ಟೋಬಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

OTTಗೆ ಬರ್ತಿದೆ ರಾಜ್ ಬಿ ಶೆಟ್ಟಿ ನಟನೆಯ ಟೋಬಿ!

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ  ರಾಜ್ ಬಿ. ಶೆಟ್ಟಿ ನಟನೆಯ  'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ, ರಾಜ್ ನಟನೆ, ಚೈತ್ರಾ ನಟನೆ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ.

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ  ರಾಜ್ ಬಿ. ಶೆಟ್ಟಿ ನಟನೆಯ  'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ, ರಾಜ್ ನಟನೆ, ಚೈತ್ರಾ ನಟನೆ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ.

ಆಗಸ್ಟ್ 25ಕ್ಕೆ 'ಟೋಬಿ' ಸಿನಿಮಾ ತೆರೆಗಪ್ಪಳಿಸಿತ್ತು. ಬಳಿಕ ಚಿತ್ರವನ್ನು ಮಲಯಾಳಂಗೂ ಡಬ್ ಮಾಡಿ ಅಲ್ಲೂ ಥ್ರಿಯೇಟ್ರಿಕಲ್ ರಿಲೀಸ್ ಮಾಡಲಾಗಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೂ ಎಲ್ಲರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಟಿ. ಕೆ ದಯಾನಂದ್ ಬರೆದ ಕಥೆಗೆ ಸ್ವತಃ ರಾಜ್‌ ಬಿ. ಶೆಟ್ಟಿ ಚಿತ್ರಕಥೆ ಬರೆದಿದ್ದರು.

ನಿರ್ದೇಶಕ ಬಾಸಿಲ್ ಆಕ್ಷನ್ ಕಟ್ ಹೇಳಿದ್ದರು. ಆದರೆ 'ಟೋಬಿ' ತೆರೆಗೆ ಬಂದು 5 ತಿಂಗಳು ಕಳೆದರೂ ಓಟಿಟಿಗೆ ಬಂದಿರಲಿಲ್ಲ. ಕೆಲವರು ಚಿತ್ರವನ್ನು ಮರೆತೇಬಿಟ್ಟಿದ್ದರು. ಅಂತೂ ಇಂತೂ 'ಟೋಬಿ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ.

ಡಿಸೆಂಬರ್ 22ಕ್ಕೆ ಸೋನಿಲಿವ್‌ನಲ್ಲಿ ಅಪ್‌ಲೋಡ್‌ ಆಗಲಿದೆ. ಅಧಿಕೃತವಾಗಿ ಈ ವಿಚಾರವನ್ನು ಸೋನಿಲಿವ್ ಸಂಸ್ಥೆ ಘೋಷಿಸಿದೆ. ಕನ್ನಡ ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಸಿನಿಮಾ ವೀಕ್ಷಕರಿಗೆ ಸಿಗಲಿದೆ.

ಟೋಬಿ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ನಿತಿನ್ ಶೆಟ್ಟಿ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

Microsoft ತಾಂತ್ರಿಕ ಸಿಬ್ಬಂದಿ ಹೆಸರಲ್ಲಿ ಅಮೆರಿಕನ್ನರಿಗೆ ವಂಚನೆ: ಬೆಂಗಳೂರಿನಲ್ಲಿ 21 ಮಂದಿ ಬಂಧನ

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

ಬಿಜೆಪಿಗೆ ಬಿಸಿ ತುಪ್ಪವಾದ ಚಿರಾಗ್ ಪಾಸ್ವಾನ್: ನಿತೀಶ್ ಅವರೇ ನಮ್ಮ ಸಿಎಂ; ನೂತನ ಸರ್ಕಾರ ಸೇರುತ್ತೇವೆ ಎಂದ ಕೇಂದ್ರ ಸಚಿವ! Video

SCROLL FOR NEXT