ಮಾರ್ಕ್ ಆಂಟನಿ ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮಾರ್ಕ್ ಆಂಟನಿ' ಸಿನಿಮಾ ಸೆಟ್‌ನಲ್ಲಿ ಅವಘಡ; ದೊಡ್ಡ ಅನಾಹುತದಿಂದ ತಮಿಳು ನಟ ವಿಶಾಲ್ ಪಾರು

ತಮಿಳು ನಟ ವಿಶಾಲ್ ತಮ್ಮ 'ಮಾರ್ಕ್ ಆಂಟನಿ' ಸಿನಿಮಾದ ಚಿತ್ರೀಕರಣದ ವೇಳೆ ಸಾವಿನ ಸಮೀಪದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಚೆನ್ನೈ: ತಮಿಳು ನಟ ವಿಶಾಲ್ ತಮ್ಮ 'ಮಾರ್ಕ್ ಆಂಟನಿ' ಸಿನಿಮಾದ ಚಿತ್ರೀಕರಣದ ವೇಳೆ ಸಾವಿನ ಸಮೀಪದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಸೆಟ್‌ನಲ್ಲಿದ್ದ ಟ್ರಕ್ ಸ್ಥಿರತೆಯನ್ನು ಕಳೆದುಕೊಂಡು ನಟ ಮತ್ತು ಅವರ ಸಹ-ನಟರ ಕಡೆಗೆ ಬಂದಿದೆ. ವಿಶಾಲ್ ಸೇರಿದಂತೆ ನಟರು ಇದ್ದ ಜಾಗಕ್ಕೆ ಬೃಹತ್ ಟ್ರಕ್ ಡಿಕ್ಕಿ ಹೊಡೆಯುವ ಹಂತದಲ್ಲಿತ್ತು. ಆದರೆ, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯೋಜನೆಯ ಪ್ರಕಾರ, ಟ್ರಕ್ ಗೋಡೆಗೆ ಡಿಕ್ಕಿ ಹೊಡೆದು ನಂತರ ನಿಲ್ಲಬೇಕಿತ್ತು. ಆದರೆ, ಗೋಡೆ ಕುಸಿದಿದೆ ಮತ್ತು ಟ್ರಕ್ ನಿಯಂತ್ರಣ ಕಳೆದುಕೊಂಡು ಕಲಾವಿದರು ಇರುವ ಪ್ರದೇಶದ ಕಡೆಗೆ ಮುನ್ನಡೆದೆ.

ಈ ಕುರಿತು ಟ್ವೀಟ್ ಮಾಡಿರುವ ವಿಶಾಲ್, 'ಕೆಲವೇ ಸೆಕೆಂಡುಗಳು ಮತ್ತು ಕೆಲವು ಇಂಚುಗಳ ಅಂತರದಲ್ಲಿ ನನ್ನ ಜೀವ ಉಳಿದಿದೆ. ಸರ್ವಶಕ್ತನಿಗೆ ಧನ್ಯವಾದಗಳು. ಈ ಘಟನೆಯ ನಂತರ ನಾನು ಜಡಗಟ್ಟಿದ್ದೇನೆ. ನಾನು ಮತ್ತೆ ನನ್ನ ಪಾದಗಳ ಮೇಲೆ ನಿಂತಿದ್ದೇನೆ ಮತ್ತು ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗಿದ್ದೇನೆ' ಎಂದಿದ್ದಾರೆ.

ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಎಸ್‌ಜೆ ಸೂರ್ಯ ಕೂಡ ನಟಿಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸಾಹಸ ನಿರ್ದೇಶಕ ಪೀಟರ್ ಹೆನ್ ಅವರು ದಿಲೀಪ್ ಸುಬ್ಬರಾಯನ್, ಕಮಲ್ ಕಣ್ಣನ್ ಮತ್ತು ರವಿವರ್ಮ ಅವರೊಂದಿಗೆ ಸಾಹಸ ದೃಶ್ಯಗಳನ್ನು ಮಾಡುತ್ತಿದ್ದಾರೆ.

ವಿಶಾಲ್ ಮತ್ತು ಎಸ್‌ಜೆ ಸೂರ್ಯ ಹೊರತುಪಡಿಸಿ, ಅಭಿನಯ, ರಿತು ವರ್ಮಾ ಮತ್ತು ಸುನಿಲ್ ವರ್ಮಾ ಚಿತ್ರದಲ್ಲಿ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT