ಬ್ಯಾಂಗ್ ಸಿನಿಮಾದಲ್ಲಿ ರಘು ದೀಕ್ಷಿತ್ 
ಸಿನಿಮಾ ಸುದ್ದಿ

‘ಬ್ಯಾಂಗ್ ಚಿತ್ರತಂಡ ನನ್ನೊಳಗಿನ ಸುಪ್ತ ನಟನನ್ನು ಹೊರತೆಗೆಯಿತು’: ಸಂಗೀತ ನಿರ್ದೇಶಕ ರಘು ದೀಕ್ಷಿತ್

ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೀಗ "ಬ್ಯಾಂಗ್" ಸಿನಿಮಾ ಮೂಲಕ ನಟನೆಗೆ ಇಳಿದಿದ್ದಾರೆ. ಆಗಸ್ಟ್ 18ರಂದು ಸಿನಿಮಾ ಬಿಡುಗಡೆಗೆ ಯೋಜಿಸಲಾಗಿದೆ. ಚಿತ್ರಕ್ಕೆ ಸಂಗೀತ ನೀಡಿರುವ ರಿತ್ವಿಕ್ ಮುರಳೀಧರ್ ಮತ್ತು ನಿರ್ದೇಶಕ ಗಣೇಶ್ ಪರಶುರಾಮ್‌ ಅವರು ಈ ಸಿನಿಮಾಗಾಗಿ ರಘು ದೀಕ್ಷಿತ್ ಅವರನ್ನು ಕರೆತಂದಿದ್ದಾರೆ. 

ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೀಗ "ಬ್ಯಾಂಗ್" ಸಿನಿಮಾ ಮೂಲಕ ನಟನೆಗೆ ಇಳಿದಿದ್ದಾರೆ. ಆಗಸ್ಟ್ 18ರಂದು ಸಿನಿಮಾ ಬಿಡುಗಡೆಗೆ ಯೋಜಿಸಲಾಗಿದೆ. ಚಿತ್ರಕ್ಕೆ ಸಂಗೀತ ನೀಡಿರುವ ರಿತ್ವಿಕ್ ಮುರಳೀಧರ್ ಮತ್ತು ನಿರ್ದೇಶಕ ಗಣೇಶ್ ಪರಶುರಾಮ್‌ ಅವರು ಈ ಸಿನಿಮಾಗಾಗಿ ರಘು ದೀಕ್ಷಿತ್ ಅವರನ್ನು ಕರೆತಂದಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದವರನ್ನು ನಟನಾ ಲೋಕಕ್ಕೆ ಕರೆತರುವಲ್ಲಿ ಈ ಇಬ್ಬರು ಮಹತ್ವದ ಪಾತ್ರ ವಹಿಸಿದ್ದಾರೆ.

'ಈ ಸಿನಿಮಾ ಪ್ರಾರಂಭದಿಂದಲೂ ರಿತ್ವಿಕ್ ಮುರಳೀಧರ್ ಮತ್ತು ಗಣೇಶ್ ಪರಶುರಾಮ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ನಿರ್ದಿಷ್ಟ ಪಾತ್ರಕ್ಕೆ ನಾನೇ ಸೂಕ್ತ ಎಂದುಕೊಂಡಿದ್ದರು ಮತ್ತು ನನ್ನನ್ನು ಈ ಚಿತ್ರಕ್ಕೆ ಕರೆತರಲು ನಿರ್ಧರಿಸಿದರು'. ನಟನೆಗೆ ಇಳಿಯುತ್ತೇನೆಂದು ನಾನೆಂದಿಗೂ ಅಂದುಕೊಂಡಿರಲಿಲ್ಲ ಎನ್ನುವ ರಘು ದೀಕ್ಷಿತ್, 'ಆಶ್ಚರ್ಯಕರವಾಗಿ, ನಾನು ಈ ಹೊಸ ಅನುಭವವನ್ನು ಸಂಪೂರ್ಣವಾಗಿ ಆನಂದಿಸಿದೆ. ಅವರು ನನ್ನೊಳಗಿನ ಈ ಸುಪ್ತ ನಟನನ್ನು ಹೊರತೆಗೆದರು. ಸಹಜವಾಗಿ, ನಾನು ಆರಂಭದಲ್ಲಿ ಆತಂಕಗಳನ್ನು ಹೊಂದಿದ್ದೆ. ಆದರೆ, ನಾನು ಆ ಪ್ರಕ್ರಿಯೆಗಳನ್ನು ಆನಂದಿಸಿದೆ. ಆದರೆ, ಚಿತ್ರ ಬಿಡುಗಡೆಯಾದಾಗ ಜನರ ಪ್ರತಿಕ್ರಿಯೆ ಏನಾಗಿರುತ್ತದೆ? ಎಂಬುದರ ಬಗ್ಗೆ ನನಗೆ ಆತಂಕವಿದೆ. ನನಗೆ ಇದು ನಿಜವಾಗಿಯೂ ಅಗತ್ಯವಿತ್ತೇ? ಎಂಬುದು ತಿಳಿಯುತ್ತದೆ ಎನ್ನುತ್ತಾರೆ. 

ರಘು ದೀಕ್ಷಿತ್ ತಮ್ಮ ಪಾತ್ರವನ್ನು ವಿವರಿಸುತ್ತಾ, 'ನಾನು ಲಿಯೋನಾ (ಶಾನ್ವಿ ಶ್ರೀವಾತ್ಸವ್) ತಂದೆಯ ಪಾತ್ರ ಮಾಡಿದ್ದೇನೆ. ಇದು ಭೂಗತ ಜಗತ್ತಿನೊಂದಿಗೆ ಥಳುಕು ಹಾಕಿಕೊಂಡಿರುವ ಪಾತ್ರವಾಗಿದೆ. ಜನರು ನನ್ನ ಗ್ಯಾಂಗ್‌ಸ್ಟರ್ ವ್ಯಕ್ತಿತ್ವವನ್ನು 'ಡ್ಯಾಡಿ' ಎಂದು ಕರೆಯುತ್ತಾರೆ ಮತ್ತು ನಾನು ಆಧುನಿಕ ಯುಗದ ರಾಬಿನ್ ಹುಡ್‌ನ ಛಾಯೆಯಲ್ಲಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ. 

ವಿವಿಧ ಆಕ್ಷನ್-ಪ್ಯಾಕ್ಡ್ ದೃಶ್ಯಗಳಲ್ಲಿ ತಮ್ಮ ತೊಡಗಿಸಿಕೊಳ್ಳುವಿಕೆ ಬಗ್ಗೆ ವಿವರಿಸುವ ಅವರು, 'ಗನ್ ಫೈಟ್ಸ್, ಕೈಯಿಂದ ಕೈಯಿಂದ ಯುದ್ಧ, ಕತ್ತಿ ಕಾಳಗಗಳು ಸೇರಿದಂತೆ ನಾನು ಎಲ್ಲದರ ಭಾಗವಾಗಿದ್ದೇನೆ. ಈ ವೈವಿಧ್ಯತೆಯು ನಿಜವಾಗಿಯೂ ಆಕರ್ಷಕವಾಗಿತ್ತು. ಚೇತನ್ ವಿನ್ಯಾಸಗೊಳಿಸಿದ ಫೈಟ್ ಕೊರಿಯೋಗ್ರಫಿಯಲ್ಲಿ ನಿರ್ದಿಷ್ಟ ದೃಶ್ಯಗಳಿಗಾಗಿ ನಾನು ತೀವ್ರವಾದ ತರಬೇತಿ ಪಡೆದಿದ್ದೇನೆ. ಮಳೆಯ ನಡುವೆಯೇ ಎಲ್ಲವನ್ನೂ ಸೆರೆಹಿಡಿದಾಗ ಅದು ಕಠಿಣವಾಗಿತ್ತು. ಆದಾಗ್ಯೂ, ನಾನು ಅಪಾರ ಆನಂದವನ್ನು ಕಂಡುಕೊಂಡೆ ಮತ್ತು ಈ ಅನುಭವವು ಹೆಚ್ಚು ಕಾಲ ಉಳಿಯಲಿ ಎನ್ನುವ ಬಯಕೆಯನ್ನು ಕಂಡುಕೊಂಡೆ' ಎನ್ನುತ್ತಾರೆ ರಘು ದೀಕ್ಷಿತ್.

ತಮ್ಮ ನಟನೆಯ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ವಿವರಿಸುವ ರಘು ದೀಕ್ಷಿತ್, 'ಅಭಿನಯದ ನೈಜ ಮೌಲ್ಯವು ತನ್ನಿಂದ ಮೂಲಭೂತವಾಗಿ ಭಿನ್ನವಾಗಿರುವ ಮತ್ತೊಂದು ವ್ಯಕ್ತಿಯ ದೃಷ್ಟಿಕೋನ ಮತ್ತು ಮನಸ್ಥಿತಿಯನ್ನು ಅಳವಡಿಸಿಕೊಳ್ಳುವ ಕ್ರಿಯೆಯಲ್ಲಿ ಕಂಡುಬರುತ್ತದೆ. ಈ ಪ್ರಕ್ರಿಯೆಯು ಭರತನಾಟ್ಯ ನೃತ್ಯದಲ್ಲಿ ನನ್ನ ಹಿಂದಿನ ತರಬೇತಿಯೊಂದಿಗೆ ಸಂಪರ್ಕ ಹೊಂದಿದೆ. ಆದರೂ, ಆ ಪಾತ್ರದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಒಂದು ಆನಂದದಾಯಕ ಸವಾಲಾಗಿತ್ತು. ನಾನು ಧೂಮಪಾನ ಮಾಡದಿದ್ದರೂ ಸಹ ಚರ್ಮದ ಜಾಕೆಟ್ ಧರಿಸಿ ಸಿಗಾರ್ ಸೇದುವುದು ಮುಂತಾದ ವಿಚಾರಗಳನ್ನು ಆನಂದಿಸಿದ್ದೇನೆ' ಎಂದು ಹೇಳುತ್ತಾರೆ.

'ಸದ್ಯಕ್ಕೆ ನನಗೆ ಬೇರೆ ಯಾವುದೇ ಸಿನಿಮಾಗಳ ಅವಕಾಶಗಳು ಬಂದಿಲ್ಲ. ಬ್ಯಾಂಗ್ ಸಿನಿಮಾ ಬಿಡುಗಡೆ ನಂತರ ಈ ಸ್ಥಿತಿಯು ಬದಲಾಗುತ್ತದೆ ಎಂದು ನಾನು ನಂಬುತ್ತೇನೆ. ಆಗ ಮಾತ್ರವೇ ನಾವು ಪರಿಸ್ಥಿತಿಯನ್ನು ನಿರ್ಣಯಿಸಬಹುದು. ನಾನು ಎರಡೂ ಸಾಧ್ಯತೆಗಳಿಗೆ ಮುಕ್ತನಾಗಿದ್ದೇನೆ. ನಟನೆಯೇ ವೃತ್ತಿಯಾಗಿ ಬದಲಾದರೂ ನಾನು ಸಂತೋಷಪಡುತ್ತೇನೆ. ಒಂದು ವೇಳೆ, ಹಾಗಿ ಆಗಿಲ್ಲದಿದ್ದರೂ ನನಗೆ ಯಾವುದೇ ವಿಷಾದವಿಲ್ಲ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT