ಅಪೂರ್ವ - ಓ ನನ್ನ ಚೇತನ ಸ್ಟಿಲ್ 
ಸಿನಿಮಾ ಸುದ್ದಿ

'ಓ ನನ್ನ ಚೇತನ' ಚಿತ್ರದ ಮೂಲಕ ನಟಿ ಅಪೂರ್ವ ನಿರ್ದೇಶನಕ್ಕೆ ಪದಾರ್ಪಣೆ

ಕ್ರೇಜಿಸ್ಟಾರ್ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ 'ಅಪೂರ್ವ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಅಪೂರ್ವ, ಸ್ಯಾಂಡಲ್​ವುಡ್​ನಲ್ಲಿ ಆ ಹೆಸರಿನಿಂದಲೇ ಫೇಮಸ್ ಆದರು. ನಟಿ ಇದೀಗ 'ಓ ನನ್ನ ಚೇತನ' ಎಂಬ ಮಕ್ಕಳ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಕ್ರೇಜಿಸ್ಟಾರ್ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ 'ಅಪೂರ್ವ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಅಪೂರ್ವ, ಸ್ಯಾಂಡಲ್​ವುಡ್​ನಲ್ಲಿ ಆ ಹೆಸರಿನಿಂದಲೇ ಫೇಮಸ್ ಆದರು. ನಟಿ ಇದೀಗ 'ಓ ನನ್ನ ಚೇತನ' ಎಂಬ ಮಕ್ಕಳ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು 'ಅಲೆಮಾರಿ' ಸಿನಿಮಾ ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ಬರೆದಿದ್ದಾರೆ.

ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಆಲ್ಬಮ್ ಮತ್ತು ಶೀರ್ಷಿಕೆ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ.

ಎಸ್ & ಎಸ್ ಬ್ಯಾನರ್ ನಿರ್ಮಿಸಿರುವ ಓ ನನ್ನ ಚೇತನ ಸನಿಮಾ ಮಕ್ಕಳ ಮೊಬೈಲ್ ಚಟಗಳ ಕುರಿತಾದ ಕಥೆಯನ್ನು ಹೊಂದಿದೆ ಮತ್ತು ಭವಿಷ್ಯದ ಪೀಳಿಗೆಯ ಬಗ್ಗೆ ಎಚ್ಚರಿಕೆ ನೀಡುತ್ತದೆ. ಹೆಚ್ಚಾಗಿ ಹೊಸಬರನ್ನು ಒಳಗೊಂಡಿರುವ ಈ ಚಿತ್ರವು ಪ್ರಸಿದ್ಧ ತಂತ್ರಜ್ಞರನ್ನು ಒಳಗೊಂಡಿದೆ. ಚಿತ್ರಕ್ಕೆ ಪ್ರದೀಪ್ ವರ್ಮಾ ಅವರ ಸಂಗೀತ ಸಂಯೋಜನೆಯಿದ್ದು, ಗುರು ಪ್ರಶಾಂತ್ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನವಿದೆ.

ಓ ನನ್ನ ಚೇತನ ಚಿತ್ರದಲ್ಲಿ ಪ್ರತೀಕ್, ಪೃಥನ್, ಬೇಬಿ ದಾನೇಶ್ವರಿ, ಡಿಂಪನಾ ಮತ್ತು ಮೋನಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್

ಪಾಕ್ ಉಗ್ರರ ರಣಬೇಟೆ: ಬಲೂಚಿಸ್ತಾನದಲ್ಲಿ 88 ಭಯೋತ್ಪಾದಕರ ಹತ್ಯೆ!

'10 Snakes' ಪೋಸ್ಟ್ ಗೆ ಶ್ರೇಷ್ಠ ಅಯ್ಯರ್‌ ಲೈಕ್, ಭಾರಿ ವಿವಾದಕ್ಕೆ ಗುರಿಯಾದ ಶ್ರೇಯಸ್ ಅಯ್ಯರ್! ನೆಟ್ಟಿಗರು ತೀವ್ರ ಚರ್ಚೆ

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video