ಸೋನಾಲ್ ಮಾಂಟೆರೊ ಮತ್ತು ತನುಷ್ ಶಿವಣ್ಣ 
ಸಿನಿಮಾ ಸುದ್ದಿ

ಮಿ. 'ನಟ್ವರ್‌ಲಾಲ್' ಆದ ಮಡಮಕ್ಕಿ, ನಂಜುಂಡಿ ಕಲ್ಯಾಣ ಖ್ಯಾತಿಯ ನಟ ತನುಷ್‌ ಶಿವಣ್ಣ

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿನಯದ 1979ರ ಹಿಂದಿ ಹಿಟ್ ಚಲನಚಿತ್ರದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಕ್ರೈಮ್-ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್‌ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿನಯದ 1979ರ ಹಿಂದಿ ಹಿಟ್ ಚಲನಚಿತ್ರದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಕ್ರೈಮ್-ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ಪ್ರಸಿದ್ಧ ಕಾನ್‌ಕಿಂಗ್, ಮಿಥಿಲೇಶ್ ಕುಮಾರ್ ಶ್ರೀವಾಸ್ತವ (1912-2009) ಅವರನ್ನು ಆಧರಿಸಿದ ಚಿತ್ರವಾಗಿದೆ. ಇವರನ್ನು ನಟ್ವರ್ ಲಾಲ್ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಚಿತ್ರವನ್ನು ವಿ ಲವ ನಿರ್ದೇಶಿಸಿದ್ದಾರೆ. ತನ್ನ ಹೈಪ್ರೊಫೈಲ್ ಕ್ರೈಮ್‌ಗಳಿಗೆ ಹೆಸರುವಾಸಿಯಾಗಿರುವ ಭಾರತೀಯ ವಂಚಕ, ತಾಜ್ ಮಹಲ್, ಕೆಂಪು ಕೋಟೆ, ರಾಷ್ಟ್ರಪತಿ ಭವನ ಮತ್ತು ಭಾರತದ ಸಂಸತ್ ಭವನವನ್ನು ಭಾರಿ ಬೆಲೆಗೆ ಮಾರಾಟ ಮಾಡಿದ್ದ.

'ನಟ್ವರ್‌ಲಾಲ್ ಅವರ ಜೀವನದ ಕೆಲವು ಘಟನೆಗಳನ್ನು ನಾವು ಚಿತ್ರದಲ್ಲಿ ಕ್ರೈಮ್ ಮತ್ತು ಆ್ಯಕ್ಷನ್ ಅಂಶಗಳೊಂದಿಗೆ ಸಂಯೋಜಿಸಿದ್ದೇವೆ' ಎಂದು ತನುಷ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ನಟ ತನುಷ್ ಹೇಳುತ್ತಾರೆ.
ಚಿತ್ರತಂಡ ಈ ಚಿತ್ರದ ಮೊದಲ ಟೀಸರ್ ಅನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದೆ ಮತ್ತು ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ತನುಷ್ ಶಿವಣ್ಣ ಜೊತೆ ನಾಯಕಿಯಾಗಿ ಸೋನಾಲ್ ಮಾಂಟೆರೊ ಕಾಣಿಸಿಕೊಳ್ಳುತ್ತಿದ್ದು, ಇವರ ಜೊತೆಗೆ ನಾಗಭೂಷಣ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಯಶ್ ಸೆಟ್ಟಿ, ಸುಧಿ, ಕೆಎಸ್ ಶ್ರೀಧರ್, ತ್ರಿವೇಣಿ ರಾವ್ ಮತ್ತು ಹಿರಿಯ ನಟಿ ಪದ್ಮಾ ವಾಸ್ಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ್ವರ್‌ಲಾಲ್ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಲವ ಬರೆದಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಖ್ಯಾತಿಯ ಡಿಒಪಿ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಧರ್ಮ ವಿಶ್ ಅವರ ಸಂಗೀತ ಮತ್ತು ಕೆ ಎಂ ಪ್ರಕಾಶ್ ಸಂಕಲನವಿದೆ. ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT