ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದ ರಾಜಸ್ಥಾನದ ನಂದಿನಿ ಗುಪ್ತಾ 
ಸಿನಿಮಾ ಸುದ್ದಿ

ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದ ರಾಜಸ್ಥಾನದ ನಂದಿನಿ ಗುಪ್ತಾ

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023ರ ಕಿರೀಟ ರಾಜಸ್ಥಾನದ ನಂದಿನಿ ಗುಪ್ತಾ ಮುಡಿಗೇರಿದೆ.

ಮುಂಬೈ: ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023ರ ಕಿರೀಟ ರಾಜಸ್ಥಾನದ ನಂದಿನಿ ಗುಪ್ತಾ ಮುಡಿಗೇರಿದೆ.

ಶನಿವಾರ ಮಣಿಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 19 ವರ್ಷದ ನಂದಿನಿ ಗುಪ್ತಾ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಆಪ್, ಹಾಗೂ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2 ನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ‘ಗ್ರ್ಯಾಂಡ್ ಮಿಸ್ ವರ್ಲ್ಡ್’ ಸ್ಪರ್ಧೆಯ 71ನೇ ಆವೃತ್ತಿಯಲ್ಲಿ ಭಾರತವನ್ನು ನಂದಿನಿ ಪ್ರತಿನಿಧಿಸಲಿದ್ದಾರೆ. ನಂದಿನಿ ಗುಪ್ತಾ ಅವರು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಮಿಸ್‌ ಇಂಡಿಯಾ ಸಂಸ್ಥೆಯ ಪ್ರಕಾರ, ರತನ್ ಟಾಟಾ ಅವರು ನಂದಿನಿಯ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ. ಅವರ ಮಾನವೀಯತೆ ಹಾಗೂ ದಾನ ಮಾಡುವ ಗುಣ ಹೆಚ್ಚು ಇಷ್ಟಪಡುತ್ತಾರೆ. ಪ್ರಿಯಾಂಕ ಚೋಪ್ರಾ ಅವರ ಸಾಧನೆಗಳಿಂದ ನಂದಿನಿ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದಾರೆಂದು ಸಂದರ್ಶನ ಒಂದರಲ್ಲಿ ತಿಳಿಸಿದೆ. 

‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ 59ನೇ ಆವೃತ್ತಿಯಲ್ಲಿ ನಂದಿನಿ ಗುಪ್ತಾ ಕಿರೀಟ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಭಾಗವಹಿಸಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2028ಕ್ಕೆ'ನನ್ನ ತಂದೆಯೇ ಮುಖ್ಯಮಂತ್ರಿ'- ಪ್ರಿಯಾಂಕಾ ಜಾರಕಿಹೊಳಿ

ಕೇರಳ: ಹೋಟೆಲ್ ನಲ್ಲಿ ಲಿಫ್ಟ್ ನಲ್ಲಿ ಸಿಲುಕಿಕೊಂಡ ಕಾಂಗ್ರೆಸ್ ನಾಯಕ ಶಶಿ ತರೂರ್! ಮುಂದೇನಾಯ್ತು? Video

ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು: ಆತಂಕ ಪಡುವ ಅಗತ್ಯವಿಲ್ಲ ಎಂದ ಹೆಚ್​​ಡಿ ಕುಮಾರಸ್ವಾಮಿ, ಆಸ್ಪತ್ರೆ ಬುಲೆಟಿನ್ ಬಿಡುಗಡೆ

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!

ಸೌಮ್ಯಾ ರೆಡ್ಡಿಗೆ ಹಿನ್ನಡೆ: ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್!