ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್‌ಜಿ ಸ್ಟುಡಿಯೋಸ್ ಕಾಂಬಿನೇಶನ್‌ನಲ್ಲಿ ಹೈ-ಬಜೆಟ್ ಸಿನಿಮಾ!

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

ಕೆಆರ್‌ಜಿ ಸ್ಟುಡಿಯೋಸ್‌ನೊಂದಿಗೆ ಸುದೀಪ್‌ ಕೈಜೋಡಿಸಲಿದ್ದಾರೆ ಎನ್ನುವ ಸುದ್ದಿ ಇದೀಗ ವ್ಯಾಪಕ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಮ್ಮ ಮೂಲದ ಪ್ರಕಾರ, ಸುದೀಪ್ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಇತರ ವಿವರಗಳೊಂದಿಗೆ ಯೋಜನೆಯ ಅಧಿಕೃತ ಪ್ರಕಟಣೆ ಮಾಡಲಾಗುವುದು ಎನ್ನಲಾಗಿದೆ.

ವಿತರಣಾ ಕಂಪನಿಯಾಗಿ ಪ್ರಾರಂಭವಾದ ಕೆಆರ್‌ಜಿ ಸ್ಟುಡಿಯೋಸ್, (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಮುಂದಾಳತ್ವ) 'ರತ್ನನ್ ಪ್ರಪಂಚ' ಚಿತ್ರದೊಂದಿಗೆ ನಿರ್ಮಾಣದಲ್ಲಿ ತೊಡಗಿತು. ನಂತರ 'ಗುರುದೇವ್ ಹೊಯ್ಸಳ' ಚಿತ್ರವನ್ನು ನಿರ್ಮಿಸಿತು. ಇದೀಗ ಧನಂಜಯ್ ಮತ್ತು ರಮ್ಯಾ ನಟನೆಯ ಉತ್ತರಕಾಂಡ ಸಿನಿಮಾದ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಂಸ್ಥೆ ನಿರ್ಮಿಸಿರುವ ಎಲ್ಲಾ ಸಿನಿಮಾಗಳಲ್ಲಿ ಧನಂಜಯ್ ನಾಯಕ ಎನ್ನುವುದು ವಿಶೇಷ. 

ಇದೀಗ ಸಂಸ್ಥೆಯು ಕಿಚ್ಚ ಸುದೀಪ್ ಅವರೊಂದಿಗೆ ಇದೇ ಮೊದಲ ಬಾರಿಗೆ ಹೈ-ಬಜೆಟ್ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದೆ ಎನ್ನಲಾಗಿದೆ. ಚಿತ್ರದ ನಿರ್ಮಾಪಕ ಮತ್ತು ನಟ ಯಾರೆಂಬುದು ಖಚಿತವಾಗಿದ್ದರೂ, ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದರ ಕುರಿತು ಯಾವುದೇ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಈ ಚಿತ್ರಕ್ಕೆ ಸ್ಟಾರ್ ನಿರ್ದೇಶಕರೊಬ್ಬರನ್ನು ಆಯ್ಕೆ ಮಾಡಲಾಗಿದೆ ಎಂಬ ಸುಳಿವು ಸಿಕ್ಕಿದೆ.

ಈಮಧ್ಯೆ, ವಿಜಯ್ ಕಾರ್ತಿಕೇಯ ನಿರ್ದೇಶನದ ಸುದೀಪ್ ಅವರ ಮುಂಬರುವ ಚಿತ್ರ 'ಕೆ 46'ನ ಶೀರ್ಷಿಕೆಯೂ ಈ ವಿಶೇಷ ದಿನದಂದು ಅನಾವರಣಗೊಳ್ಳಲಿದೆ. ಹೆಸರಾಂತ ತಮಿಳು ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲ್ಮ್ಸ್ ಕೂಡ ಸುದೀಪ್ ಜೊತೆ ತಮ್ಮ ಮುಂದಿನ ಚಿತ್ರ ಘೋಷಣೆ ಮಾಡುವ ನಿರೀಕ್ಷೆಯಿದೆ. ಇವುಗಳ ಹೊರತಾಗಿ, ಸುದೀಪ್ ಅವರು ವಿಕ್ರಾಂತ್ ರೋಣ ನಿರ್ದೇಶಕ ಅನುಪ್ ಭಂಡಾರಿ ಅವರ ಮುಂದಿನ 'ಬಿಲ್ಲ ರಂಗ ಬಾಷಾ' ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ಅಪರಾಧಿ ಪ್ರಜ್ಞೆಯಿಂದ ಅಮಿತ್ ಶಾ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ; ಸಂಸತ್ತನ್ನು ಎದುರಿಸುವ ಧೈರ್ಯ ಇಲ್ಲ: ರಾಹುಲ್ ಗಾಂಧಿ

ಪ್ರಧಾನಿ ಮೋದಿ ವಿಡಿಯೋ ವಿವಾದ, ಮಕ್ಕಳ ಅಶ್ಲೀಲ ಚಿತ್ರ: ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್

ಲೋಕಸಭೆಯಲ್ಲಿ 'ಬ್ಯಾಂಕರ್ ಬುಕ್ಸ್ ಎವಿಡೆನ್ಸ್ ಬಿಲ್', ರಾಜ್ಯಸಭೆಯಲ್ಲಿ 'ಸುಪ್ರೀಂ' ನ್ಯಾಯಾಧೀಶರ ಹೆಚ್ಚಳ ಮಸೂದೆ ಅಂಗೀಕಾರ!

ತೆರಿಗೆ ಪಾವತಿಯಲ್ಲೂ ಅಗ್ರಸ್ಥಾನಕ್ಕೇರಿದ Rishabh Pant; ಈ ವರ್ಷ ರಿಷಭ್ ಪಂತ್ ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?