ಪ್ರಭು ಗಣೇಶನ್ 
ಸಿನಿಮಾ ಸುದ್ದಿ

ತಮಿಳು ನಟ ಪ್ರಭು ಗಣೇಶನ್ ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ತಮಿಳು ನಟ ಪ್ರಭು ತೆಲುಗು, ಕನ್ನಡ ಸೇರಿದಂತೆ ಸೌತ್‌ ಸಿನಿಮಾ ಪ್ರೇಕ್ಷಕರಿಗೆ ಪರಿಚಿತರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಮಿಳು ನಟ ಪ್ರಭು ತೆಲುಗು, ಕನ್ನಡ ಸೇರಿದಂತೆ ಸೌತ್‌ ಸಿನಿಮಾ ಪ್ರೇಕ್ಷಕರಿಗೆ ಪರಿಚಿತರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಅವರನ್ನು ಚೆನ್ನೈನ ಕೋಡಂಬಾಕ್ಕಂನಲ್ಲಿರುವ ಮೆಡ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಭು ಚೆನ್ನೈನ ಆಸ್ಪತ್ರೆಗೆ ತೆರಳಿದ್ದರು. ಕೆಲ ದಿನಗಳಿಂದ ಕಿಡ್ನಿ ಸಮಸ್ಯೆ ಇದೆ. ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ ನಂತರ, ಮೂತ್ರಪಿಂಡದ ಕಲ್ಲುಗಳಿಂದ ನೋವು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಲೇಸರ್ ಸರ್ಜರಿ ಮೂಲಕ ಪ್ರಭು ಕಿಡ್ನಿ ಕಲ್ಲುಗಳನ್ನು ತೆಗೆದಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಅವರು ಚೆನ್ನೈನ ಮೆಡ್ವೇ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ವೈದ್ಯರು ಹೆಲ್ತ್ ಬುಲೆಟಿನ್ ಕೂಡ ಬಿಡುಗಡೆ ಮಾಡಿದ್ದಾರೆ.

ಪ್ರಭು ಆಸ್ಪತ್ರೆಗೆ ದಾಖಲಾದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಏನಾಯಿತು ಎಂದು ಕಳವಳ ವ್ಯಕ್ತಪಡಿಸಿದರು. ಆದರೂ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಭು ಗಂಭೀರ  ಸ್ಥಿತಿಯಲ್ಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುತ್ತಿವೆ ಚೆನ್ನೈ ಸಿನಿಮಾ ಮೂಲಗಳು. ಇನ್ನೆರಡು ಮೂರು ದಿನಗಳಲ್ಲಿ ಪ್ರಭು ಆರೋಗ್ಯವಾಗಿ ಮನೆಗೆ ಮರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶ್ರೀಲಂಕಾಗೆ ವೈಟ್ ವಾಷ್ ಭೀತಿ; ಸರಣಿ ಗೆದ್ದ ಭಾರತದ ಮಹಿಳಾ ಪಡೆ

36 ಗಂಟೆಗಳಲ್ಲಿ 80 ಡ್ರೋನ್‌; ಪಾಕ್‌ನ ನೂರ್ ಖಾನ್ ವಾಯುನೆಲೆ ನಾಶ: Operation Sindoor ಒಪ್ಪಿಕೊಂಡ Pak

ಭಾರತ ವಿಶ್ವಗುರು ಆಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲ; ಆದರೆ ಅದು ಜಗತ್ತಿಗೆ ಅವಶ್ಯಕ: RSS ಮುಖ್ಯಸ್ಥ ಭಾಗವತ್

ಉಸ್ಮಾನ್ ಹಾದಿ ಹತ್ಯೆ: ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಮೂಲಕ ಭಾರತಕ್ಕೆ ಪರಾರಿ- ಬಾಂಗ್ಲಾದೇಶ ಪೊಲೀಸ್

ಬೆಂಗಳೂರಿನ ಕೋಗಿಲು ಬಡಾವಣೆ ಅಕ್ರಮ ಮನೆಗಳ ತೆರವು: ಸ್ಥಳಕ್ಕೆ ಕೇರಳ ಸಂಸದ ಆಯ್ತು ಈಗ ಶಾಸಕನ ಭೇಟಿ

SCROLL FOR NEXT