ಸಿನಿಮಾ ಸುದ್ದಿ

'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ; ಮಾತೇ ಬರುತಿಲ್ಲ, ಸಂಗೀತಕ್ಕೆ ಗಡಿಯಿಲ್ಲ ಎಂದ ರಾಜಮೌಳಿ

Ramyashree GN

ಲಾಸ್ ಏಂಜಲೀಸ್: 2022ರಲ್ಲಿ ತೆರೆಕಂಡ ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡು 2023ರ ಗೋಲ್ಡನ್ ಗ್ಲೋಬ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು, ಸ್ಪೀಚ್‌ಲೆಸ್ (ಮಾತೇ ಬರುತಿಲ್ಲ) ಎಂದಿದ್ದಾರೆ.

ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ ಈ ಹಾಡು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆಯಾದಾಗಿನಿಂದ ಸೂಪರ್‌ಹಿಟ್ ಆಗಿತ್ತು.

ಸಮಾರಂಭ ಮುಗಿದ ಕೆಲವೇ ಗಂಟೆಗಳ ನಂತರ ಟ್ವೀಟ್ ಮಾಡಿರುವ ರಾಜಮೌಳಿ, 'ಮಾತೇ ಬರುತ್ತಿಲ್ಲ. ಸಂಗೀತವು ನಿಜವಾಗಿಯೂ ಯಾವುದೇ ಗಡಿಯನ್ನು ಹೊಂದಿಲ್ಲ ಎಂದಿರುವ ಅವರು, ನಾಟು ನಾಟು ಎಂಬ ಅದ್ಭುತವನ್ನು ಸೃಷ್ಟಿಸಿದ್ದಕ್ಕಾಗಿ ಅವರು ತಮ್ಮ ಸೋದರ ಸಂಬಂಧಿಯೂ ಆಗಿರುವ ಕೀರವಾಣಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮುಂದುವರಿದು, 'ಅಭಿನಂದನೆಗಳು ಮತ್ತು ನನಗೆ ನಾಟು ನಾಟು ಹಾಡನ್ನು ನೀಡಿದ್ದಕ್ಕಾಗಿ ಪೆದ್ದಣ್ಣ (ದೊಡ್ಡಣ್ಣ) ಅವರಿಗೆ ಧನ್ಯವಾದಗಳು. ಇದು ವಿಶೇಷವಾಗಿದೆ'. ನಾಟು ನಾಟು ಹಾಡು ಬಿಡುಗಡೆಯಾದಾಗಿನಿಂದ ತಮ್ಮ ಕಾಲುಗಳನ್ನು ಅಲುಗಾಡಿಸಿ ಮತ್ತು ಅದನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಹಿಂದಿನ ದಿನ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ, ಕೀರವಾಣಿ ರಾಜಮೌಳಿ ಅವರ ದೃಷ್ಟಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. 'ಈ ಪ್ರಶಸ್ತಿ ಬೇರೆಯವರಿಗೆ ಸಂದಿದ್ದು ಎಂದು ಹೇಳುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಹಾಗಾಗಿ ಈ ರೀತಿಯ ಪ್ರಶಸ್ತಿ ಬಂದಾಗ ಆ ಮಾತುಗಳನ್ನು ಹೇಳದಿರಲು ನಾನು ಯೋಜಿಸುತ್ತಿದ್ದೆ. ಆದರೆ, ನಾನು ಸಂಪ್ರದಾಯವನ್ನು ಪುನರಾವರ್ತಿಸಲು ಹೊರಟಿದ್ದೆ. ಆದರೆ ಕ್ಷಮಿಸಿ, ಆದ್ಯತೆಯ ಪ್ರಕಾರ, ಈ ಪ್ರಶಸ್ತಿಯು ನನ್ನ ಸಹೋದರ ಮತ್ತು ಚಲನಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ದೂರದೃಷ್ಟಿಗಾಗಿ ಸಂದಿದೆ. ನನ್ನ ಕೆಲಸ ಮತ್ತು ಬೆಂಬಲದ ಮೇಲಿನ ನಿರಂತರ ನಂಬಿಕೆಗೆ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ' ಎಂದಿದ್ದರು.

ಅಲ್ಲದೆ, 'ಸಂಗೀತ ನಿರ್ದೇಶಕರು, ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್, ಗೀತರಚನೆಕಾರ ಚಂದ್ರಬೋಸ್ ಮತ್ತು ಗಾಯಕರಾದ ಸಿಪ್ಲಿಗುಂಜ್ ಮತ್ತು ಭೈರವ ಅವರಿಗೆ ಧನ್ಯವಾದ ಹೇಳಿದರು. ಎನ್‌ಟಿ ರಾಮರಾವ್ ಜೂನಿಯರ್ ಮತ್ತು ರಾಮ್ ಚರಣ್ ಹಾಡಿಗೆ ಪೂರ್ಣ ತ್ರಾಣದಿಂದ ನೃತ್ಯ ಮಾಡಿದ್ದಾರೆ' ಎಂದು ಅವರು ಹೇಳಿದರು.

SCROLL FOR NEXT