ಶ್ವೇತಾ ಶ್ರೀವಾಸ್ತವ್ 
ಸಿನಿಮಾ ಸುದ್ದಿ

'ರಾಘವೇಂದ್ರ ಸ್ಟೋರ್ಸ್‌' ನಂತಹ ಕಮರ್ಷಿಯಲ್ ಚಿತ್ರಕ್ಕೆ ಆಯ್ಕೆಯಾಗುತ್ತೇನೆಂದು ಭಾವಿಸಿರಲಿಲ್ಲ: ಶ್ವೇತಾ ಶ್ರೀವಾತ್ಸವ್

ನಟಿ ಶ್ವೇತಾ ಶ್ರೀವಾತ್ಸವ್ ರಾಘವೇಂದ್ರ ಸ್ಟೋರ್ಸ್‌ಗೆ ಬರುವವರೆಗೂ ಮುಖ್ಯವಾಹಿನಿಯ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಅಂದುಕೊಂಡಿರಲ್ಲವಂತೆ. ಹೊಂಬಾಳೆ ಫಿಲಂಸ್ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರಂತಹ ದೊಡ್ಡ ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆ ತನ್ನನ್ನು ಸಂಪರ್ಕಿಸಿದಾಗ ಮಿಶ್ರ ಭಾವನೆ ಹೊಂದಿದ್ದಾಗಿ ತಿಳಿಸಿದ್ದಾರೆ. 

ನಟಿ ಶ್ವೇತಾ ಶ್ರೀವಾತ್ಸವ್ ರಾಘವೇಂದ್ರ ಸ್ಟೋರ್ಸ್‌ಗೆ ಬರುವವರೆಗೂ ಮುಖ್ಯವಾಹಿನಿಯ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಅಂದುಕೊಂಡಿರಲ್ಲವಂತೆ. ಹೊಂಬಾಳೆ ಫಿಲಂಸ್ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರಂತಹ ದೊಡ್ಡ ನಿರ್ದೇಶಕರು ತನ್ನನ್ನು ಸಂಪರ್ಕಿಸಿದಾಗ ಮಿಶ್ರ ಭಾವನೆ ಹೊಂದಿದ್ದಾಗಿ ತಿಳಿಸಿದ್ದಾರೆ. 

ಈ ವಾರ ರಾಘವೇಂದ್ರ ಸ್ಟೋರ್ಸ್ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುಂಚಿತವಾಗಿ ಶ್ವೇತಾ ಅವರು ನವರಸ ನಾಯಕ ಜಗ್ಗೇಶ್ ಅವರೊಂದಿಗೆ ಪರದೆ ಹಂಚಿಕೊಂಡ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. “15 ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದರೂ ಪ್ರಯಾಣ ಸುಲಭವಲ್ಲ. ಹೆಚ್ಚಾಗಿ ನಾನು ಸ್ತ್ರೀ ಆಧಾರಿತ ವಿಷಯದ ಭಾಗವಾಗಿದ್ದೇನೆ. ಹಾಗಾಗಿ ನಿರ್ದೇಶಕರು ನನ್ನನ್ನು ಮುಖ್ಯವಾಹಿನಿಯ ವಾಣಿಜ್ಯ ಮನರಂಜನೆಯ ಚಿತ್ರಗಳಿಗೆ ಪರಿಗಣಿಸುತ್ತಾರೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದರು. 

