನೋಡಿಕೊಂಡು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ವಾಸವಾಗಿದ್ದಾರೆ. ಅವರ ಮದುವೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ಇದೀಗ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ ಫೇಸ್ ಬುಕ್ ಪುಟದಲ್ಲಿ ಒಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಅದೇನೆಂದರೆ ವಿನೋದ್ ರಾಜ್ ಅವರಿಗೆ ಹೆಗಲೆತ್ತರಕ್ಕೆ ಬೆಳೆದ ಮಗನಿದ್ದು ಚೆನ್ನೈಯಲ್ಲಿ ಓದುತ್ತಿದ್ದಾನೆ. ವಿನೋದ್ ರಾಜ್ ಪತ್ನಿ ಮತ್ತು ಪುತ್ರ ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. 

ಈ ಫೋಟೋ ಸಿಕ್ಕಿ ನನಗೆ ಹಲವು ಸಮಯವಾಗಿತ್ತು. ಆದರೆ ಸೂಕ್ತ ದಾಖಲೆಗಳಿಗಾಗಿ ನಾನು ಕಾಯುತ್ತಿದ್ದೆ. ಇತ್ತೀಚೆಗೆ ನನಗೆ ಗೆಳೆಯರೊಬ್ಬರು ಚೆನ್ನೈಯಿಂದ ಈ ಅಂಕಪಟ್ಟಿ ಮತ್ತು ಆಸ್ತಿ ದಾಖಲೆ ಪತ್ರಗಳನ್ನು ಕಳಿಹಿಸಿಕೊಟ್ಟಿದ್ದಾರೆ. ಹೀಗಾಗಿ ಬಹಿರಂಗಪಡಿಸುತ್ತಿದ್ದೇನೆ ಎಂದು  ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

'ಅವರು ರಕ್ತದ ರುಚಿ ನೋಡಿದ್ದಾರೆ': PCB ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಪ್ರಧಾನಿ ಸೋದರಿಯರ ಗಂಭೀರ ಆರೋಪ

T20 World Cup 2026: ಭಾರತದ ವಿರುದ್ಧ ಪಂದ್ಯ ಆಡಲು 'Actual Hero' ಕಾರಣ; ವರಸೆ ಬದಲಿಸಿದ ಪಾಕಿಸ್ತಾನ!

ಜೇವರ್ಗಿ-ಬಳ್ಳಾರಿ ಮಾರ್ಗ ಸೇರಿ ರಾಜ್ಯದ 6 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಅನುಮೋದನೆ

SCROLL FOR NEXT