ರಮ್ಯಾ ಮತ್ತು ಡಾ.ಸುಧಾಕರ್ 
ಸಿನಿಮಾ ಸುದ್ದಿ

ಮೈಗಾಡ್, ಹೀರೋಗಿಂತ ನಿಮಗೇ ವಿಶಲ್ ಜಾಸ್ತಿ: ಡಾ.ಸುಧಾಕರ್ ಹೊಗಳಿದ ರಮ್ಯಾ ಮೇಲೆ 'ಕೈ'ನಾಯಕರ ಕೆಂಗಣ್ಣು; ಮೋಹಕ ತಾರೆಗೆ ಬಿಜೆಪಿ ಗಾಳ?

ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ದಲ್ಲಿ ನಟಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಬಳಿಕ ಮಾತನಾಡಿದ ರಮ್ಯಾ, ಸುಧಾಕರ್ ಅವರನ್ನು ಹೊಗಳಿದರು.

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ದಲ್ಲಿ ನಟಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಬಳಿಕ ಮಾತನಾಡಿದ ರಮ್ಯಾ, ಸುಧಾಕರ್ ಅವರನ್ನು ಹೊಗಳಿದರು.

ಸುಧಾಕರ್ ಅವರು ನನ್ನ ತಂದೆಗೆ ಮೊದಲು ಫ್ರೆಂಡ್, ಆಮೇಲೆ ನನಗೆ ಅವರು ಪರಿಚಯ ಆದರು ಎಂದು ಹೇಳಿದರು.  ಈ ವೇಳೆ ಜೋರಾಗಿ ಚಪ್ಪಾಳೆ ಹಾಗೂ ವಿಶಲ್ ಸದ್ದು ಕೇಳಿ ಬಂತು, ಇದನ್ನು ಗಮನಿಸಿದ ರಮ್ಯಾ.. ‘ಮೈ ಗಾಡಾ, ಹೀರೋಗಿಂತ ನಿಮಗೆ ಜಾಸ್ತಿ ವಿಶಲ್.. ಡಾ.ಸುಧಾಕರ್ ಅವರೇ ಎಂದರು.

ನಾವು ಸುಧಾಕರ್ ಜೊತೆ ಎಷ್ಟೇ ಹತ್ತಿರವಾಗಿದ್ದರೂ ಅವರ ಮುಂದೆ ಈ ಮಾತನ್ನು ಹೇಳಿರಲಿಲ್ಲ. ನನಗೆ ತುಂಬಾ ಹೆಮ್ಮೆ ಆಗ್ತಿದೆ. ಈ ಮಾತನ್ನು ಇಷ್ಟು ದಿನ ಹೇಳಿರಲಿಲ್ಲ. ಯಾಕಂದ್ರೆ ನಿವು ರಾಜಕೀಯ ಕುಟುಂಬದಿಂದ ಬಂದವರಲ್ಲ. ಆದರೂ ರಾಜಕೀಯಕ್ಕೆ ಬಂದು ತುಂಬಾ ಹೆಸರನ್ನು ಪಡೆದಿದ್ದೀರಿ ಖುಷಿ ಆಗುತ್ತಿದೆ ಎಂದು ಸುಧಾಕರ್ ಅವರನ್ನು ರಮ್ಯಾ ಹಾಡಿ ಹೊಗಳಿದರು. ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಅಂತ ಎಂದು ಹಾಡಿಹೊಗಳಿದ್ದರು.

ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ನಟಿ ರಮ್ಯಾ ಸಾರ್ವಜನಿಕ ವೇದಿಕೆಯಲ್ಲಿ ಬಿಜೆಪಿ ಸಚಿವರ ಬಗ್ಗೆ ಹೊಗಳಿಕೆ ಮಾತನಾಡಿದ್ದು ಕೈ ಮುಖಂಡರಿಗೆ ಇರಿಸು ಮುರುಸು ಉಂಟು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಮ್ಯಾ ಅವರ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ.

ಈ ನಡುವೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ಜೋರಾಗಿದೆ. ಜನವರಿ 7ರಿಂದ ಆರಂಭವಾಗಿ ಜನವರಿ 14ರ ವರೆಗೂ ಅದ್ಧೂರಿಯಾಗಿ ನಡೆದ ಚಿಕ್ಕಬಳ್ಳಾಪುರ ಉತ್ಸವ  ಸಂಕ್ರಾಂತಿ ಹಬ್ಬದಂದು  ಅದ್ದೂರಿಯಾಗಿ ತೆರೆಕಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT