ಸಿನಿಮಾ ಸುದ್ದಿ

ತೆಲುಗು Biggboss ವಿಜೇತ ಪಲ್ಲವಿ ಪ್ರಶಾಂತ್ ಅಭಿಮಾನಿಗಳಿಂದ ದಾಂದಲೆ; Runner up ಅಮರ್ ದೀಪ್ ಕಾರು ಧ್ವಂಸ, ವಿಡಿಯೋ!

Vishwanath S

ನಟ ಅಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಿತು. ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇನ್ನು ಅಸಂಖ್ಯಾತ ಅಭಿಮಾನಿಗಳು ಅನ್ನಪೂರ್ಣ ಸ್ಟುಡಿಯೋಸ್‌ನ ಸೆಟ್‌ಗಳಲ್ಲಿ ಜಮಾಯಿಸಿದ್ದು ಪ್ರತಿ ವರ್ಷದಂತೆ ಸ್ಪರ್ಧಿಗಳು ನೋಡಲು ಕಾಯುತ್ತಿದ್ದರು. ಆದರೆ, ಈ ವರ್ಷ ಕೆಲವು ಸ್ಪರ್ಧಿಗಳ ಕಾರುಗಳ ಮೇಲೆ ವಿಜೇತರ ಅಭಿಮಾನಿಗಳು ಎಂದು ಹೇಳಿಕೊಂಡವರು ದಾಳಿ ಮಾಡಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇತರ ಸ್ಪರ್ಧಿಗಳ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸ್ಟುಡಿಯೋದಲ್ಲಿ ಪೊಲೀಸ್ ರಕ್ಷಣೆಯ ನಡುವೆಯೂ ಸ್ಪರ್ಧಿಗಳ ಕಾರುಗಳ ಮೇಲೆ ಅಲ್ಲಿದ್ದ ಕೆಲವರು ದಾಳಿ ನಡೆಸಿದ್ದಾರೆ. ಪಲ್ಲವಿ ವಿರುದ್ಧ ಸೋತ ನಂತರ ಆವೃತ್ತಿಯ ರನ್ನರ್ ಅಪ್ ಆಗಿದ್ದ ಅಮರ್‌ದೀಪ್ ಮತ್ತು ಅವರ ಕುಟುಂಬ ಅವರನ್ನು ಹೋಗಲು ಬಿಡುವಂತೆ ಜನರಲ್ಲಿ ಮನವಿ ಮಾಡಲು ಪ್ರಯತ್ನಿಸಿದರು. ಆದರೆ ವ್ಯಕ್ತಿಗಳು ಅವರ ಕುಟುಂಬದವರು ಇದ್ದ ಅವರ ಕಾರಿನ ಮೇಲೆ ದಾಳಿ ಮಾಡಿದ್ದಲ್ಲದೆ, ಅವರು ಹೊರಡುವ ಮೊದಲು ಹಿಂಬದಿಯ ಕಿಟಕಿ ಗಾಜು ಒಡೆದರು. ಅದಕ್ಕಿಂತ ಹೆಚ್ಚಾಗಿ, ಅವರು ಇತರ ಕೆಲವು ಮಾಜಿ ಸ್ಪರ್ಧಿಗಳ ಕಿಟಕಿ ಗಾಜುಗಳ ಮೇಲೂ ದಾಳಿ ಮಾಡಿದರು.

ಆಘಾತಕಾರಿ ಘಟನೆಯ ಹೊರತಾಗಿಯೂ, ನಟ ಅಮರದೀಪ್ ಅವರು ಯಾವುದೇ ಚಿಂತೆ ಮಾಡದೇ ಆ ರಾತ್ರಿ ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮವನ್ನಾಚರಿಸಿದ್ದಾರೆ. ಕೇಕ್ ಕತ್ತರಿಸಿ, ಧೋಲ್ ಸಂಗೀತಕ್ಕೆ ನೃತ್ಯ ಮಾಡಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ಸ್ಪರ್ಧೆಯ ಈ ಹಂತವನ್ನು ತಲುಪುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಈ ಹಂತಕ್ಕೆ ತಲುಪಲು ನನಗೆ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಮಾಸ್ ಮಹಾರಾಜ ರವಿತೇಜ ಅವರನ್ನು ಭೇಟಿಯಾಗಲು ನಾನು ಥ್ರಿಲ್ ಆಗಿದ್ದೇನೆ ಎಂದರು.

ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಮಾಜಿ ಸ್ಪರ್ಧಿಗಳಾದ ಅಶ್ವಿನಿ ಮತ್ತು ಗೀತು ರಾಯಲ್ ಕೂಡ ಉಪಸ್ಥಿತರಿದ್ದರು. ಅಮರದೀಪ್ ಮಾತ್ರವಲ್ಲ, ಪಲ್ಲವಿ ಅವರ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಜನರು ಅವರ ಕಾರುಗಳನ್ನು ಧ್ವಂಸಗೊಳಿಸಿದ್ದಾರೆ. ಅಶ್ವಿನಿ ಮತ್ತು ಗೀತು ಇಬ್ಬರೂ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರು ವಾರಗಳ ಹಿಂದೆ ಎಲಿಮಿನೇಟ್ ಆಗಿದ್ದ ಅಶ್ವಿನಿ ಐಡ್ರೀಮ್ ಮೀಡಿಯಾ ಜೊತೆ ಮಾತನಾಡುತ್ತಾ, "ಫಿನಾಲೆ ಮುಗಿದ ನಂತರ ಹೊರಗೆ ಜನಸಂದಣಿ ಇದೆ ಎಂದು ನಮಗೆ ಮೊದಲೇ ತಿಳಿಸಲಾಗಿತ್ತು. ಆದ್ದರಿಂದ ನಾವು ಫಿನಾಲೆ ಮುಗಿದ ನಂತರ ಕೆಲವು ಗಂಟೆಗಳ ಕಾಲ ಕಾಯುತ್ತಿದ್ದೆವು, ಆದರೆ ತುಂಬಾ ಜನ ಸೇರಿದ್ದು ಯಾರು ಹೋಗಿರಲಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ನಾನು ನನ್ನ ಕಾರ ಬಳಿ ಹೋಗಲು ಕಷ್ಟಪಟ್ಟೆ. ಇನ್ನು ಕಾರನ್ನು ಅವರು ಧ್ವಂಸಗೊಳಿಸಿದ್ದರಿಂದ ನನಗೆ ಬೇಸರವಾಯಿತು ಎಂದು ಹೇಳಿದ್ದಾರೆ.

ವಿಜೇತರಿಗೆ ಸಿಕ್ಕಿದ್ದೇನು?
ಪಲ್ಲವಿ ಅತಿ ಹೆಚ್ಚು ಮತ ಪಡೆದು ₹35 ಲಕ್ಷ ನಗದು ಬಹುಮಾನ ಪಡೆದರು. ಇವರು ತೆಲಂಗಾಣದ ಹಳ್ಳಿಯೊಂದರ ರೈತ ಕುಟುಂಬಕ್ಕೆ ಸೇರಿದವರು. ಕಠಿಣ ಪೈಪೋಟಿಯಲ್ಲಿ ಅಮರ್‌ದೀಪ್, ಅರ್ಜುನ್ ಅಂಬಟಿ, ಪ್ರಿಯಾಂಕಾ ಜೈನ್, ಶಿವಾಜಿ ಮತ್ತು ಪ್ರಿನ್ಸ್ ಯವರ್ ಅವರನ್ನು ಹಿಂದಿಕ್ಕಿ ಪಲ್ಲವಿ ಟ್ರೋಫಿಯನ್ನು ಗೆದ್ದಿದ್ದಾರೆ.

SCROLL FOR NEXT