ಸಮರ್ಜಿತ್ ಲಂಕೇಶ್ 
ಸಿನಿಮಾ ಸುದ್ದಿ

ಪುತ್ರ ಸಮರ್ಜಿತ್ ನಟನೆಯ ಚೊಚ್ಚಲ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶನ!

ಸಿನಿಮಾ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ತಮ್ಮ ತಂದೆಯ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಸಿನಿಮಾ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ತಮ್ಮ ತಂದೆಯ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. 

ಈ ಯೋಜನೆಯು ಸೆಪ್ಟೆಂಬರ್ 4ರಂದು ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಸಿನಿಮಾ ಸತ್ಯ ಘಟನೆಯಿಂದ ಪ್ರೇರಿತವಾಗಿದೆ. ಚಿತ್ರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರದ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.

ಪತ್ರಕರ್ತ ಮತ್ತು ಮಾಧ್ಯಮ ಪ್ರಕಾಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಬರಹಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ. ತುಂಟಾಟ (2002), ಲಂಕೇಶ್ ಪತ್ರಿಕೆ (2003), ಮೊನಾಲಿಸಾ (2004), ಐಶ್ವರ್ಯ (2006), ಮತ್ತು ಲುವ್ ಯು ಆಲಿಯಾ (2020) ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ 2020ರಲ್ಲಿ ಶಕೀಲಾ ಚಿತ್ರದ ಮೂಲಕ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದರು.

ಇಂದ್ರಜಿತ್ ಲಂಕೇಶ್ ಅವರನ್ನು ಹೊರತುಪಡಿಸಿ, ಸಮರ್ಜಿತ್ ಅವರ ತಾತ ಪಿ ಲಂಕೇಶ್ ಒಬ್ಬ ನಿಪುಣ ಬರಹಗಾರ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕ. ಅವರ ಚಿಕ್ಕಮ್ಮ ಕವಿತಾ ಲಂಕೇಶ್ ಅವರು ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ಸಾಧನೆಗೆ ಹೆಸರುವಾಸಿಯಾಗಿದ್ದಾರೆ. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಸಮರ್ಜಿತ್ ನಟನೆ, ಸಾಹಸ ಮತ್ತು ನೃತ್ಯದಲ್ಲಿ ತರಬೇತಿಗಾಗಿ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಹೋಗಿದ್ದರು. ಜಾಹೀರಾತು ಪ್ರಚಾರದ ಮೂಲಕ ನಟನಾ ಅನುಭವವನ್ನೂ ಪಡೆದರು.

ತನ್ನ ಮಗನ ಚೊಚ್ಚಲ ಚಿತ್ರದ ಬಿಡುಗಡೆಯನ್ನು ಗೌಪ್ಯವಾಗಿಟ್ಟಿರುವ ಇಂದ್ರಜಿತ್, ಈ ಯೋಜನೆಯನ್ನು ರೂಪಿಸಲು ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ. ನಿರ್ಮಾಣ ಸಿಬ್ಬಂದಿ, ತಾಂತ್ರಿಕ ತಂಡ ಮತ್ತು ಪಾತ್ರವರ್ಗದ ವಿವರಗಳನ್ನು ಇನ್ನೂ ಅನಾವರಣಗೊಳಿಸಬೇಕಾಗಿದೆ. ಆದರೆ, ಸಂಭಾಷಣೆ ರಚನೆಯ ಹೊಣೆಯನ್ನು ಮಾಸ್ತಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT