US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್‌; ಕರ್ನಾಟಕದೊಂದಿಗೂ ನಂಟು!

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿರುವ ಡೆಮಾಕ್ರಟಿಕ್ ನಾಯಕ ಅಬ್ದುಲ್ ಅಲ್-ಸಯೀದ್, ಅಮೆರಿಕದ ಇತಿಹಾಸದಲ್ಲೇ ಸೆನೆಟ್‌ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಹಾಗೂ ಈಜಿಪ್ಟ್ ಮೂಲದ ಅಮೆರಿಕನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
US Gets 1st Muslim Senator As Abdul El-Sayed Wins Michigan Senate Race
ಅಬ್ದುಲ್ ಅಲ್-ಸಯೀದ್
Updated on: 

ವಾಷಿಂಗ್ಟನ್: ಮಿಚಿಗನ್‌ನ ಸೆನೆಟ್ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಡೆಮೋಕ್ರಾಟಿಕ್ ಪಕ್ಷದ ಡಾ. ಅಬ್ದುಲ್ ಅಲ್-ಸಯೀದ್ ಅವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿರುವ ಡೆಮಾಕ್ರಟಿಕ್ ನಾಯಕ ಅಬ್ದುಲ್ ಅಲ್-ಸಯೀದ್, ಅಮೆರಿಕದ ಇತಿಹಾಸದಲ್ಲೇ ಸೆನೆಟ್‌ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಹಾಗೂ ಈಜಿಪ್ಟ್ ಮೂಲದ ಅಮೆರಿಕನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ಜಿಹಾದಿ’ ಎಂದು ಅಬ್ದುಲ್ ಟೀಕಿಸಿದ್ದರು. ಆದರೆ, ಆ ವಿವಾದಗಳ ನಡುವೆಯೂ ಅಬ್ದುಲ್ ಅವರು ಗೆಲುವಿನ ನಗೆ ಬೀರಿದ್ದಾರೆ.

US Gets 1st Muslim Senator As Abdul El-Sayed Wins Michigan Senate Race
US Midterm Polls: ಗವರ್ನರ್ ಚುನಾವಣೆಯಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಗೆ ಸೋಲು, ಇತಿಹಾಸ ನಿರ್ಮಿಸಿದ ಆಮಿ!

42 ವರ್ಷದ ಅಬ್ದುಲ್ ಅಲ್-ಸಯ್ಯದ್ ಅವರ ಗೆಲುವು ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದುವರೆಗೆ ಅಮೆರಿಕಾದ ಸೆನೆಟ್‌ಗೆ ಯಾವುದೇ ಮುಸ್ಲಿಂ ವ್ಯಕ್ತಿ ಆಯ್ಕೆಯಾಗಿರಲಿಲ್ಲ. ಈ ಮೂಲಕ ಆ ಇತಿಹಾಸವನ್ನು ಅವರು ಸೃಷ್ಟಿಸಿದ್ದಾರೆ.

ಯಾರು ಈ ಅಬ್ದುಲ್?

ಅಬ್ದುಲ್ ಎಲ್-ಸಯ್ಯದ್ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ವೈದ್ಯಕೀಯ ಮತ್ತು ಆರೋಗ್ಯ ತಜ್ಞರು. ಈಜಿಪ್ಟ್‌ನಿಂದ ವಲಸೆ ಬಂದ ಪೋಷಕರಿಗೆ ಅಮೆರಿಕದಲ್ಲಿ ಜನಿಸಿದ ಅವರು, ಸಾರ್ವಜನಿಕ ಆರೋಗ್ಯ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸುವುದು, ದುಡಿಯುವ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸುವುದು ಮತ್ತು ರಾಜಕೀಯದಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪ್ರಭಾವ ಕಡಿಮೆ ಮಾಡುವುದು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿದ್ದವು.

ಅಬ್ದುಲ್ ಗ ಇದೆ ಕರ್ನಾಟಕದ ನಂಟು

ಅಬ್ದುಲ್ ಅಲ್-ಸಯೀದ್ ಅವರಿಗೆ ಭಾರತ, ಅದರಲ್ಲೂ ಕರ್ನಾಟಕದ ಕರಾವಳಿಯ ಭಟ್ಕಳದೊಂದಿಗಿನ ನಂಟು ಇರುವುದು ವಿಶೇಷವಾಗಿದೆ. ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಭಟ್ಕಳ ಮೂಲದ ಹೆಸರಾಂತ ಅಮೆರಿಕನ್ ವೈದ್ಯ ಡಾ. ತಯ್ಯಬ್ ಜುಕಾಕು ಅವರ ಪುತ್ರಿ.

ಅಮೆರಿಕದಲ್ಲಿ ನೆಫ್ರಾಲಜಿಸ್ಟ್ ಆಗಿ ಸೇವೆ ಸಲ್ಲಿಸಿರುವ ಡಾ. ತಯ್ಯಬ್ ಜುಕಾಕು ಅವರು ಭಟ್ಕಳದ ಹಿರಿಯ ಸಾಮಾಜಿಕ ಮತ್ತು ರಾಜಕೀಯ ಧುರೀಣ ದಿವಂಗತ ಶಂಸುದ್ದೀನ್ ಜುಕಾಕು ಅವರ ಪುತ್ರ.

ಶಂಸುದ್ದೀನ್ ಜುಕಾಕು ಅವರು ಬಾಂಬೆ ಪ್ರೆಸಿಡೆನ್ಸಿಯಿಂದ ಒಂದು ಬಾರಿ ಹಾಗೂ ಹೊನ್ನಾವರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಡಿ. ಜತ್ತಿ ಅವರ ಸರಕಾರದಲ್ಲಿ ಆರ್ಥಿಕ ಖಾತೆಯ ಸಹಾಯಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಅಬ್ದುಲ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಶಂಸುದ್ದೀನ್ ಜುಕಾಕು ಅವರ ಮೊಮ್ಮಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X