ಸಿನಿಮಾ ಸುದ್ದಿ

'ಕೆಜಿಎಫ್ ಚಿತ್ರ ಭಾರತದ ಭಾಷೆಯ ಗಡಿಯನ್ನು ದಾಟಿದ್ದರೆ, 'ಕಾಂತಾರ' ಧಾರ್ಮಿಕ ಗಡಿಯನ್ನು ಮುರಿದಿದೆ'

Ramyashree GN

ಕೆಜಿಎಫ್ ಮತ್ತು ಕಾಂತಾರ ಸೃಷ್ಟಿಸಿದ ಯಶಸ್ಸಿನ ಅಲೆಯಿಂದಾಗಿ ಇಂದಿಗೂ ಎಲ್ಲಾ ಭಾಷೆಗಳಲ್ಲಿಯೂ ಇದರ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇದೀಗ ಈ ಎರಡೂ ಸಿನಿಮಾಗಳನ್ನು ಪೊನ್ನಿಯಿನ್ ಸೆಲ್ವನ್ ಪಾತ್ರವರ್ಗ ಹೊಗಳಿದೆ. ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್- 2 ಸಿನಿಮಾ ಏಪ್ರಿಲ್ 28 ರಂದು ತೆರೆಗೆ ಬರಲಿದೆ. ಹೀಗಾಗಿ, ಚಿತ್ರದ ಪಾತ್ರವರ್ಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ತಂಡವು ಬೆಂಗಳೂರಿಗೆ ಬಂದಿತ್ತು. ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಕ್ರಮ್, ತ್ರಿಶಾ, ಕಾರ್ತಿ ಮತ್ತು ಜಯಂ ರವಿ ಕನ್ನಡ ಸಿನಿಮಾ, ಅದರ ಯಶಸ್ಸು ಮತ್ತು ಚಿತ್ರರಂಗದ ಭಾಗವಾಗಬೇಕೆಂಬ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು.

'ಕೆಜಿಎಫ್ ಸಿನಿಮಾ ಭಾರತದ ಭಾಷೆಯ ಗಡಿಯನ್ನು ಒಡೆದರೆ, 'ಕಾಂತಾರ' ಧರ್ಮದ ಗಡಿಯನ್ನು ಮುರಿದಿದೆ ಎಂದು ಹೇಳಿದ ರವಿ, ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಸಿನಿಮಾ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ವಿಕ್ರಮ್ ಮತ್ತು ಕಾರ್ತಿ ಅವರು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ತ್ರಿಶಾ ಅವರು ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

'ನಾನು ಈ ಹಿಂದೆ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಪವನ್ ಕುಮಾರ್ ನಿರ್ದೇಶನದ ಚಿತ್ರಕ್ಕಾಗಿ ಅವರೊಂದಿಗೆ ಮತ್ತೆ ಕೆಲಸ ಮಾಡಬೇಕಾಗಿತ್ತು. ಆದರೆ, ದುರದೃಷ್ಟವಶಾತ್, ಅದು ಪ್ರಾರಂಭವಾಗಲಿಲ್ಲ. ನಾನು ಕನ್ನಡ ಸಿನಿಮಾಗಳನ್ನು ನೋಡುತ್ತೇನೆ ಮತ್ತು ಕಾಂತಾರವನ್ನು ಎರಡು ಬಾರಿ ನೋಡಿದ್ದೇನೆ. ನಾನು ಇಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ತ್ರಿಷಾ ಹೇಳಿದರು.

ಪೊನ್ನಿಯಿನ್ ಸೆಲ್ವನ್ 2 ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ವಿಕ್ರಮ್, 'ಪೊನ್ನಿಯಿನ್ ಸೆಲ್ವನ್ 2 ನೋಡಲೇಬೇಕಾದ ಚಿತ್ರ ಎಂದು ಪ್ರತಿಪಾದಿಸಿದರು. ಇದನ್ನೇ ಮತ್ತೆ ಉಚ್ಚರಿಸಿದ ಕಾರ್ತಿ, 'ಪೊನ್ನಿಯಿನ್ ಸೆಲ್ವನ್-1 ಗಾಗಿ ತೋರಿದ ಪ್ರೀತಿಯು ಮುಂದಿನ ಭಾಗದ ಮೇಲೂ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಪೊನ್ನಿಯಿನ್ ಸೆಲ್ವನ್ ಹತ್ತನೇ ಶತಮಾನದ ರಾಜರು ಹೇಗೆ ಬದುಕಿದ್ದರು ಎಂಬುದರ ಘನ ಅನ್ವೇಷಣೆಯಾಗಿದೆ ಮತ್ತು ಆ ಸೌಂದರ್ಯದ ದೃಶ್ಯಗಳು ಅನುಭವವನ್ನು ಹೆಚ್ಚಿಸುತ್ತವೆ' ಎಂದರು.

ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿಯನ್ನು ಆಧರಿಸಿ, ಪೊನ್ನಿಯಿನ್ ಸೆಲ್ವನ್ 1 ಮತ್ತು 2 ಅನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಎಆರ್ ರೆಹಮಾನ್ ಸಂಗೀತವಿರುವ ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಐಶ್ವರ್ಯಾ ಲಕ್ಷ್ಮಿ, ಶರತ್ ಕುಮಾರ್, ಪಾರ್ಥಿಬನ್, ರೆಹಮಾನ್, ಜಯಚಿತ್ರ ಮತ್ತು ವಿಕ್ರಮ್ ಪ್ರಭು ನಟಿಸಿದ್ದಾರೆ.

SCROLL FOR NEXT