ಸಿನಿಮಾ ಸುದ್ದಿ

'RRR' ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ 2023ರ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ

Sumana Upadhyaya

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಕಳೆದ ವರ್ಷ 2022ರಲ್ಲಿ ತೆರೆಕಂಡ ಆರ್ ಆರ್ ಆರ್ ಚಿತ್ರದ 'ನಾಟು ನಾಟು' ಹಾಡು 2023ರ ಗೋಲ್ಡನ್ ಗ್ಲೋಬ್ ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದಿದೆ.

ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ತೆಲುಗು ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಚಿತ್ರವು 'ಅತ್ಯುತ್ತಮ ಇಂಗ್ಲೀಷೇತರ ಚಿತ್ರ' ಎಂದು ನಾಮನಿರ್ದೇಶನಗೊಂಡಿದೆ. ಚಿತ್ರದಲ್ಲಿ ತೆಲುಗು ಟ್ರ್ಯಾಕ್ "ನಾಟು ನಾಟು" ನ್ನು ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಸಾಹಿತ್ಯ ಬರೆದಿದ್ದಾರೆ. ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕೀರವಾಣಿ ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿದರು. 

RRR 1920 ರ ದಶಕದಲ್ಲಿ ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ - ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ NTR, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಥಿಯೇಟರ್‌ನಲ್ಲಿ ಬಿಡುಗಡೆಯಾದ "RRR" ಜಾಗತಿಕ ಮಟ್ಟದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 1,200 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಆರ್ ಆರ್ ಆರ್ ನದ್ದು. ಈ ವಿಭಾಗದಲ್ಲಿ ಇತರ ನಾಮನಿರ್ದೇಶನಗಳೆಂದರೆ ವೇರ್ ದಿ ಕ್ರಾಡಾಡ್ಸ್ ಸಿಂಗ್‌ನಿಂದ ಟೇಲರ್ ಸ್ವಿಫ್ಟ್‌ನ ಕ್ಯಾರೊಲಿನಾ, ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೊದಿಂದ ಸಿಯೊ ಪಾಪಾ, ಟಾಪ್ ಗನ್‌ನಿಂದ ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್: ಮೇವರಿಕ್ ಮತ್ತು ಲಿಫ್ಟ್ ಮಿ ಅಪ್ ಫ್ರಮ್ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ ಆಗಿವೆ. RRR ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಮನ್ನಣೆಗಳನ್ನು ಗಳಿಸಿದೆ.

SCROLL FOR NEXT