ದುಲ್ಕರ್ ಸಲ್ಮಾನ್ ಮತ್ತು ಯಶ್ 
ಸಿನಿಮಾ ಸುದ್ದಿ

ಕನ್ನಡದಲ್ಲಿ ನಟಿಸಲು ಇಷ್ಟ, ಯಶ್‌ ಆತಿಥ್ಯ ಎಂದೂ ಮರೆಯಲಾರೆ: ದುಲ್ಕರ್ ಸಲ್ಮಾನ್

‘ಯಶ್‌ ವಿನಯವಂತ ಮತ್ತು ಬೆಸ್ಟ್‌ ಹೋಸ್ಟ್‌. ನಾವು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದಾಗ ನನಗೆ ಮತ್ತು ನಮ್ಮಿಡೀ ತಂಡಕ್ಕೆ ಒಳ್ಳೆ ಊಟ ಕೊಟ್ಟು ಅವರು ಸತ್ಕರಿಸಿದ ರೀತಿಯನ್ನು ಮರೆಯಲಾರೆ.

ನಟ ಯಶ್‌ ಮತ್ತು ದುಲ್ಖರ್‌ ಸಲ್ಮಾನ್‌ ಆಪ್ತ ಸ್ನೇಹಿತರು. ಈ ಇಬ್ಬರು ಕಲಾವಿದರು ಮುಖತಃ ಮಾತಿಗೆ ಸಿಕ್ಕಿದ್ದು ಕೆಲವೇ ಬಾರಿಯಾದರೂ, ಸಿನಿಮಾಗಳ ವಿಚಾರದಲ್ಲಿ ಒಬ್ಬರಿಗೊಬ್ಬರು ಸಾಥ್‌ ನೀಡಿದ ಉದಾಹರಣೆಗಳಿವೆ.

ಇದೀಗ ಇದೇ ನಟ ಸ್ಯಾಂಡಲ್‌ವುಡ್‌ ಬಗ್ಗೆ ಮಾತನಾಡಿದ್ದಾರೆ. ಇಲ್ಲಿನ ಹೀರೋಗಳ ಬಗ್ಗೆಯೂ ಮನಸ್ಸಿನಾಳದಿಂದ ಉತ್ತರಿಸಿದ್ದಾರೆ. ನಟ ಯಶ್‌ ಅವರ ಆತಿಥ್ಯವನ್ನೂ ನೆನಪಿಸಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದ ದುಲ್ಖರ್‌, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಕನ್ನಡ ಸಿನಿಮಾ ಬಗ್ಗೆ ಮತ್ತು ಯಶ್‌ ಬಗ್ಗೆಯೂ ಒಂದಷ್ಟು ಪ್ರಶ್ನೆಗಳು ಅವರಿಗೆ ಎದುರಾಗಿವೆ. "ನೀವು ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದೀರಿ.. ಸದ್ಯಕ್ಕೆ ಯಾವುದಾದರೂ ಕನ್ನಡ ಸಿನಿಮಾ ಮಾಡುವ ಯೋಜನೆ ಇದೆಯೇ? ಎಂಬ ಪ್ರಶ್ನೆ ಬಂದಿತ್ತು.

ಆ ಪ್ರಶ್ನೆಗೆ ಉತ್ತರಿಸಿದ ದುಲ್ಖರ್‌, "ಖಂಡಿತ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮವು ನಿರ್ಮಿಸುತ್ತಿರುವ ಎಲ್ಲಾ ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆ ಅಷ್ಟೇ ಅಲ್ಲದೆ ಕನ್ನಡದ ನಟರು, ನಿರ್ದೇಶಕರೂ ನನಗೆ ಪರಿಚಯ. ಅವರ ಜತೆಗೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇನೆ" ಎಂದಿದ್ದಾರೆ.

ಹಾಗಾದರೆ ನಟ ಯಶ್‌ ಬಗ್ಗೆ ಏನು ಹೇಳಲು ಬಯಸುತ್ತೀರಿ? ಎಂದಾಗ.. ಮೈಸೂರಿನ ದಿನಗಳನ್ನು ಸ್ಮರಿಸಿಕೊಂಡರು. "ಯಶ್‌ ಮೈಸೂರಿನಲ್ಲಿ ತಮ್ಮ ತಂಡಕ್ಕೆ ನೀಡಿದ ಸತ್ಕಾರವನ್ನು ದುಲ್ಖರ್‌ ಸ್ಮರಿಸಿಕೊಂಡರು. ‘ಯಶ್‌ ವಿನಯವಂತ ಮತ್ತು ಬೆಸ್ಟ್‌ ಹೋಸ್ಟ್‌. ನಾವು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದಾಗ ನನಗೆ ಮತ್ತು ನಮ್ಮಿಡೀ ತಂಡಕ್ಕೆ ಒಳ್ಳೆ ಊಟ ಕೊಟ್ಟು ಅವರು ಸತ್ಕರಿಸಿದ ರೀತಿಯನ್ನು ಮರೆಯಲಾರೆ. ರಾಕಿಂಗ್‌ ಸ್ಟಾರ್‌ಗೆ ತುಂಬು ಪ್ರೀತಿ’ ಎಂದು ದುಲ್ಖರ್‌ ಉತ್ತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT