'ನಾಟು ನಾಟು' ಹಾಡಿನ ಸ್ಟಿಲ್ 
ಸಿನಿಮಾ ಸುದ್ದಿ

ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿಗೆ ಉಕ್ರೇನ್ ನಂಟು

2023ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ‘ಆರ್​ಆರ್​ಆರ್​’ ಸಿನಿಮಾದ 'ನಾಟು ನಾಟು' ಹಾಡು ಉಕ್ರೇನ್ ಜೊತೆ ನಂಟು ಹೊಂದಿದೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್​ನಲ್ಲಿ.

ಬೆಂಗಳೂರು: 2023ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ‘ಆರ್​ಆರ್​ಆರ್​’ ಸಿನಿಮಾದ 'ನಾಟು ನಾಟು' ಹಾಡು ಉಕ್ರೇನ್ ಜೊತೆ ನಂಟು ಹೊಂದಿದೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್​ನಲ್ಲಿ.

ಯುದ್ಧ ಶುರು ಆಗೋದಕ್ಕೂ ಮುನ್ನ ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರ ಅಧಿಕೃತ ನಿವಾಸದ ಹೊರಗೆ ಆಗಸ್ಟ್ 2021 ರಲ್ಲಿ 'ನಾತು ನಾಟು' ಹಾಡು ಚಿತ್ರೀಕರಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸುವ ಕೆಲವು ತಿಂಗಳುಗಳ ಮುನ್ನ ಈ ಹಾಡು ಚಿತ್ರೀಕರಿಸಲಾಗಿದೆ.

ತೆಲುಗಿನ 'ನಾಟು ನಾಟು' ಹಾಡಿಗೆ ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.

ಮಾರ್ಚ್ 2022 ರಲ್ಲಿ 'ಆರ್​ಆರ್​ಆರ್' ಚಿತ್ರದ ಪ್ರಚಾರದ ಸಮಯದಲ್ಲಿ, ಉಕ್ರೇನ್ ನಲ್ಲಿ ಹಾಡಿನ ಚಿತ್ರೀಕರಣವನ್ನು ನೆನೆಪಿಸಿಕೊಂಡ ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು. "ನಾವು ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು. ಈಗ ಅದು ಯುದ್ಧದ ರೂಪ ಪಡೆಯಬಹುದು ಎಂಬ ಅಂದಾಜು ಇರಲಿಲ್ಲ. ಈಗ ನಾನು ಹಿಂತಿರುಗಿ ನೋಡಿದಾಗ ಆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು" ಎಂದು ಹೇಳಿದ್ದರು.

ಉಕ್ರೇನ್​-ರಷ್ಯಾ ಯುದ್ಧ ಶುರುವಾದ ನಂತರ ಅಲ್ಲಿನ ವಾತಾವರಣ ತುಂಬ ಭೀಕರವಾಯಿತು. ಜನರು ಪ್ರಾಣ ಉಳಿಸಿಕೊಳ್ಳಲು ಸಖತ್​ ಕಷ್ಟಪಟ್ಟರು. ಉಕ್ರೇನ್​ನ ಬೃಹತ್​ ಕಟ್ಟಡಗಳ ಮೇಲೆ ಬಾಂಬ್​ ದಾಳಿ ಮಾಡಲಾಯಿತು. ನಗರಗಳು ನೆಲಸಮವಾದವು. ಅಂಥ ಪರಿಸ್ಥಿತಿ ನಿರ್ಮಾಣ ಆಗುವುದಕ್ಕೂ ಮುನ್ನ ‘ಆರ್​ಆರ್​ಆರ್​’ ಚಿತ್ರತಂಡ ಅಲ್ಲಿ ಶೂಟಿಂಗ್​ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