ಚಿತ್ರದ ಸ್ಟಿಲ್. 
ಸಿನಿಮಾ ಸುದ್ದಿ

ಎಲ್ಲಾ ರೀತಿಯ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅಪ್ಡೇಟ್ ಆಗುತ್ತಿರುತ್ತೇನೆ: ನಟ ಜಗ್ಗೇಶ್

ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿರುವ ನವರಸ ನಾಯಕ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ  ನಟಿಸಿದ್ದು, ಚಿತ್ರವು ಶುಕ್ರವಾರ ಬಿಡುಗಡೆಯಾಗುತ್ತಿದೆ. ಶ್ರೀ ಗುರು ರಾಘವೇಂದ್ರ ಭಕ್ತರರಾಗಿರುವ ಜಗ್ಗೇಶ್ ಅವರಿಗೆ ಈ ಚಿತ್ರ ಬಹಳ ವಿಶೇಷವಾಗಿದೆ.

ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿರುವ ನವರಸ ನಾಯಕ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ  ನಟಿಸಿದ್ದು, ಚಿತ್ರವು ಶುಕ್ರವಾರ ಬಿಡುಗಡೆಯಾಗುತ್ತಿದೆ. ಶ್ರೀ ಗುರು ರಾಘವೇಂದ್ರ ಭಕ್ತರರಾಗಿರುವ ಜಗ್ಗೇಶ್ ಅವರಿಗೆ ಈ ಚಿತ್ರ ಬಹಳ ವಿಶೇಷವಾಗಿದೆ.

ಚಿತ್ರದ ಕುರಿತು ಮಾತನಾಡಿರುವ ಜಗ್ಗೇಶ್ ಅವರು, ಪ್ರೇಕ್ಷಕರು ಯಾವಾಗಲೂ ಹಗುರವಾದ ಮನಸ್ಥಿತಿ ಮತ್ತು ಪರಿಣಾಮಕಾರಿ ಮತ್ತು ಸಾಂದರ್ಭಕ್ಕೆ ತಕ್ಕ ಹಾಸ್ಯವನ್ನು ಬಯಸುತ್ತಾರೆ. ಒಬ್ಬ ನಟನಾಗಿ, ನನ್ನ ವೀಕ್ಷಕರನ್ನು ರಂಜಿಸುವುದು ಮತ್ತು ಅವರ ಮುಖದಲ್ಲಿ ನಗುವನ್ನು ತರಿಸುವುದು ನನ್ನ ಉದ್ದೇಶವಾಗಿದೆ. ರಾಘವೇಂದ್ರ ಸ್ಟೋರ್ಸ್‌ ಚಿತ್ರದಲ್ಲಿ ನಾನು ಅದನ್ನು ಸಾಧಿಸುತ್ತೇನೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ರಾಘವೇಂದ್ರ ಸ್ಟೋರ್ಸ್ ಚಿತ್ರ ಈ ವಾರ ಬಿಡುಗಡೆಯಾಗಲಿದ್ದು, ತಡವಾಗಿ ಮದುವೆಯಾಗುವ ಮತ್ತು ಅವನ ನಿರ್ಧಾರದಿಂದಾಗಿ ಬಹಳಷ್ಟು ಪರಿಣಾಮಗಳನ್ನು ಎದುರಿಸುವ ವ್ಯಕ್ತಿಯ ಕಥೆಯನ್ನು ಚಿತ್ರವು ಅನ್ವೇಷಿಸುತ್ತದೆ.

