ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಜೊತೆ ಎಸ್ ಎಸ್ ರಾಜಮೌಳಿ, ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ 
ಸಿನಿಮಾ ಸುದ್ದಿ

'ಈಗಷ್ಟೇ ದೇವರನ್ನು ಭೇಟಿ ಮಾಡಿದೆ': ಹಾಲಿವುಡ್ ಹಿರಿಯ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಭೇಟಿ ಮಾಡಿದ ಎಸ್ ಎಸ್ ರಾಜಮೌಳಿ

ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಅಮೆರಿಕದಲ್ಲಿ ಹಾಲಿವುಡ್‌ನ ಹಿರಿಯ ಚಿತ್ರ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದಾರೆ. 

ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಅಮೆರಿಕದಲ್ಲಿ ಹಾಲಿವುಡ್‌ನ ಹಿರಿಯ ಚಿತ್ರ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಅವರು, ನಾನು ದೇವರನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದಾರೆ. 

ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಸ್ಪೀಲ್‌ಬರ್ಗ್ ಅವರೊಂದಿಗೆ ಸಂತೋಷದಿಂದ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. 

ಈ ವರ್ಷದ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಲ ದಿನಗಳ ಹಿಂದಷ್ಟೇ ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಬಂದಿತ್ತು.  80 ದಿನ ಜಪಾನ್ ನ ಥಿಯೇಟರ್ ನಲ್ಲಿ ತೆರೆಕಂಡ ಚಿತ್ರ 31.45 ಕೋಟಿ ರೂಪಾಯಿ ಗಳಿಸಿದೆ.

ಎನ್‌ಟಿಆರ್ ಜೂನಿಯರ್ ಮತ್ತು ರಾಮ್ ಚರಣ್ ನಟಿಸಿದ ಈ ಚಿತ್ರವು ಭಾರತದಲ್ಲಿ ಅದ್ಭುತವಾದ ಬಾಕ್ಸ್ ಆಫೀಸ್ ಯಶಸ್ಸು ಕಂಡು ವಿದೇಶದಲ್ಲಿ ಕೂಡ ಜನಪ್ರಿಯವಾಗಿದೆ. ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯ ಕಿರುಪಟ್ಟಿಗೆ ಸೇರಿದೆ. ಈಗ ಚಿತ್ರಪ್ರೇಮಿಗಳ ಚಿತ್ತ ಆಸ್ಕರ್ ನಾಮನಿರ್ದೇಶನಗಳ ಮೇಲೆ ನೆಟ್ಟಿದ್ದು, ಜನವರಿ 24 ರಂದು ಘೋಷಣೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT