ಲಾವಣ್ಯ ಸಾಹುಕಾರ್ ಮತ್ತು ಅಕ್ಷಿತ್ ಶಶಿಕುಮಾರ್ 
ಸಿನಿಮಾ ಸುದ್ದಿ

ಬಹುಭಾಷಾ ಆಕ್ಷನ್ ಥ್ರಿಲ್ಲರ್‌ಗಾಗಿ ಒಂದಾಗಿದ್ದಾರೆ ಅಕ್ಷಿತ್ ಶಶಿಕುಮಾರ್ ಮತ್ತು ಸತೀಶ್ ಮಲೆಂಪಟಿ

ಕಿರುಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸತೀಶ್ ಮಲೆಂಪಟಿ ಅವರು ಬಹುಭಾಷಾ ಆಕ್ಷನ್ ಥ್ರಿಲ್ಲರ್‌ನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ.

ಕಿರುಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸತೀಶ್ ಮಲೆಂಪಟಿ ಅವರು ಬಹುಭಾಷಾ ಆಕ್ಷನ್ ಥ್ರಿಲ್ಲರ್‌ನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ. ಒಂದೊಂದು ಭಾಷೆಯಲ್ಲೂ ವಿಭಿನ್ನ ಶೀರ್ಷಿಕೆಗಳಿರುವ ಈ ಚಿತ್ರಕ್ಕೆ ಕನ್ನಡದಲ್ಲಿ 'ಕಾಡಾಡಿ' ಎಂದು ಹೆಸರಿಡಲಾಗಿದೆ. ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಕೆಲವು ಸ್ಟಿಲ್‌ಗಳನ್ನು ಹಂಚಿಕೊಂಡಿದ್ದಾರೆ.

ಕೊನೆಯದಾಗಿ ಹಿಟ್ 2 ನಲ್ಲಿ ಕಾಣಿಸಿಕೊಂಡ ಲಾವಣ್ಯ ಸಾಹುಕಾರ ಅವರು ಮಹಿಳಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕಥೆಯು ಈ ನಟಿಯ ಸುತ್ತ ಸುತ್ತುತ್ತದೆ. ಚಾಂದಿನಿ ತಮಿಳರಸನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ಬೆಲ್ ಬಾಟಮ್ ನಟ, ಆರ್‌ಜೆ ಎಸ್‌ಟಿ ಸತೀಶ್ ಚಂದ್ರ, ರಾಘು ರಾಮಣ್ಣಕೊಪ್ಪ, ರವಿ ಕಾಳೆ, ತೆಲುಗು ನಟರಾದ ಪೋಸಾನಿ ಕೃಷ್ಣ ಮುರಳಿ, ಶ್ರವಣ್ ರಾಘವೇಂದ್ರ, ತಮಿಳು ನಟಿ ಮಾರಿಮುತ್ತು ಇತರರು ನಟಿಸಿದ್ದಾರೆ. ಡಿ ಯೋಗಿ ಪ್ರಸಾದ್ ಅವರ ಛಾಯಾಗ್ರಹಣದೊಂದಿಗೆ, ಸಂಯೋಜಕ ಭೀಮ್ ಸಿಸಿರೋಲಿಯೊ ಅವರ ಸಂಗೀತವಿದೆ.

'ವಿಶೇಷ ಹಾಡೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳ ಚಿತ್ರೀಕರಣವನ್ನು ನಾವು ಪೂರ್ಣಗೊಳಿಸಿದ್ದೇವೆ. ಅದಕ್ಕೆ ನಟರನ್ನು ಅಂತಿಮಗೊಳಿಸಿದ ನಂತರ ಅದನ್ನು ಚಿತ್ರೀಕರಿಸಲಾಗುವುದು' ಎಂದು ಸತೀಶ್ ಮಲೆಂಪಟಿ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT