ತೋತಾಪುರಿ 2 ಚಿತ್ರದಲ್ಲಿ ಧನಂಜಯ್ ಮತ್ತು ಜಗ್ಗೇಶ್ 
ಸಿನಿಮಾ ಸುದ್ದಿ

ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಕಾದಾಡಲು 'ತೋತಾಪುರಿ 2' ಸಿದ್ಧ!

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ  ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಹೀಗಾಗಿ, ಆ ವಾರದಲ್ಲಿ ಯಾವುದೇ ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಆದರೆ, 'ತೋತಾಪುರಿ 2' ಸಿನಿಮಾ ಈ ಟ್ರೆಂಡ್ ಅನ್ನು ಮುರಿದು ಈಗ ಆಗಸ್ಟ್ 11ರಂದು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. 

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ  ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಹೀಗಾಗಿ, ಆ ವಾರದಲ್ಲಿ ಯಾವುದೇ ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಆದರೆ, 'ತೋತಾಪುರಿ 2' ಸಿನಿಮಾ ಈ ಟ್ರೆಂಡ್ ಅನ್ನು ಮುರಿದು ಈಗ ಆಗಸ್ಟ್ 11ರಂದು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಗೆ ಸಿದ್ಧವಾಗಿದೆ.

ವಿಜಯ ಪ್ರಸಾದ್ ನಿರ್ದೇಶಿಸಿದ ತೋತಾಪುರಿಯ ಮೊದಲ ಭಾಗವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿತ್ತು. ಸಮುದಾಯದ ಯೋಗಕ್ಷೇಮದ ಬಗೆಗಿನ ಕಥಾಹಂದರದೊಂದಿಗೆ ನಟರಾದ ಜಗ್ಗೇಶ್ ಮತ್ತು ಧನಂಜಯ್ ಚಿತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ತೋತಾಪುರಿ 2 ಚಿತ್ರ ಇದೀಗ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಸುಮನ್ ರಂಗನಾಥ್ ಕೂಡ ಇದ್ದಾರೆ.

ತೋತಾಪುರಿಯ ಮೊದಲ ಭಾಗದಲ್ಲಿ 'ಬಾಗ್ಲು ತೆಗಿ ಮೇರಿ ಜಾನ್' ಎಂಬ ಶೀರ್ಷಿಕೆಯ ಹಾಡು ಹಿಟ್ ಆಗಿತ್ತು. ಇದೀಗ ತೋತಾಪುರಿ-2 ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಧನಂಜಯ್ ಮತ್ತು ಸುಮನ್ ರಂಗನಾಥ್ ಅವರನ್ನು ಒಳಗೊಂಡಿರುವ 'ಮೊದಲ ಮಳೆ ಮನದೊಳಗೆ ಸುರಿದಿದೆ...' ಎಂಬ ಸುಮಧುರ ಗೀತೆಯನ್ನು ಸಂಜಿತ್ ಹೆಗ್ಡೆ ಹಾಡಿದ್ದು, ಈ ಹಾಡು ಈಗಾಗಲೇ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಧನಂಜಯ್ ಮತ್ತು ಸುಮನ್ ರಂಗನಾಥ್

ಈ ಚಿತ್ರವನ್ನು ಸುರೇಶ್ ಕೆಎ ನಿರ್ಮಿಸಿದ್ದು, ತೋತಾಪುರಿ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಕೆಲಸ ಭರದಿಂದ ಸಾಗಿದೆ. 'ಎರಡನೇ ಭಾಗ ರೋಮಾಂಚನಕಾರಿಯಾಗಿದೆ'. ಇದೊಂದು ತಪ್ಪಿಸಿಕೊಳ್ಳಲು ಬಯಸದ ಸಿನಿಮಾ ಅನುಭವವನ್ನು ನೀಡುತ್ತದೆ ಎನ್ನುತ್ತದೆ ಚಿತ್ರತಂಡ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್