ನಟಿ ಶ್ವೇತಾ ಶ್ರೀವಾಸ್ತವ್

ಚಿತ್ರದಲ್ಲಿ ನಟಿಸುವ ಬಗ್ಗೆ ಯೋಚಿಸುವುದನ್ನು ಬಹಳ ಹಿಂದೆಯೇ ನಿಲ್ಲಿಸಿದ್ದೆ. ಈ ಮಧ್ಯೆ ಮಗಳನ್ನು ನೋಡಿಕೊಳ್ಳಲು ಸಿನಿಮಾದಿಂದ ಬಿಡುವು ಕೂಡ ಮಾಡಿಕೊಂಡಿದ್ದೆ. ಬೆಳ್ಳಿತೆರೆಗೆ ಮರಳಲು ಬಯಸಿದಾಗ ಈ ಆಫರ್ ನನಗೆ ಬಂದಿತು. ಅದನ್ನು ಖುಷಿಯಿಂದ ಸ್ವೀಕರಿಸಿದ್ದೇನೆ ಎನ್ನುವ ಶ್ವೇತಾ,  ತಮ್ಮ ಮಗಳೊಂದಿಗೆ ಬಾಂಧವ್ಯ ಕುರಿತು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದೆ. ಈ ಕಾರಣದಿಂದಲೂ ನಿರ್ದೇಶಕರು ಹಾಗೂ ನಿರ್ಮಾಪಕರು ತನಗೆ ಅವಕಾಶ ನೀಡಿರಬಹುದು ಎನ್ನುತ್ತಾರೆ. 

ಟ್ರೇಲರ್‌  ಮೂಲಕ ಅವರ ಪಾತ್ರದ ಬಗ್ಗೆ ಬಹಿರಂಗಪಡಿಸಿದ್ದಾರೆ. ಒಂದು ಕುಟುಂಬದಲ್ಲಿ ಮಹಿಳೆಯ ಪ್ರಾಮುಖ್ಯತೆಯನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತರಲು ಪ್ರಯತ್ನಿಸಿದ್ದಾರೆ, ಅದು ಪ್ರಬುದ್ಧವಾಗಿದೆ. ಕಲಾವಿದರಿಗೆ ಬಹುಮುಖ ಪ್ರತಿಭೆ ಬಹಳ ಮುಖ್ಯ. ವೈಜಯಂತಿ ಎಂಬ ಈ ಪಾತ್ರ ಒಳಗಿನಿಂದ ಸುರಕ್ಷಿತವಾಗಿದೆ ಎಂದು ಅವರು ತಮ್ಮ ಪಾತ್ರದ ಬಗ್ಗೆ ಎರಡು ಸಾಲುಗಳಲ್ಲಿ ವಿವರಿಸಿದರು.

ರಾಘವೇಂದ್ರ ಸ್ಟೋರ್ಸ್ ಇದನ್ನು ಒಂದೆರಡು ಕಾರಣಗಳಿಗಾಗಿ ವಿಶೇಷವಾಗಿಸುತ್ತದೆ. ಜಗ್ಗೇಶ್   ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಅನುಭವವು  ನನಗೆ ಸಹಾಯ ಮಾಡಿತು. ಖ್ಯಾತ ನಿರ್ದೇಶಕರು ಹಾಗೂ ದೊಡ್ಡ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ರಾಘವೇಂದ್ರ ಸ್ಟೋರ್ಸ್  ಚಿತ್ರ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗಲಿದೆ ಎಂದರು. 

ನಾಯಕಿಯರಿಗೆ ಉದ್ಯಮದಲ್ಲಿ ಸಮಾನ ಅವಕಾಶ ಬೇಕು ಎಂದು ಭಾವಿಸುತ್ತೇನೆ, ಇದರಿಂದ ಬರಹಗಾರರಾಗಿ,  ನಿರ್ದೇಶಕ, ನಿರ್ಮಾಪಕ ಮತ್ತು ನಟನಾಗಿ ತನ್ನ ಸೃಜನಶೀಲ ಕೆಲಸ ಮಾಡಲು ನೆರವಾಗುತ್ತದೆ ಎನ್ನುವ ಶ್ರೀ ವಾಸ್ತವ ತಮ್ಮ ಮುಂದಿನ ಚಿತ್ರ ಚಿಕ್ಕಿಯ ಮೂಗುತಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬೆಳ್ಳಿತೆರೆಗೆ ಬರಲಿದೆ ಎಂದು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT