ನಯನತಾರಾ, ವಿಘ್ನೇಶ್ ದಂಪತಿ 
ಸಿನಿಮಾ ಸುದ್ದಿ

ಅಭಿಮಾನಿಯ ಫೋನ್ ಒಡೆಯುವುದಾಗಿ ನಟಿ ನಯನತಾರಾ ಎಚ್ಚರಿಕೆ, ವಿಡಿಯೋ ವೈರಲ್!

ಚಿತ್ರ ನಟಿ ನಯನತಾರಾ ತಮ್ಮ ಪತಿ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅಭಿಮಾನಿಯೊಬ್ಬರ ಮೇಲೆ ಕೆರಳಿದ ಘಟನೆ ನಡೆದಿದೆ.

ಮುಂಬೈ: ಚಿತ್ರ ನಟಿ ನಯನತಾರಾ ತಮ್ಮ ಪತಿ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅಭಿಮಾನಿಯೊಬ್ಬರ ಮೇಲೆ ಕೆರಳಿದ ಘಟನೆ ನಡೆದಿದೆ.

ಇವರಿಬ್ಬರು ಇತ್ತೀಚೆಗೆ ಕುಂಭಕೋಣಂ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪಂಗುನಿ ಉತಿರಂ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ದಂಪತಿ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಗುಂಪು ಗುಂಪಾಗಿ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ತನ್ನ ಮೊಬೈಲ್ ನಿಂದ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ನಯನತಾರಾ, ಕೋಪಗೊಂಡಿದ್ದು, ಅಭಿಮಾನಿಯ ಫೋನ್ ಒಡೆಯುವುದಾಗಿ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.

ವಿಘ್ನೇಶ್ ಮತ್ತು ನಯನತಾರಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹ ಮಹೋತ್ಸವದಲ್ಲಿ ರಜನಿಕಾಂತ್ ಮತ್ತು ಶಾರುಖ್ ಖಾನ್ ಭಾಗವಹಿಸಿದ್ದರು.ಮದುವೆಯಾದ ತಿಂಗಳ ನಂತರ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!