"ಇದು ನಿಜಕ್ಕೂ ಸೂಕ್ಷ್ಮ ಮತ್ತು ಗಂಭೀರ ಸಮಸ್ಯೆಯಾಗಿದೆ, ಆದರೆ, ನಾವು ಅದನ್ನು ಸಾಕಷ್ಟು ಹಾಸ್ಯದೊಂದಿಗೆ ಸಂಯೋಜಿಸಿದ್ದೇವೆ. ರಾಘವೇಂದ್ರ ಸ್ಟೋರ್ಸ್‌ನ ನಿಜವಾದ ಸಂಘರ್ಷ ಮದುವೆಯ ನಂತರ ಪ್ರಾರಂಭವಾಗುತ್ತದೆ. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾನೆ. ಹ್ಯಾಪಿ ಫ್ಯಾಮಿಲಿಯನ್ನು ಯಾವ ರೀತಿ ನಿರ್ಮಿಸಿಕೊಳ್ಳುತ್ತಾನೆಂಬುದು ಮತ್ತು ಕೊನೆಯಲ್ಲಿ ಒಂದು ಪ್ರಮುಖ ಸಂದೇಶವನ್ನೂ ಚಿತ್ರದಲ್ಲಿ ನೀಡಲಾಗಿದೆ. ಚಿತ್ರ ನೋಡುವ ಹೆಂಗಳೆಯರು ಸಾಕಷ್ಟು ಎಂಜಾಯ್ ಮಾಡುತ್ತಾರೆಂದು ಜಗ್ಗೇಶ್ ಅವರು ಹೇಳಿದ್ದಾರೆ.

“ರಾಘವೇಂದ್ರ ಸ್ಟೋರ್ಸ್‌ನಲ್ಲಿ ಹಯವದನ ಪಾತ್ರವನ್ನು ನಿರ್ವಹಿಸಿದ್ದೇನೆ. ನಾಯಕನ ಪಾತ್ರವನ್ನು ಸಂತೋಷ್ ಅವರು ಸುಂದರವಾಗಿ ಚಿತ್ರಿಸಿದ್ದಾರೆ. ಚಿತ್ರದ ಕೊನೆಯ ಭಾಗದಲ್ಲಿ ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗುವಂತೆ ಮಾಡುತ್ತದೆ. “ಚಿತ್ರವು ಹೆಚ್ಚಾಗಿ ಹಾಸ್ಯದ ಮೇಲೆ ಸಾಗುತ್ತದೆಯಾದರೂ, ಕೊನೆಯ 20 ನಿಮಿಷಗಳು ಎಲ್ಲರನ್ನೂ ಅಳುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ವಯಸ್ಸು, ಅನುಭವ, ಸ್ಥಿತ್ಯಂತರದಿಂದ ಮಾತ್ರ ನಾನು ಉತ್ತಮಗೊಳ್ಳಲು ಬಯಸುತ್ತೇನೆ. ಸಮಯಕ್ಕೆ ಅನುಗುಣವಾಗಿ ನಾವು ಬದಲಾಗಬೇಕೆಂಬುದನ್ನು ನಾನು ಒಪ್ಪುತ್ತೇನೆ. ಎಂದಿಗೂ ನಿಶ್ಚಲನಾಗಿರಲು ಬಯಸುವುದಿಲ್ಲ. ಅಪ್ಡೇಟ್ ಆಗುತ್ತಿರಬೇಕು. ನನ್ನ ಬಳಿಯೂ ಸಂಶೋಧನಾ ತಂಡವಿದೆ. ಆ ತಂಡ ಇತ್ತೀಚಿನ ಟ್ರೆಂಡ್ ಗಳು, ಕಥೆಗಳು ಹಾಗೂ ಪ್ರೇಕ್ಷಕರ ಸದಭಿರುಚಿಗಳನ್ನು ತಿಳಿಸುತ್ತಾರೆ. ಈ ಮಾಹಿತಿಯೊಂದಿಗೆ ನಾನು ಅಪ್ಡೇಟ್ ಆಗುತ್ತಿರುತ್ತೇನೆ. ಎಲ್ಲಾ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ನಾನು ಬಯಸುತ್ತೇನೆಂದು ಜಗ್ಗೇಶ್ ಹೇಳಿದ್ದಾರೆ.

ಚಿತ್ರವು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸಂಬಂಧಿಸಿದ್ದಾಗಿದ್ದಾಗಿದೆ ಎಂದು ಚಿತ್ರಕಥೆ ಬರೆದ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಹೇಳಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ರಾ ಅವರು, ಮಲೆನಾಡಿನ ಹಿನ್ನೆಲೆಯಲ್ಲಿ ಕಥೆಯನ್ನು ಸುಂದರವಾಗಿ ಹೆಣೆದಿದ್ದಾರೆ. ಚಿತ್ರದಲ್ಲಿ ಶ್ರೀಶ ಕುದುವಳ್ಳಿಯವರ ಛಾಯಾಗ್ರಹಣ ಮೋಡಿ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT