ನಟ ವಿಜಯ್ 
ಸಿನಿಮಾ ಸುದ್ದಿ

ಮಲಯಾಳಿ ನಟಿಯೊಂದಿಗೆ ಸಂಬಂಧ: 23 ವರ್ಷಗಳ ದಾಂಪತ್ಯದಲ್ಲಿ ಬಿರುಕು! ನಟ ವಿಜಯ್ -ಸಂಗೀತಾ ವಿಚ್ಛೇದನ?

ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಹಿ ಸುದ್ದಿ ಸಿಕ್ಕಿದೆ. ‘ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಮಧ್ಯೆ ಬಿರುಕು ಮೂಡಿದೆ. ಪರಿಣಾಮ ಇಬ್ಬರು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.

ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಹಿ ಸುದ್ದಿ ಸಿಕ್ಕಿದೆ. ‘ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಮಧ್ಯೆ ಬಿರುಕು ಮೂಡಿದೆ. ಪರಿಣಾಮ ಇಬ್ಬರು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.

ನಟ ವಿಜಯ್ ಅಭಿನಯದ ಹೊಸ ಸಿನಿಮಾ ‘ವಾರಿಸು’. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸಂಗೀತಾ ಬಂದಿರಲಿಲ್ಲ. ಅಟ್ಲಿ  ಕುಮಾರ್ ಪತ್ನಿಯ ಸೀಮಂತ ಸಮಾರಂಭದಲ್ಲೂ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅಂತೆ ಕಂತೆ ಶುರುವಾಯಿತು.

ವಿಕಿಪೀಡಿಯಾ ಪೇಜ್‌ನಲ್ಲಿ ‘ವಿಜಯ್ ಹಾಗೂ ಸಂಗೀತಾ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ’ ಎಂದು ಪ್ರಕಟವಾಗಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿದರು. ಹೀಗಾಗಿ ವಿಜಯ್ - ಸಂಗೀತಾ ವಿಚ್ಛೇದನದ  ಬಗ್ಗೆ ಗುಸು ಗುಸು ಹರಿದಾಡುತ್ತಿದೆ.

ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್​ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದು ಈ ವದಂತಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಫೋಟೋದಲ್ಲಿ ವಿಜಯ್​ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್​ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್​ ಅಂತಾ ಬರೆಯಲಾಗಿದೆ.

ದಂಪತಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ವಿಚ್ಛೇದನಕ್ಕೆ ಮಲಯಾಳಿ ನಟಿಯೊಂದಿಗಿನ ವಿಜಯ್ ಸಂಬಂಧವೇ ಕಾರಣ ಎಂಬ ಗಾಸಿಪ್ ಹಬ್ಬಿದೆ. ಆದರೆ, ಮಾಧ್ಯಮವೊಂದರ ವರದಿ ಪ್ರಕಾರ, ಇವೆಲ್ಲವೂ ಸುಳ್ಳು ಎಂದು ವಿಜಯ್ ಆಪ್ತ ಮೂಲಗಳು ತಿಳಿಸಿವೆ. ಸಂಗೀತಾ ಮತ್ತು ಅವರ ಮಕ್ಕಳು ಅಮೆರಿಕದಲ್ಲಿ ಇದ್ದುದರಿಂದ ವಿಜಯ್​ ಜೊತೆ ಬಂದಿರಲಿಲ್ಲ. ಸದ್ಯದಲ್ಲೇ ಕುಟುಂಬದೊಂದಿಗೆ ಇರಲು ವಿಜಯ್​ ಸಹ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CEC 'ಮತ ಕಳ್ಳರ ರಕ್ಷಕ', ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

ಉತ್ತರಾಖಂಡ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಹತ್ತು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಗ್ರಾಮಗಳು

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)

SCROLL FOR NEXT