ಟಾಕ್ಸಿಕ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಜನವರಿಯಿಂದ 'ಟಾಕ್ಸಿಕ್' ಶೂಟಿಂಗ್: ಶೃತಿ ಹಾಸನ್ ಜೊತೆ ಮೃಣಾಲ್, ಸಾಯಿಪಲ್ಲವಿ? 19ನೇ ಸಿನಿಮಾಗೆ ಯಶ್ ನಿರ್ಮಾಪಕ!

ಸ್ಯಾಂಡಲ್‌ವುಡ್‌ನಲ್ಲಿ ಟಾಕ್ಸಿಕ್ ಚಿತ್ರದ ಚರ್ಚೆ ಹೆಚ್ಚಾಗುತ್ತಿದೆ. 18 ತಿಂಗಳು ಕಾದ ಫ್ಯಾನ್ಸ್‌ಗೆ ಈ ಮೂಲಕ ಹೊಸ ಸುದ್ದಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಸಿನಿಮಾ ಕುರಿತು ಸಾಕಷ್ಟು ಕುತೂಹಲಗಳು ಕೇಳಿ ಬರುತ್ತಿವೆ.

ಸ್ಯಾಂಡಲ್‌ವುಡ್‌ನಲ್ಲಿ ಟಾಕ್ಸಿಕ್ ಚಿತ್ರದ ಚರ್ಚೆ ಹೆಚ್ಚಾಗುತ್ತಿದೆ. 18 ತಿಂಗಳು ಕಾದ ಫ್ಯಾನ್ಸ್‌ಗೆ ಈ ಮೂಲಕ ಹೊಸ ಸುದ್ದಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಸಿನಿಮಾ ಕುರಿತು ಸಾಕಷ್ಟು ಕುತೂಹಲಗಳು ಕೇಳಿ ಬರುತ್ತಿವೆ.

ಮೊನ್ನೆಯಷ್ಟೇ ತಮ್ಮ ಹೊಸ ಚಿತ್ರಕ್ಕೆ ಟಾಕ್ಸಿಕ್ ಎಂದು ಹೆಸರಿಟ್ಟು ಸಾಕಷ್ಟು ಕುತೂಹಲ ಮೂಡಿಸಿರುವ ಯಶ್, ತಮ್ಮ ಹೊಸ ಸಿನಿಮಾದ ಶೂಟಿಂಗ್ ಜನವರಿಯಿಂದ ಶುರು ಮಾಡಲಿದ್ದಾರಂತೆ. ಚಿತ್ರೀಕರಣಕ್ಕೆ ಆಗಲೇ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು, ಜನವರಿ ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎನ್ನುತ್ತಿವೆ ಮೂಲಗಳು.

ಯಶ್  ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’ ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲ ಭಾಷೆಗೂ ಸಲ್ಲುವಂತೆ ಟೈಟಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ಖಳನಾಯಕರೇ ಆಗಿದ್ದಾರೆ. ಟಾಕ್ಸಿಕ್ ಲೋಕದಲ್ಲಿ ರಾಕಿ ಭಾಯ್ ಅಬ್ಬರಿಸಲಿದ್ದಾರೆ. ಗ್ಲೋಬಲ್ ಕಂಟೆಂಟ್ ಇರೋ ಈ ಚಿತ್ರಕ್ಕೆ ಗ್ಲೋಬಲ್ ಕ್ವಾಲಿಟಿ ಕೊಡಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ದೊಡ್ಡಮಟ್ಟದಲ್ಲಿಯೇ ಇದಕ್ಕೆ ದುಡ್ಡು ಹಾಕುತ್ತಿದೆ. ರಿಲೀಸ್ ಆಗಿರುವ ಟೈಟಲ್ ಟೀಸರ್ ನಲ್ಲಿ ಅದರ ಛಾಯೆ ಕೂಡ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಡ್ರಗ್ಸ್ ಮಾಫಿಯಾ ಕುರಿತಾದ ಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕ ಗೀತು ಮೋಹನದಾಸ್. ಟೈಟಲ್ ಟೀಸರ್ ನಲ್ಲಿ ಒಂದು ಕಡೆ ಯಶ್ ಕೈಯಲ್ಲಿ ಗನ್, ಬಾಯಲ್ಲಿ ಸಿಗಾರೆ ಮತ್ತು ಅವನ ಸುತ್ತಮುತ್ತ ಪೌಡರ್ ಹಾರುತ್ತಿದೆ. ಹಾಗಾಗಿ ಇದೊಂದು ಡ್ರಗ್ಸ್ ಮಾಫಿಯಾದ ಕಥೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರದ ಮೂಲಕ ಯಶ್ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್  ಜೊತೆ ಮಾನ್ ಸ್ಟರ್ ಮೈಂಡ್ ಕ್ರಿಯೇಸನ್ಸ್‌ ಹೆಸರು ಕೂಡ ಇದ್ದು, ಈ ಸಂಸ್ಥೆಯು ಯಶ್ ಅವರದ್ದು ಎಂದು ಹೇಳಲಾಗುತ್ತಿದೆ. 2019 ರಲ್ಲಿ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಯಶ್  ನೋಂದಣಿ ಮಾಡಿದ್ದಾರೆ. ಇದೀಗ ತಮ್ಮ 19ನೇ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನ ನಿರ್ಮಾಣ ಮಾಡಲು ಯಶ್ ನಿರ್ಧಾರ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT