ಜೂಲಿಯೆಟ್ 2 ಟೀಸರ್ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ 
ಸಿನಿಮಾ ಸುದ್ದಿ

ಜೂಲಿಯೆಟ್ 2 ಟೀಸರ್ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೃಂದಾ ಆಚಾರ್ಯ ನಾಯಕಿಯಾಗಿರುವ 'ಜೂಲಿಯೆಟ್ 2' ಕನ್ನಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದರು.

ಬೆಂಗಳೂರು: ಇಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೃಂದಾ ಆಚಾರ್ಯ ನಾಯಕಿಯಾಗಿರುವ 'ಜೂಲಿಯೆಟ್ 2' ಕನ್ನಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದರು.

ತನ್ನ ತಂದೆಗೆ ತುಂಬಾ ಆತ್ಮೀಯಳಾಗಿರುವ ಸ್ವತಂತ್ರ ಮಹಿಳೆಯೊಬ್ಬರ (ಜೂಲಿಯೆಟ್) ಕಥೆಯನ್ನು ಚಿತ್ರ ಒಳಗೊಂಡಿದೆ. ಶ್ರದ್ಧೆ ಮತ್ತು ಕಾಳಜಿಯುಳ್ಳ ಮಗಳಾಗಿರುವ ಆಕೆ ತನ್ನ ತಂದೆಯ ಕನಸುಗಳನ್ನು ನನಸಾಗಿಸಲು ಬಯಸುತ್ತಾಳೆ. ಒಂದು ರಾತ್ರಿ, ಆಕೆಯು ತನ್ನ ಹಿಂದಿನ ಘಟನೆಗಳಿಗೆ ಮರುಸಂಪರ್ಕಿಸುವ ಭಯಾನಕ ಘಟನೆಗೆ ಸಾಕ್ಷಿಯಾಗುತ್ತಾಳೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ನಗುವಿನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮಾಡಿದ್ದ ಒಳ್ಳೆ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರ ಭಾಗವಾಗಿ  ಹೊಸ ಪ್ರತಿಭೆಗಳ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಪ್ರತೀಕಾರದ ದಾಳಿಯ ಸುತ್ತ ಕಥೆ ಸುತ್ತುತ್ತದೆ. ಆ ಕರಾಳ ಬಾಗಿಲುಗಳ ಹಿಂದಿನ ಕ್ರೂರತೆಯ ಮೇಲೆ ಜೂಲಿಯೆಟ್ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆಯೇ? ಎನ್ನುವುದು ಚಿತ್ರದ ತಿರುಳು. 

ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಲಿಕಿತ್ ಆರ್. ಕೋಟ್ಯಾನ್, ನಿರ್ದೇಶಕ ವಿರಾಟ್ ಬಿ. ಗೌಡ, ಮತ್ತು ಬೃಂದಾ ಆಚಾರ್ಯ ಮತ್ತು ಸಹನಟ ಶ್ರೀಕಾಂತ್ ರಾಯ್ ಬಡಿಗೇರ್ ಉಪಸ್ಥಿತರಿದ್ದರು.

ಚಿತ್ರವು ಇದೇ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಮತ್ತು ವಿತರಣಾ ಹಕ್ಕುಗಳು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋಸ್ ಪಾಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT