ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್ 
ಸಿನಿಮಾ ಸುದ್ದಿ

ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ; ದಾಖಲೆ ಬರೆದ ನಟ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ 

ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ, ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.

ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ, ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.

ನಮ್ಮ ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಕ್ರಾಂತಿ ಬಾಕ್ಸ್‌ ಆಫೀಸ್‌ನಲ್ಲಿ ಅಧಿಕೃತವಾಗಿ 100 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಅಲ್ಲದೆ, ಇದರ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕೂಡ ಭಾರಿ ಬೆಲೆಗೆ ಮಾರಾಟವಾಗಿವೆ ಎನ್ನಲಾಗಿದೆ. ಈನಡುವೆ ಥಿಯೇಟರ್‌ಗಳಲ್ಲಿಯೂ ಗಳಿಕೆ ಕಾಣುತ್ತಲೇ ಸಾಗಿದೆ.

ವಿ ಹರಿಕೃಷ್ಣ ಬರೆದು ನಿರ್ದೇಶಿಸಿರುವ ಕ್ರಾಂತಿಯು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಬಲವಾದ ಸಂದೇಶವನ್ನು ಹೊಂದಿರುವ ಮಾಸ್ ಮಿಶ್ರಣವಾಗಿದೆ. 

ಚಿತ್ರದ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಮಾಸ್ ಫ್ಯಾನ್ ಫಾಲೋಯಿಂಗ್ ಚಿತ್ರವು ರಾಜ್ಯದಾದ್ಯಂತ ಸಿಂಗಲ್ ಥಿಯೇಟರ್‌ಗಳಲ್ಲಿ ಅಸಾಧಾರಣ ಹಿಟ್ ಆಗಲು ಸಹಾಯ ಮಾಡಿದೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಸಹ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ದರ್ಶನ್ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರಮುಖ ಕ್ರೌಡ್ ಪುಲ್ಲರ್ ಆಗಿರುವುದರಿಂದ, ಆನ್‌ಲೈನ್ ಬುಕಿಂಗ್‌ಗೆ ಆಯ್ಕೆ ಮಾಡಿಕೊಳ್ಳುವ ಬದಲು ತಾವೇ ಟಿಕೆಟ್‌ಗಳನ್ನು ಖರೀದಿಸಲು ಜನರು ಸಾಲಿನಲ್ಲಿ ನಿಂತಿರುವುದು ಆಸಕ್ತಿದಾಯಕವಾಗಿದೆ ಎಂದು ಮೀಡಿಯಾ ಹೌಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ ಸುರೇಶ ಅವರೊಂದಿಗೆ ಚಿತ್ರವನ್ನು ನಿರ್ಮಿಸಿರುವ ಶೈಲಜಾ ಹೇಳುತ್ತಾರೆ.

ಚಿತ್ರವು ಬಿಕೆಟಿ (ಬೆಂಗಳೂರು, ಕೋಲಾರ ಮತ್ತು ತುಮಕೂರು), ಎಂಎಂಸಿಎಚ್ ಕೇಂದ್ರಗಳು (ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಹಾಸನ), ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬೆಳಗಾವಿ ಮತ್ತು ಹೈದರಾಬಾದ್-ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಹೇಳುವ ಶೈಲಜಾ, ಅಂತಿಮವಾಗಿ, ನಮ್ಮ ಪ್ರಯತ್ನಗಳು ಫಲ ನೀಡಿವೆ ಮತ್ತು ನನಗೆ ಖುಷಿಯಾಗಿದೆ. ಕ್ರಾಂತಿ ಸಿನಿಮಾವು ಯಜಮಾನ ನಂತರ ದರ್ಶನ್ ಅವರೊಂದಿಗಿನ ನಮ್ಮ ಎರಡನೇ ಚಿತ್ರವಾಗಿದೆ. ಇದು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳುತ್ತಾರೆ. 

ರವಿಚಂದ್ರನ್ ಮತ್ತು ಸುಮಲತಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ಸಂಯುಕ್ತ ಹೊರ್ನಾಡ್, ವೈನಿಧಿ ಜಗದೀಶ್ ಮತ್ತು ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕರುಣಾಕರ್ ಅವರ ಛಾಯಾಗ್ರಹಣದೊಂದಿಗೆ, ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT